ಕರ್ನಾಟಕ

karnataka

ETV Bharat / sukhibhava

ಆರೋಗ್ಯದಿಂದಿರಲು ವ್ಯಾಯಾಮ ಅಗತ್ಯ.. ಉತ್ತಮ ಫಲಿತಾಂಶಕ್ಕೆ ಎಷ್ಟು ದಿನದ ವರ್ಕ್​​ಔಟ್​ ಪ್ರಯೋಜನಕಾರಿ ಎಂಬ ಬಗ್ಗೆ ಇದ್ಯಾ ಐಡಿಯಾ?

ಈ ಅಧ್ಯಯನವೂ ವ್ಯಾಯಾಮವೂ ಮನುಷ್ಯನ ದೇಹದ ಮೇಲೆ ಹೇಗೆ ಪ್ರತಿಕ್ರಿಯೆ ತೋರುತ್ತದೆ ಎಂದು ಅರ್ಥೈಸಿಕೊಳ್ಳಲು ಮತ್ತು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ.

Any ideas on how many days of workout are beneficial for best results?
Any ideas on how many days of workout are beneficial for best results?

By ETV Bharat Karnataka Team

Published : Sep 5, 2023, 1:08 PM IST

ಸಿಡ್ನಿ: ಆರೋಗ್ಯದಿಂದ ಇರಲು ವಾರದಲ್ಲಿ ಕನಿಷ್ಠ 3 ದಿನ ವ್ಯಾಯಾಮ ಅಗತ್ಯವಾಗಿದೆ. ಒಂದು ವೇಳೆ ಇದನ್ನು ವಾರದ ಐದು ದಿನಕ್ಕೆ ತಂದು ನಿಲ್ಲಿಸಿದರೆ, ಆರೋಗ್ಯದ ಉತ್ತಮ ಪ್ರಯೋಜನವನ್ನು ಕಾಣಬಹುದು ಎಂದು ಅಧ್ಯಯನ ತಿಳಿಸಿದೆ.

ಆರೋಗ್ಯದ ಉತ್ತಮ ಪ್ರಯೋಜನವನ್ನು ಪಡೆಯಲು ವಾರದಲ್ಲಿನ ಮತ್ತೆರಡು ದಿನ ಹೆಚ್ಚುವರಿಯಾಗಿ ವ್ಯಾಯಾಮ ಮಾಡುವ ಇಚ್ಛಾಶಕ್ತಿಯನ್ನು ತೋರಬೇಕಿದೆ ಎಂದು ಅಧ್ಯಯನದ ಫಲಿತಾಂಶವು ತಿಳಿಸುತ್ತದೆ. ಈ ಅಧ್ಯಯನವು ವ್ಯಾಯಾಮವು ಮನುಷ್ಯನ ದೇಹದ ಮೇಲೆ ಹೇಗೆ ಪ್ರತಿಕ್ರಿಯೆ ತೋರುತ್ತದೆ ಎಂದು ಅರ್ಥೈಸಿಕೊಳ್ಳಲು ಮತ್ತು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ.

ನಮ್ಮ ಈ ಹಿಂದಿನ ಅಧ್ಯಯನದಲ್ಲಿ ನಿಯಮಿತ ಸಣ್ಣ ವ್ಯಾಯಾಮಗಳು ವಾರದ ಒಂದು ಅಥವಾ ಎರಡು ದೊಡ್ಡ ತರಬೇತಿ ಸೆಷನ್​ಗಿಂತ ಹೆಚ್ಚು ಪ್ರಯೋಜನ ಎಂದು ತೋರಿಸಿತು ಎಂದು ಅಧ್ಯಯನದ ಪ್ರಮುಖ ಲೇಖಕ ಪಾಶ್ಚಿಮಾತ್ಯ ಆಸ್ಟ್ರೇಲಿಯಾದ ಎಡಿತ್​ ಕೊವನ್​ ಯುನಿವರ್ಸಿಟಿಯ ಕೆನ್​ ನೊಸಕ ತಿಳಿಸಿದ್ದಾರೆ.

ಕನಿಷ್ಠ ವ್ಯಾಯಾಮದಿಂದಲೂ ಅರ್ಥಪೂರ್ಣ ಪ್ರಯೋಜನವನ್ನು ಎಲ್ಲಿಂದ ಶುರು ಮಾಡಬೇಕು ಎಂಬ ಸರಿಯಾದ ಅಂಶದ ಕುರಿತು ನಮಗೆ ಈಗ ಸ್ಪಷ್ಟವಾದ ಐಡಿಯಾ ಇದೆ ಎಂದು ನೊಸಕ ತಿಳಿಸಿದ್ದಾರೆ.

ಈ ಅಧ್ಯಯನವನ್ನು ಯುರೋಪಿಯನ್​ ಜರ್ನಲ್​ ಆಫ್​ ಅಪ್ಲೈಡ್​ ಸೈಕಾಲಾಜಿಯಲ್ಲಿ ಪ್ರಕಟಿಸಲಾಗಿದೆ. ಭಾಗಿದಾರರು ಮೂರು ಸೆಕೆಂಡ್​ ಪ್ರದರ್ಶನ ಮಾಡುವುದು. ಭಾರವಾದ ಡಂಬೆಲ್​ ಅನ್ನು ನಿಧಾನವಾಗಿ ನೇರ ತೋಳುಗಳ ಮೂಲಕ ಕೆಳಗೆ ಇಳಿಸುವ ಟಾಸ್ಕ್​ ನೀಡಲಾಗಿದೆ. ಈ ಮೂಲಕ ಬೈಸೆಪ್​​ ಸಂಕೋಚನಕ್ಕೆ ಹೆಚ್ಚಿನ ಶಕ್ತಿ ವ್ಯಯಿಸಲಾಗಿದೆ.

ಭಾಗಿದಾರರನ್ನು ಎರಡು ಗುಂಪುಗಳಾಗಿ ಅಧ್ಯಯನ ನಡೆಸಲಾಗಿದೆ. ಮೊದಲ ಗುಂಪನ್ನು ಸಿಂಗಲ್​ ತ್ರಿ ಸೆಕೆಂಡ್​ ಅಭ್ಯಾಸವನ್ನು ವಾರದ ಎರಡು ದಿನ ನಡೆಸಲಾಗಿದೆ. ಎರಡನೇ ಗುಂಪು ವಾರದಲ್ಲಿ ಮೂರು ದಿನ ಅದೇ ವ್ಯಾಯಾಮವನ್ನು ಪ್ರದರ್ಶಿಸಿದೆ.

ನಾಲ್ಕನೇ ವಾರದ ಬಳಿಕ ಸಂಶೋಧಕರು ಭಾಗಿದಾರರ ಬೈಸೆಪ್​​ ಶಕ್ತಿಯನ್ನು ಹೋಲಿಕೆ ಮಾಡಿದ್ದಾರೆ. ವಾರದಲ್ಲಿ ಎರಡು ದಿನ ವ್ಯಾಯಾಮ ಮಾಡಿದವರಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿಲ್ಲ. ಆದಾಗ್ಯೂ ಮೂರು ದಿನದ ಗುಂಪಿನಲ್ಲಿ ಸಣ್ಣ ಆದರೆ, ಗಮನಾರ್ಹ ಮಟ್ಟದಲ್ಲಿ ಶಕ್ತಿ ಬದಲಾವಣೆ ಕಂಡು ಬಂದಿದೆ. ಆದಾಗ್ಯೂ ವಾರದಲ್ಲಿ ನಾಲ್ಕು ದಿನ ವ್ಯಾಯಾಮ ನಡೆಸಿದವರಲ್ಲಿ ಸ್ನಾಯು ಶಕ್ತಿಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ:World Spinal Cord Injury Day: ಭಾರತದಲ್ಲಿ ಶೇ 15-20 ಬೆನ್ನು ಮೂಳೆ ಸಮಸ್ಯೆಗೆ ಕಾರಣ ರಸ್ತೆ ಅಪಘಾತ; ವೈದ್ಯರು

ABOUT THE AUTHOR

...view details