ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಪರಿಸರ ತಜ್ಞರು ಸೇರಿದಂತೆ ವಿಜ್ಞಾನಿಗಳು ಜಗತ್ತಿಗೆ ಎಚ್ಚರಿಕೆ ಮೂಡಿಸುತ್ತಲೇ ಇದ್ದಾರೆ. ಇದೀಗ, ಹವಾಮಾನ ಬದಲಾವಣೆ ಕುರಿತು ಭಾರತ ಮೂಲದ ವ್ಯಕ್ತಿಯೊಬ್ಬರು ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಭಿನ್ನ ರೀತಿಯಲ್ಲಿ ಜಗತ್ತಿನ ಗಮನ ಸೆಳೆಯಲು ಮುಂದಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಏನಿದು ಘಟನೆ?: ಯುಎಸ್ ಓಪನ್ ಟೂರ್ನಿಯ ಸಂದರ್ಭದಲ್ಲಿ ಜಗತ್ತಿಗೆ ಹವಾಮಾನ ಬದಲಾವಣೆ ಕುರಿತು ಜಗತ್ತಿನ ಜನರ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಒಳನುಗ್ಗಿ ಅರ್ಧ ಗಂಟೆ ಹೈಡ್ರಾಮ ನಡೆಸಿದ ಪ್ರಸಂಗ ನಡೆಯಿತು.
ಸೆಪ್ಟೆಂಬರ್ 7ರಂದು ಅಮೆರಿಕದ ಕೊಕೊ ಗೌಪ್ ಮತ್ತು ಜೆಕ್ ಕರೋಲಿಯಾ ಮುಚೋವಾ ನಡುವಿನ ವೇಳೆ ಪಂದ್ಯಾವಳಿಯಲ್ಲಿ ಈ ಅಡ್ಡಿಯುಂಟಾಗಿದೆ. ಪಂದ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಭಾರತದ ಮೂಲದ ಸಯಕ್ ಮುಖೋಪಾಧ್ಯಾಯ ಎಂದು ಗುರುತಿಸಲಾಗಿದೆ. 50 ವರ್ಷದ ಮುಖ್ಯೋಪಾಧ್ಯಾಯರನ್ನು ಇದೀಗ ಬಂಧಿಸಲಾಗಿದೆ.
ಕ್ರೀಡೆ ನಡೆಯುತ್ತಿದ್ದ ಸಂದರ್ಭದಲ್ಲಿ ಶೂ ಬಿಚ್ಚಿ ಅಂಗಣಕ್ಕೆ ಜಿಗಿದ ಮುಖ್ಯೋಪಾಧ್ಯಾಯ No Tennis On A Dead Planet (ಸತ್ತ ಗ್ರಹದಲ್ಲಿ ಟೆನಿಸ್ ಇಲ್ಲ) End fossil fuels (ಪಳೆಯುಳಿಕೆ ಇಂಧನಗಳನ್ನು ಕೊನೆಗೊಳಿಸಿ) ಎಂದು ಘೋಷಣೆ ಕೂಗಿದರು. ತಕ್ಷಣ ಪೊಲೀಸರು ಆಗಮಿಸಿ ಅವರನ್ನು ಎಳೆದೊಯ್ಯುವ ಯತ್ನ ನಡೆಸಿದರು. ಇದರಿಂದ ಪಂದ್ಯಕ್ಕೆ 50 ನಿಮಿಷ ಅಡ್ಡಿಯುಂಟಾಯಿತು.