ಲಂಡನ್(ಇಂಗ್ಲೆಂಡ್): ಕಲೆ ಎಂಬುದು ಅನೇಕ ರೋಗಗಳಿಗೆ ಚಿಕಿತ್ಸೆ ಎಂಬುದು ಈಗಾಗಲೇ ಅನೇಕ ವಿಷಯದಲ್ಲಿ ಸಾಬೀತಾಗಿದೆ. ಅದರಲ್ಲೂ ಒತ್ತಡ, ಖಿನ್ನತೆ ಮತ್ತು ಏಕಾಂತದಂತಹ ಭಾವನೆಗಳ ವಿರುದ್ಧ ಇದು ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆ ಇಂತಹ ಆಲೋಚನೆಗಳು ಬಂದಾಗ ಕಲೆಗಳತ್ತ ಹೊರಳುವಂತೆ ವೈದ್ಯರುಗಳು ಸಲಹೆ ನೀಡುತ್ತಾರೆ. ಇದರಿಂದ ಔಷಧವಿಲ್ಲದೇ, ನೋವನ್ನು ಉಪಶಮನ ಮಾಡಬಹುದು. ಈ ನಿಟ್ಟಿನಲ್ಲಿ ಇದೀಗ ಮತ್ತೊಂದು ಹೊಸ ಅಧ್ಯಯನವೊಂದು ಕಲೆ ಆಧಾರಿತ ಚಿಕಿತ್ಸೆಗಳು ವ್ಯಕ್ತಿಯ ಯೋಗಕ್ಷೇಮ, ಜೀವನಮಟ್ಟ, ಕಾರ್ಯಾಚರಣೆ ಸಂವಹನ ಮತ್ತು ಸಾಮಾಜಿಕ ಭಾಗವಹಿಸುವಿಕೆಗೆ ಮೇಲಿನ ಪರಿಣಾಮ ಕುರಿತು ಯುನಿವರ್ಸಿಟಿ ಆಫ್ ಎಕ್ಸೆಟೆರ್ ಸಂಶೋಧಕರ ತಂಡ ಅಧ್ಯಯನ ನಡೆಸಿದೆ. ಈ ಅಧ್ಯಯನವನ್ನು ಬಿಎಂಜೆ ಒಪನ್ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕಾಗಿ ಸಂಶೋಧಕರು, 171 ಅಧ್ಯಯನ ನಡೆಸಿದ್ದು, ಅದರಲ್ಲಿ 12 ಸ್ಕ್ರೀನಿಂಗ್ ಮಾನದಂಡಗಳನ್ನು ಮುಟ್ಟಿದೆ.
ಆತಂಕ ಮತ್ತು ಒತ್ತಡ ಹೊಂದಿರುವ 669 ಭಾಗಿದಾರರ ಮೇಲೆ 2004ರಿಂದ 2021ರ ವರೆಗೆ ಈ ಅಧ್ಯಯನ ನಡೆಸಲಾಗಿದೆ. 9 ದೇಶಗಳಲ್ಲಿ ಐದು ಕಲೆಗಳ ಪ್ರದರ್ಶನದ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಈ ಐದು ಕಲಾ ಪ್ರಕಾರಗಳು ಎಂದರೆ, ನೃತ್ಯ ಸಂಗೀತ ಚಿಕಿತ್ಸೆ, ಕಲೆ ಚಿಕಿತ್ಸೆ, ಮಾರ್ಷಲ್ ಆರ್ಟ್ ಆಧಾರಿತ ಚಿಕಿತ್ಸೆ ಮತ್ತು ಥಿಯೇಟರ್. ಇದರಲ್ಲಿ ನೃತ್ಯ ಅತಿ ಹೆಚ್ಚು ಅಧ್ಯಯನ ನಡೆಸಿದ ಕಲಾ ಪ್ರಕಾರವಾಗಿದೆ. ಇವು ಒತ್ತಡ ಮತ್ತು ಖಿನ್ನತೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.