ಕರ್ನಾಟಕ

karnataka

By ETV Bharat Karnataka Team

Published : Nov 13, 2023, 1:46 PM IST

ETV Bharat / sukhibhava

ಚಳಿಗಾಲದಲ್ಲಿ ಕಾಡುವ ಕೂದಲಿನ ಸಮಸ್ಯೆಗೆ ನೆಲ್ಲಿಕಾಯಿಯಲ್ಲಿದೆ ಪರಿಹಾರ

ನೆಲ್ಲಿಕಾಯಿ ನೈಸರ್ಗಿಕವಾಗಿ ಅಂಶಗಳು ಕೂದಲನ್ನು ಒಳಗಿನಿಂದಲೇ ಬಲವಾಗಿಸುವಲ್ಲಿ ಸಹಾಯ ಮಾಡುತ್ತದೆ.

amla-gives-solution-for-winter-hair-problem
amla-gives-solution-for-winter-hair-problem

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ತ್ವಚೆಯ ಬಿರುಯುವಿಕೆ. ಈ ಋತುಮಾನದಲ್ಲಿ ತ್ವಚೆ ಶುಷ್ಕತೆ​ ಅನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಚರ್ಮವೂ ನಿಸ್ತೇಜವಾಗಿ ಕಾಣುತ್ತದೆ. ಇದರ ಹೊರತಾಗಿ ಕಾಡುವ ಮತ್ತೊಂದು ಸಮಸ್ಯೆ ಎಂದರೆ ಕೂದಲಿನ ಸಮಸ್ಯೆ. ಚಳಿಗಾಲದಲ್ಲಿ ಕೂದಲು ಕೂಡ ಪೋಷಕಾಂಶವನ್ನು ಕಳೆದುಕೊಳ್ಳುತ್ತವೆ. ಈ ಹಿನ್ನೆಲೆ ಕೂದಲಿನ ಆರೈಕೆಗೂ ಹೆಚ್ಚಿನ ಕಾಳಜಿ ವಹಿಸಬೇಕಿದೆ.

ಚಳಿಗಾಲದಲ್ಲಿನ ಧೂಳು- ಪ್ರದೂಷಣೆಯಿಂದ ಕೂದಲು ಬಲು ಬೇಗ ಒಣಗಿದಂತೆ ಬಾಸವಾಗುತ್ತವೆ. ಅಲ್ಲದೇ, ಬೇಗ ಕಾಂತಿಹೀನವಾಗುತ್ತವೆ. ಈ ಹಿನ್ನೆಲೆ ಇದಕ್ಕಾಗಿ ಹೆಚ್ಚಿನ ಕಾಳಜಿ ವಹಿಸಬೇಕಿದೆ. ನೆಲ್ಲಿಕಾಯಿ ನೈಸರ್ಗಿಕವಾಗಿ ಅಂಶಗಳು ಕೂದಲನ್ನು ಒಳಗಿನಿಂದಲೇ ಬಲವಾಗಿಸುವಲ್ಲಿ ಸಹಾಯ ಮಾಡುತ್ತವೆ. ಅಂತಹ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.

ಕೂದಲಿನ ಆರೋಗ್ಯ: ನೆಲ್ಲಿಕಾಯಿಯು ಕೂದಲಿಗೆ ಅದ್ಭುತ ಆರೋಗ್ಯ ನೀಡುವಲ್ಲಿ ಸದಾ ಮುಂದಿರುತ್ತದೆ. ಈ ಹಿನ್ನೆಲೆ ಆರು ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಬೆರಸಿ ಅದನ್ನು ಚೆನ್ನಾಗಿ ಕುದಿಸಿ. ನೆಲ್ಲಿಕಾಯಿ ಮೃದುವಾದ ಬಳಿಕ ಅದರ ಬೀಜವನ್ನು ತೆಗೆದು ಪೇಸ್ಟ್​ ಮಾಡಿ. ಈ ಪೇಸ್ಟ್​ ಅನ್ನು ಕೂದಲ ಬುಡಕ್ಕೆ ಹಚ್ಚಿ. 15 ನಿಮಿಷದ ಬಳಿಕ ತಲೆ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ನೆಲ್ಲಿಕಾಯಿಯ ಹುಳಿ ಅಂಶ ಕೂದಲಿನ ಬುಡದಲ್ಲಿ ಇರುವ ಸಂಪೂರ್ಣ ಕೊಳೆಯನ್ನು ನಿವಾರಿಸುತ್ತದೆ. ಅಲ್ಲದೇ, ಕೂದಲು ಹೊಳೆಯುವಂತೆ ಮಾಡುತ್ತದೆ. ವಾರದಲ್ಲಿ ಎರಡು ದಿನ ಈ ರೀತಿ ನೆಲ್ಲಿ ಕಾಯಿ ಪೇಸ್ಟ್​​ ಹಚ್ಚುವುದರಿಂದ ಕೂದಲಿನ ಕಿರುಚೀಲಗಳು ಆರೋಗ್ಯಯುತವಾಗುತ್ತವೆ.

ಹೊಟ್ಟಿನ ಸಮಸ್ಯೆಗೆ ಮುಕ್ತಿ:ಚಳಿಗಾಲದಲ್ಲಿ ನೆಲ್ಲಿಕಾಯಿಯು ಹೆಚ್ಚಾಗಿ ಲಭ್ಯವಾಗುತ್ತದೆ. ಈ ನೆಲ್ಲಿಕಾಯಿಯಲ್ಲಿ ಹೆಚ್ಚಾಗಿ ವಿಟಮಿನ್​ ಸಿ ಮತ್ತು ಇ, ಫಾಸ್ಪರಸ್,​ ಕಬ್ಬಿಣ, ಕ್ಯಾಲ್ಸಿಯಂ, ಫೈಬರ್​, ಆ್ಯಂಟಿಆಕ್ಸಿಡೆಂಟ್​ ಮುಂತಾದ ಅಂಶ ಇರುತ್ತದೆ. ವಿಟಮಿನ್​ ಇ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇತರೆ ಆ್ಯಂಟಿ ಆಕ್ಸಿಡೆಂಟ್​ಗಳು ಕೂದಲಿನ ಕಿರುಚೀಲವನ್ನು ಆರೋಗ್ಯವಾಗಿಡುತ್ತವೆ. ಇದರಿಂದ ಕೂದಲಿನಲ್ಲಿ ಕಾಡುವ ಹೊಟ್ಟಿನ ಸಮಸ್ಯೆ ಸಹ ಕಡಿಮೆಯಾಗುತ್ತದೆ. ಅಲ್ಲದೇ ಕೂದಲು ಕಪ್ಪಾಗಿ ಹೊಳೆಯುವಂತೆ ಮಾಡುತ್ತದೆ.

ನೆಲ್ಲಿಕಾಯಿಯಲ್ಲಿನ ವಿಟಮಿನ್ ಸಿ ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸುತ್ತದೆ. ಇದು ರಕ್ತ ಶುದ್ಧಿಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಕೂದಲ ಬೆಳವಣಿಗೆಗೆ ಸಹಾಯ ಆಗುತ್ತದೆ. ನೆಲ್ಲಿಕಾಯಿಯು ಕೇವಲ ಕೂದಲು ಮತ್ತು ತ್ವಚೆಗೆ ಮಾತ್ರ ಉತ್ತಮ ಪ್ರಯೋಜನ ನೀಡದೇ ಒಟ್ಟಾರೆ ಆರೋಗ್ಯದ ಮೇಲೆ ಪ್ರಯೋಜನವನ್ನು ಹೊಂದಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ತಪ್ಪದೇ ಕ್ಯಾರೆಟ್​ ಹಲ್ವಾ ತಿನ್ನಬೇಕಂತೆ; ಇದರ ಹಿಂದಿನ ಗುಟ್ಟು ಏನ್​ ಗೊತ್ತಾ?

ABOUT THE AUTHOR

...view details