ಬೀಜಿಂಗ್: ಕೋವಿಡ್ಗಿಂತ ಹೆಚ್ಚು ಮಾರಣಾಂತಿಕವಾಗಿರುವ ಮತ್ತೊಂದು ಸಾಂಕ್ರಾಮಿಕ ಖಾಯಿಲೆ ಭವಿಷ್ಯದಲ್ಲಿ ಎದುರಾಗಬಹುದು ಎಂದು ಚೀನಾದ ಬ್ಯಾಟ್ವುಮನ್ ಎಂದೇ ಖ್ಯಾತಿ ಪಡೆದಿರುವ ವೈರಾಲಜಿಸ್ಟ್ ಶಿ ಝೆಂಗ್ಲಿ ತಿಳಿಸಿದ್ದಾರೆ. ಅಧ್ಯಯನದಲ್ಲಿ ಶಿ ಮತ್ತು ಅವರ ಸಹೋದ್ಯೋಗಿಗಳು ವುಹಾನ್ ವೈರಾಲಾಜಿ ಸಂಸ್ಥೆಯಿಂದ ಮಾನವನಿಗೆ ಅಪಾಯವಾಗುವ 40 ಪ್ರಭೇದದ ಕೊರೊನಾ ವೈರಸ್ ಉಗಮದ ಕುರಿತು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಸೋಂಕು ಅಪಾಯ: ಜುಲೈನಲ್ಲಿ ಪ್ರಕಟವಾದ ಎಮರ್ಜಿಂಗ್ ಮೈಕ್ರೋಬ್ಸ್ ಆ್ಯಂಡ್ ಇನ್ಫೆಕ್ಷನ್ ವರದಿಯ ಫಲಿತಾಂಶದಲ್ಲಿ, 20 ಹೆಚ್ಚಿನ ಅಪಾಯದ ಕೊರೊನಾ ವೈರಸ್ ಪ್ರಭೇದವನ್ನು ಗುರುತಿಸಿದ್ದಾರೆ. ಕೊರೊನಾ ವೈರಸ್ ರೋಗಗಳು ಹೊರಹೊಮ್ಮಲು ಇದು ಕಾರಣವಾಗಿದ್ದರೂ ಅದು ಭವಿಷ್ಯದಲ್ಲಿ ಏಕಾಏಕಿ ಸೋಂಕಿನ ಹೆಚ್ಚಳಕ್ಕೆ ಅವಕಾಶವಾಗಲಿದೆ ಎಂದು ತಿಳಿಸಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದೆ.
40 ಜಾತಿಯ ಸೋಂಕಿನಲ್ಲಿ ಆರು ಈಗಾಗಲೇ ಮನುಷ್ಯರಿಗೆ ರೋಗದ ಅಪಾಯಕ್ಕೆ ಕಾರಣವಾಗಿದೆ. ಇನ್ನುಳಿದ ಭವಿಷ್ಯದ ಮೂರು ಸೋಂಕುಗಳು ಮಾನವರು ಅಥವಾ ಪ್ರಾಣಿ ಪ್ರಭೇದಕ್ಕೆ ಹಾನಿ ಮಾಡಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ರೀತಿಯಲ್ಲಿಯೇ ಮತ್ತೊಂದು ಸೋಂಕು ಉಲ್ಬಣವಾಗುವುದು ಬಹುತೇಕ ಖಚಿತ ಎಂದು ಅಧ್ಯಯನ ಹೇಳುತ್ತಿದೆ.
ಜನಸಂಖ್ಯೆ, ಆನುವಂಶಿಕ ವೈವಿಧ್ಯತೆ, ಆತಿಥೇಯ ಪ್ರಭೇದಗಳು ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು ಯಾವುದೇ ಹಿಂದಿನ ಇತಿಹಾಸ ಸೇರಿದಂತೆ ವೈರಲ್ ಗುಣಲಕ್ಷಣಗಳ ವಿಶ್ಲೇಷಣೆಯನ್ನು ಈ ಅಧ್ಯಯನ ಆಧರಿಸಿದೆ ಎಂದು ಎಸ್ಸಿಎಂಪಿ ತಿಳಿಸಿದೆ.