ನ್ಯೂಯಾರ್ಕ್: ಊಟದ ಮಧ್ಯೆ ಸ್ನಾಕ್ಸ್ ತಿನ್ನುವ ಬಯಕೆ ಹಲವು ಮಂದಿಗಿದೆ. ಬಿಸ್ಕೆಟ್, ಬ್ರೌನಿಗೆ ಬದಲಾಗಿ ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.
ಅಮೆರಿಕನ್ ಹಾರ್ಟ್ ಅಸೋಸಿಯೇಟ್ ಹೇಳುವಂತೆ, ಮೆಟಾಬಾಲಿಕ್ ಸಿಂಡ್ರೋಮ್ ಎಂಬುದು ಐದು ಆರೋಗ್ಯ ಪರಿಸ್ಥಿತಿಗಳ ಸಂಯೋಜನೆ. ಅವುಗಳೆಂದರೆ ಮಧುಮೇಹ, ಹೃದಯ ರೋಗ, ಪಾರ್ಶ್ವವಾಯು ಮತ್ತು ಇತರೆ ಆರೋಗ್ಯ ಸಮಸ್ಯೆಗಳು.
ಜರ್ನಲ್ ನ್ಯೂಟ್ರಿಯೆಂಟ್ಸ್ನಲ್ಲಿ ಪ್ರಕಟವಾದಂತೆ ಪ್ರತಿನಿತ್ಯ ಟ್ರಿ ನಟ್ (ಬಾದಾಮಿ, ಬ್ರೆಸಿಲ್ ನಟ್ಸ್, ಬಾದಾಮಿ, ಹೆಜೆಲ್ನಟ್, ಮ್ಯಾಕಡಮಿಯಸ್, ಪಿಕಾನ್ಸ್, ಪೈನ್ಸ್ ನಟ್, ಪಿಸ್ತಾ ಮತ್ತು ವಾಲ್ನಟ್) ಸೇವನೆ ಮಾಡುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆ ಮಾಡಬಹುದು. ಸೋಂಟದ ಸುತ್ತಳತೆ ಸುಧಾರಣೆಯೂ ಆಗುತ್ತದೆ. ಲಿಪಿಡ್ ಬಯೋಮಾರ್ಕ್ ಮತ್ತು ಇನ್ಸುಲಿನ್ ಮಟ್ಟ ತಗ್ಗಿಸಬಹುದು. ಸ್ನಾಕ್ಸ್ ಸೇವನೆಯಿಂದ ಶೇ 25ರಷ್ಟು ಕ್ಯಾಲೊರಿ ಹೆಚ್ಚುವರಿಯಾಗಿ ದೇಹಕ್ಕೆ ಸೇರುತ್ತದೆ ಎಂದು ಅಮೆರಿಕದ ವಂಡೆರ್ಬಿಲ್ಟ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಪ್ರೊಫೆಸರ್ ಹೈಡಿ ಜೆ ಸಿಲ್ವರ್ ತಿಳಿಸಿದ್ದಾರೆ.
ಹೈ ಕಾರ್ಬೋಹೈಡ್ರೇಟ್ ಇರುವ ಸ್ನಾಕ್ಗಳ ಬದಲಾಗಿ ಟ್ರಿ ನಟ್ ಸೇವನೆಯಿಂದ ದೇಹದಲ್ಲಿ ಸಕಾರಾತ್ಮಕ ಪರಿಣಾಮ ಹೊಂದಬಹುದು. ಅಲ್ಲದೇ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆ ಮಾಡಬಹುದು. ಇವುಗಳನ್ನು ಎಲ್ಲಾ ವಯೋಮಾನದವರೂ ಸೇವಿಸಬಹುದು.