ವಾಷಿಂಗ್ಟನ್:ಅಮೆರಿಕದ ರಶ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ನ ಸಂಶೋಧಕರು ದೀರ್ಘಕಾಲದ ಮದ್ಯಪಾನದ ಸೇವನೆಯು ತೀವ್ರವಾಗಿ ಕೋವಿಡ್19 ಅನ್ನು ಉಂಟು ಮಾಡಲು ಕಾರಣವಾಗುವ ಅಂಶವಾಗಿದೆ ಎಂದು ತಮ್ಮ ಅಧ್ಯಯನಗಳ ವಿಮರ್ಶೆಯಲ್ಲಿ ತಿಳಿಸಿದ್ದಾರೆ. ಕೋವಿಡ್ -19 ರೋಗಿಗಳ ರೋಗನಿರೋಧಕ ಪ್ರಕ್ರಿಯೆಯು ರೋಗಲಕ್ಷಣದ ತೀವ್ರತೆಯ ಪ್ರಮುಖ ಚಾಲಕವಾಗಿರುವುದನ್ನು ಸಂಶೋಧನೆ ಸೂಚಿಸುತ್ತದೆ ಎಂದು ಗಮನಿಸಿದ್ದಾರೆ.
65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಮತ್ತು ಟೈಪ್ 2 ಮಧುಮೇಹ, ಹೃದಯರಕ್ತನಾಳದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಆರೋಗ್ಯ ಸಮಸ್ಯೆ ಹೊಂದಿರುವವರು ಕೋವಿಡ್-19 ಗೆ ಹೆಚ್ಚು ತುತ್ತಾಗುತ್ತಾರೆ ಎಂದು ಈ ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಆಲ್ಕೊಹಾಲ್ ಯೂಸ್ ಡಿಸಾರ್ಡರ್ (ಎಸ್ಯುಡಿ) ನಿಂದ ಕೋವಿಡ್ -19 ತೀವ್ರತೆಯ ಹೆಚ್ಚಳ:ತೀವ್ರವಾದ ಕೋವಿಡ್ -19 ಅನ್ನು ಅನುಭವಿಸುವ ಅನೇಕ ರೋಗಿಗಳು, ಕೆಲವೊಮ್ಮೆ ಸಾವು ಸೇರಿದಂತೆ, ಹೆಚ್ಚು ಅಪಾಯದ ಅಂಶಗಳನ್ನು ಒಳಗೊಂಡಿದ್ದಾರೆ ಎಂದು ಸೂಚಿಸುತ್ತದೆ. ಆಲ್ಕೊಹಾಲ್ ಯೂಸ್ ಡಿಸಾರ್ಡರ್ (ಎಸ್ಯುಡಿ) ತೀವ್ರ ಕೋವಿಡ್ -19 ರೋಗ ಅಥವಾ ವಿಶೇಷವಾಗಿ ವಯಸ್ಸಾದವರು ಸಾವಿನ ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನಗಳಲ್ಲಿ ತಿಳಿದು ಬಂದಿದೆ.