ನ್ಯೂಯಾರ್ಕ್( ಅಮೆರಿಕ): ವಾಯು ಮಾಲಿನ್ಯ ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಸ್ತಮಾವನ್ನು ಹೆಚ್ಚಿಸಬಹುದು ಎಂದು ದಿ ಲ್ಯಾನ್ಸೆಟ್ ಫ್ಲಾನೆಟರಿ ಹೆಲ್ತ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಓಝೋನ್ನ ಸುಧಾರಿತ ಮಟ್ಟ ಮತ್ತು ಸೂಕ್ಷ್ಮವಾದ ವಾಯು ಕಣಗಳು ಹೊಗೆಯ ಎರಡು ಅಂಶಗಳಾಗಿವೆ. ಇವು ಮಕ್ಕಳಲ್ಲಿ ಆಸ್ತಮಾ ದಾಳಿಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
ನಗರದಲ್ಲಿ ಮಕ್ಕಳಲ್ಲಿ ನಿರ್ದಿಷ್ಟ ವಾಯು ಮಾಲಿನ್ಯಕಾರಕಗಳ ಮತ್ತು ಆಸ್ತಮಾ ದಾಳಿಗಳ ನಡುವೆ ಹೆಚ್ಚಿನ ಪೂರಕ ಸಂಬಂಧಗಳಿವೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡುವುದರಿಂದ ಆರೋಗ್ಯ ಸುಧಾರಿಸಬಹುದು ಎಂಬುದಕ್ಕೆ ಹಲವು ಪುರಾವೆಳಿವೆ ಎಂದು ಯುಎಸ್ ನ್ಯಾಷನಲ್ ಇನ್ಸುಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಸ್ ಡೀಸಿಸ್ ಕಾರ್ಯಕಾರಿ ನಿರ್ದೇಶಕ ಡಾ ಹಗ್ ಆಚಿನ್‌ಕ್ಲೋಸ್ ತಿಳಿಸಿದ್ದಾರೆ.
ನಗರದ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ವಾಯು ಮಾಲಿನ್ಯ ಮಟ್ಟವೂ ಹೆಚ್ಚಿದ್ದು, ಇದು ಅಸ್ತಮಾ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬ ಅಂಶವೂ ಅಧ್ಯಯನದ ವೇಳೆ ಕಂಡು ಬಂದಿದೆ. ಅಸ್ತಮಾ ದಾಳಿ ವೇಳೆಯಲ್ಲಿ ಊರಿಯೂತದ ಕಾರಣ ಸ್ನಾಯು ಊತಕ್ಕೆ ಕಾರಣವಾಗುತ್ತದೆ. ಈ ವೇಳೆ ವಾಯುಮಾರ್ಗಗಳ ಸುತ್ತಲಿನ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಶ್ವಾಸಕೋಶದ ಒಳಗೆ ಮತ್ತು ಹೊರಗೆ ಗಾಳಿಯು ಹಾದು ಹೋಗುವ ಜಾಗವನ್ನು ಗಣನೀಯವಾಗಿ ಕಿರಿದಾಗಿಸುತ್ತದೆ.