ನ್ಯೂಯಾರ್ಕ್: ವಯಸ್ಸಾದಂತೆ ಬಿಳಿ ಕೂದಲು ಆಗುವುದು ಸಹಜ. ಆದರೆ, ವಯಸ್ಸಿಗೆ ಮುಂಚೆ ಕೆಲವರಿಗೆ ಈ ಬಿಳಿ ಕೂದಲಿನ ಸಮಸ್ಯೆ ಕಾಡುತ್ತದೆ. ಯುವಜನತೆಯಲ್ಲೂ ಕಾಡುವ ಬೂದು ಬಣ್ಣದ ಸಮಸ್ಯೆ ಅವರಲ್ಲಿ ಚಿಂತೆ ಮೂಡಿಸದೇ ಇರಲಾರದು. ಪರಿಸರಾತ್ಮಕ ಕಾರಣಗಳ ಹೊರತಾಗಿ ಕೂದಲು ಬೂದು ಬಣ್ಣಕ್ಕೆ ತಿರುಗಲು ಕಾರಣ ಏನು ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಅದರ ಅನುಸಾರ ಬೂದು ಕೂದಲಿಗೆ ಕಾಂಡ ಕೋಶಗಳು ಕಾರಣ ಎಂದು ಅಮೆರಿಕದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕುರಿತು ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನವನ್ನು ನೇಚರ್ ಜರ್ನಲ್ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ.
ಮೆಲನೊಸೈಟ್ ಕಾಂಡಕೋಶ: ಕೂದಲಿನ ಕಿರುಚೀಲಗಳನ್ನು ಹೊಂದಿದ್ದು, ಅದು ಚರ್ಮದ ಕೋಶಗಳನ್ನು ರೂಪಿಸುವ ಸಣ್ಣ ಚೀಲಗಳಾಗಿವೆ. ಈ ಕೂದಲು ಕಿರುಚೀಲಗಳು ಮೆಲನಿನ್ ಎಂದು ಕರೆಯಲ್ಪಡುವ ಪಿಗ್ಮೆಂಟ್ ಕೋಶಗಳನ್ನು ಹೊಂದಿರುತ್ತವೆ. ಈ ಸ್ಕೀ ಕೋಶಗಳು ನಿಮ್ಮ ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ. ಆದರೆ, ಕಾಲಾನಂತರದಲ್ಲಿ, ಈ ಕೂದಲಿನ ಕಿರುಚೀಲಗಳು ತಮ್ಮ ನೈಸರ್ಗಿಕ ವರ್ಣದ್ರವ್ಯ ಕಳೆದುಕೊಳ್ಳಬಹುದು ಇದರಿಂದ ಇದು ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ. ಇದರಲ್ಲಿ ವ್ಯಕ್ತಿಯ ಮೆಲನೊಸೈಟ್ ಕಾಂಡಕೋಶ ಪ್ರಮುಖ ಪಾತ್ರವಹಿಸುತ್ತದೆ.
ಅಧ್ಯಯನದಲ್ಲಿ ಮೆಲನೋಮೈಟ್ ಕಾಂಡಕೋಶ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತು ತಿಳಿದುಕೊಳ್ಳಲಾಗುವುದು ಎಂದು ಎವೈಯು ಲ್ಯಾಂಗೋನ್ ಹೆಲ್ತ್ನಲ್ಲಿ ಕ್ವಿ ಸನ್ ತಿಳಿಸಿದ್ದಾರೆ. ಮೆಲನೋಸೈಟ್ ಕಾಂಡಕೋಶ ಬದಲಾವಣೆ ಕಾರ್ಯ ನಷ್ಟದಿಂದ ಕೂದಲಿನ ಬಣ್ಣ ಬದಲಾಗುವುದು ಕಾರಣವಾಗುತ್ತದೆ. ಈ ಸಂಶೋಧನೆಗಳು ಮೆಲನೋಸೈಟ್ ಕಾಂಡಕೋಶದ ಚಲನಶೀಲತೆ ಮತ್ತು ರಿವರ್ಸಬಲ್ ಡಿಫರೆನ್ಷಿಯಲ್ ಕೂದಲನ್ನು ಆರೋಗ್ಯವಾಗಿಡಲು ಪ್ರಮುವಾಗುತ್ತದೆ ಎಂದು ತಿಳಿಸಿದ್ದಾರೆ.