ಕರ್ನಾಟಕ

karnataka

ETV Bharat / sukhibhava

ಜಗತ್ತಿನಾದ್ಯಂತ ಮಾನಸಿಕ, ದೈಹಿಕ, ಭಾವನಾತ್ಮಕ ನಿಂದನೆಯಿಂದ ಮಕ್ಕಳನ್ನು ರಕ್ಷಿಸಬೇಕಿದೆ! - ಯುದ್ಧಗಳಿಗೆ ಬಲಿಪಶುವಾಗುತ್ತಿರುವ ಇಂತಹ ಮಕ್ಕಳು

ಶಸ್ತ್ರಾಸ್ತ್ರ ಸಂಘರ್ಷಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಮಕ್ಕಳಿಗೆ ಭಾವಾನಾತ್ಮಕವಾಗಿ, ಮಾನಸಿಕವಾಗಿ, ದೈಹಿಕವಾಗಿ ರಕ್ಷಣೆ ನೀಡುವ ಕೆಲಸ ಆಗಬೇಕಿದೆ.

All over the world children need to be protected from mental, physical and emotional abuse
All over the world children need to be protected from mental, physical and emotional abuse

By

Published : Jun 4, 2023, 5:00 AM IST

ಹೈದರಾಬಾದ್​: ಇತ್ತೀಚಿನ ದಶಕಗಳಲ್ಲಿ, ಜಗತ್ತಿನಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳಲ್ಲಿ ಮಕ್ಕಳು ದೊಡ್ಡ ಬಲಿಪಶುಗಳಾಗುತ್ತಿದ್ದಾರೆ. ಯುದ್ಧಗಳಿಗೆ ಬಲಿ ಆಗುತ್ತಿರುವ ಇಂತಹ ಮಕ್ಕಳು ಮಾನಸಿಕ ಮತ್ತು ದೈಹಿಕ ನಿಂದನೆಗೆ ಒಳಗಾಗುತ್ತಿದ್ದಾರೆ ಎಂಬ ಅರಿವು ದೊಡ್ಡಮಟ್ಟದ ಜನಸಂಖ್ಯೆಯಲ್ಲಿ ಇಲ್ಲ. ಸಣ್ಣ ಯುದ್ಧ ಘಟನೆಗಳಿಂದಲೂ ಮಕ್ಕಳು ದುರ್ಬಲಗೊಳ್ಳುತ್ತಾರೆ. ಇದು ಅವರ ಬದುಕಿನ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ.

ಸಾಮಾನ್ಯವಾಗಿ ಆರೋಗ್ಯ ಸಂಬಂಧಿತ ವಿಚಾರಗಳ ಕುರಿತು ವಿಶ್ವ ಸಂಸ್ಥೆ ಕಾರ್ಯಕ್ರಮಗಳನ್ನು ಪರಿಗಣಿಸುತ್ತದೆ. ಆದರೆ, ಇಂತಹ ಘಟನೆಗಳು ಮಕ್ಕಳಿಗೆ ಸಮರ್ಪಣೆಯನ್ನು ಮಾಡಲಾಗಿದೆ. ಅದರಲ್ಲಿ ಒಂದು ಆಕ್ರಮಣಶೀಲತೆಗೆ ಬಲಿಪಶುಗಳಾಗುತ್ತಿರುವ ಮುಗ್ಧ ಮಕ್ಕಳ ಅಂತಾರಾಷ್ಟ್ರೀಯ ದಿನ. ಪ್ರಾರಂಭದಲ್ಲಿ ಈ ದಿನವನ್ನು ಯುದ್ಧದಲ್ಲಿ ಬಲಿಯಾದ ಮಕ್ಕಳಿಗಾಗಿ ಎಂದು ಪರಿಗಣಿಸಲಾಯಿತು. ಇದರ ಮೂಲ ಉದ್ದೇಶ ಈ ಜಗತ್ತಿನೆಲ್ಲೆಡೆ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ನಿಂದನೆಗೆ ಒಳಗಾದ ಮಕ್ಕಳನ್ನು ರಕ್ಷಣೆಯನ್ನ ಮಾಡುವುದೇ ಆಗಿದೆ.

ಈ ದಿನವನ್ನು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ನಿರ್ಣಯ ಅಂಗೀಕರಿಸುವ ವೇದಿಕೆ ಎಂದು ಪರಿಗಣಿಸಲಾಗಿದೆ. ಇದನ್ನು ಆಗಸ್ಟ್​ 19, 1982ರಿಂದ ಆಚರಿಸಲಾಗುತ್ತಿದೆ. ಇಸ್ರೇಲ್​ ಹಿಂಸಾಚಾರದಲ್ಲಿ ಪ್ಯಾಲೆಸ್ತೇನಿಯ ಮತ್ತು ಲೆಬನಾನ್​ ಮಕ್ಕಳು ಹೆಚ್ಚು ಸಂಕಷ್ಟಕ್ಕೆ ಒಳಗಾದರು. ಇದರಿಂದ ಪ್ಯಾಲೆಸ್ಟೈನ್​​ ಈ ಸಂಬಂಧ ಕ್ರಮಕ್ಕೆ ಮುಂದಾಗುವಂತೆ ವಿಶ್ವಸಂಸ್ಥೆಯನ್ನು ಕೋರಿಕೊಂಡಿತ್ತು. ಮಕ್ಕಳ ಮೇಲಿನ ಹಿಂಸಾಚಾರ ವಿರುದ್ಧದ ಸ್ಮರಣಾರ್ಥ ವಿಶ್ವಸಂಸ್ಥೆ ಸಾಮಾನ್ಯ ಸಭೆ ಜೂನ್​ 4ರಂದು ಆಕ್ರಮಣಶೀಲತೆಯ ಬಲಿಪಶುಗಳಾಗುತ್ತಿರುವ ಮುಗ್ಧ ಮಕ್ಕಳ ಅಂತಾರಾಷ್ಟ್ರೀಯ ದಿನ ಆಚರಣೆಗೆ ಮುಂದಾಯಿತು

1982 ಜೂನ್​ 4ರಂದು ಇಸ್ರೇಲ್​ ದಕ್ಷಿಣ ಲೆಬನಾನ್​ ಮೇಲೆ ದಾಳಿ ಮಾಡಿತು. ಈ ಘೋಷಣೆ ಬೆನ್ನಲ್ಲೇ, ದೊಡ್ಡ ಮಟ್ಟದ ಮುಗ್ದ ಲೆಬೆನೆನಿಸ್​ ಮತ್ತು ಪ್ಯಾಲೇಸ್ತೆನಿಯ ಮಕ್ಕಳು ಸಾವನ್ನಪ್ಪಿದ್ದರು, ಕೆಲವರು ಗಾಯಗೊಂಡರು ಮತ್ತು ಕೆಲವರು ಸ್ಥಳಾಂತರಗೊಂಡರು. ಯುದ್ದ ಇರಲಿ ಅಥವಾ ಯಾವುದೇ ರೀತಿಯ ಶಸ್ತ್ರಸ್ತ್ರ ಸಂಘರ್ಷವಿರಲಿ, ಮಕ್ಕಳು ಇದರಿಂದ ಭಾರಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅವರು ಕೇವಲ ಸಾಮಾನ್ಯ ಶಿಕ್ಷಣದಿಂದ ವಂಚಿತರಾಗುವುದಿಲ್ಲ. ಆದರೆ, ಅನೇಕ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಾರೆ.

ಶಸ್ತ್ರಾಸ್ತ್ರ ಸಂಘರ್ಷಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಕುರಿತು 1997ರಲ್ಲಿ ಗ್ರಾಕ್​ ಮೆಷಿಲ್​​ ಅವರ ವರದಿ ಜಗತ್ತಿನ ಗಮನಸೆಳೆಯಿತು. ವಿಶ್ವಸಂಸ್ಥೆ 51/77 ನಿರ್ಣಯವನ್ನು ಮಕ್ಕಳಹಕ್ಕಿನ ರಕ್ಷಣೆಗೆ ಜಾರಿಗೆ ತಂದಿತು. ಇದು ಸಂಘರ್ಷದ ಸ್ಥಿತಿಗಳಲ್ಲಿ ಮಕ್ಕಳ ರಕ್ಷಣೆ ಹೆಚ್ಚಿಸುವ ಪ್ರಮುಖ ಪ್ರಯತ್ನವಾಗಿದೆ.

ಮಕ್ಕಳ ನೇಮಕಾತಿ ಯುದ್ದದ ಭಾಗವಾಗಿ ಬಳಸುವುದು, ಕೊಲೆ, ಲೈಂಗಿಕ ನಿಂದನೆ, ಹಿಂಸಾಚಾರ, ಅಪಹರಣ, ಶಾಲೆ ಮತ್ತು ಆಸ್ಪತ್ರೆಗಳ ಮೇಲೆ ದಾಳಿ, ಮಕ್ಕಳ ಮಾನವ ಹಕ್ಕುಗಳ ನಿರಾಕರಣೆ ಸೇರಿದಂತೆ ಆರು ಗಂಭೀರ ಮಕ್ಕಳ ಹಕ್ಕುಗಳ ಉಲ್ಲಂಘನೆ ಯನ್ನು ವಿಶ್ವ ಸಂಸ್ಥೆ ಗುರುತಿಸಿತು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ನಿಂದನೆ ಹೆಚ್ಚುತ್ತಿದ್ದು, 230 ಮಿಲಿಯನ್​ ಯುದ್ಧ ಪಪೀಡಿತ ದೇಶದ ಮಕ್ಕಳಿಗೆ ಜಗತ್ತಿನಾದ್ಯಂತ ರಕ್ಷಣೆ ಅವಶ್ಯಕತೆ ಬೇಕಿದೆ.

ಇದನ್ನೂ ಓದಿ:ಜಾಗತಿಕ ಪೋಷಕರ ದಿನ: ಜನ್ಮ ನೀಡಿ ಬೆಳೆಸಿದ ಪೋಷಕರಿಗೆ ಗೌರವ ಸಲ್ಲಿಸಿ!

ಇದನ್ನೂ ಓದಿ:ಜಾಗತಿಕ ಪೋಷಕರ ದಿನ: ಜನ್ಮ ನೀಡಿ ಬೆಳೆಸಿದ ಪೋಷಕರಿಗೆ ಗೌರವ ಸಲ್ಲಿಸಿ!

ABOUT THE AUTHOR

...view details