ಸ್ಯಾನ್ ಪ್ರಾನ್ಸಿಸ್ಕೊ( ಅಮೆರಿಕ): ನಿರ್ದಿಷ್ಟ ವಾಯು ಮಾಲಿನ್ಯ ಜಗತ್ತಿನಾದ್ಯಂತ ಹೃದಯ ರಕ್ತನಾಳ ಸಮಸ್ಯೆ (ಸಿವಿಡಿ) ಮತ್ತು ಅಕಾಲಿಕ ಸಾವಿನಂತಹ ಅಪಾಯವನ್ನು ಹೆಚ್ಚಿಸುತ್ತಿದೆ. ಅಲ್ಲದೇ ಇದು ಅಂಗವೈಕಲ್ಯಕ್ಕೂ ಕಾರಣವಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಸಾವು ಮತ್ತು ಅಂಗವೈಕಲ್ಯದೊಂದಿಗೆ ಮಾಲಿನ್ಯದ ಅಪಾಯದ ಕಣಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಈ ಅಧ್ಯಯನಕ್ಕಾಗಿ 1990ರಿಮದ 2019ರವರೆಗೆ 204 ದೇಶಗಳ ದತ್ತಾಂಶವನ್ನು ಸಂಗ್ರಹಿಸಲಾಗಿದೆ.
ಈ ಹಿಂದಿನ ಅಧ್ಯಯನದಲ್ಲಿ ಮಾಲಿನ್ಯದ ಕಣಗಳು ಸಿವಿಡಿ ಸಾವು ಮತ್ತು ಅಂಗವೈಕಲ್ಯದೊಂದಿಗೆ ಸಂಬಂಧ ಹೊಂದಿರುವುದನ್ನು ತಿಳಿಸಲಾಗಿದೆ. ಈ ರೀತಿ ಮಾಲಿನ್ಯಗಳ ಜಗತ್ತಿನಾದ್ಯಂತ ಬೀರುವ ಪರಿಣಾಮಗಳು ಮತ್ತು ಸಮಯ ಬಂದಂತೆ ಆಗುವ ಬದಲಾವಣೆಗಳ ಕುರಿತು ಪ್ರಶ್ನೆಗಳು ಹಾಗೇ ಉಳಿದಿದೆ ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.
ಈ ಮಾಲಿನ್ಯ ಜಾಗತಿಕವಾಗಿ ಹೇಗೆ ಹೊರೆಯಾಗುತ್ತಿದೆ ಎಂಬುದನ್ನು ಪರೀಕ್ಷೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಏಕೆಂದರೆ ಮಾಲಿನ್ಯದ ನಿರ್ಧಿಷ್ಟ ಕಣಗಳು ಪರಿಸರದಲ್ಲಿ ಅಪಾಯಕಾರಿ ಅಂಶವನ್ನು ಹರಡಿದ್ದು, ಅದು ಜಗತ್ತಿನ ಎಲ್ಲ ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ನಾವು ಇದು ಹೃದಯ ರಕ್ತನಾಳದ ಆರೋಗ್ಯದ ಮೇಲೆ ಬೀರುವ ಪರಿಣಾಮ ಮತ್ತು ಜನರ ಆರೋಗ್ಯದ ಮದ್ಯಸ್ಥಿಕೆ ಮತ್ತು ನಿಯಮದ ನಿರ್ಧಾರಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅಧ್ಯಯನದ ಲೇಖಕ ಫರ್ಶಾದ್ ಫರ್ಜಾದ್ಫರ್ ತಿಳಿಸಿದ್ದಾರೆ.