ಹೈದರಾಬಾದ್: ಇಂದು ಜಾಗತಿಕವಾಗಿ ಹೆಚ್ಚು ಸಾವುಗಳು ಸಂಭವಿಸುವ ಖಾಯಿಲೆಗಳಲ್ಲಿ ಕಾನ್ಸರ್ಗೆ ಅಗ್ರಗಣ್ಯ ಸ್ಥಾನವಿದೆ. ಈ ಕ್ಯಾನ್ಸರ್ ಕೊನೆಯ ಹಂತದಲ್ಲಿ ಇದನ್ನು ಸಮರ್ಪಕವಾಗಿ ತಡೆಗಟ್ಟುವುದು ಬಹಳ ಕಷ್ಟದಾಯಕವಾಗಿದೆ. ಈ ಹಂತದಲ್ಲಿ ಗುಣವಾಗುವ ದರ ಬಹಳ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಇಂದು ಆಧುನಿಕ ತಂತ್ರಜ್ಞಾನದ ಮೂಲಕ ಬೇಗನೆ ಅಂದರೆ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಬಹುದಾಗಿದೆ. ಈ ಮೂಲಕ ರೋಗಿಯ ಜೀವ ಉಳಿಸಬಹುದಾಗಿದೆ ಎಂದು ಪ್ರಖ್ಯಾತ ಕ್ಯಾನ್ಸರ್ ತಜ್ಞ ಡಾ ನೊರಿ ದತ್ತಾತ್ರೇಯುಡು ತಿಳಿಸಿದ್ದಾರೆ.
ಸೋಮವಾರ ನಾನಕ್ರಾಂಗುಡ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಎಟಿಎ (ಅಮೆರಿಕನ್ ತೆಲುಗು ಅಸೋಸಿಯೇಷನ್) ವಾರ್ಷಿಕ ಹೆಲ್ತ್ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ಇಂದು ವ್ಯಕ್ತಿಯ ವಿವಿಧ ಅಂಗಾಂಗಗಳಲ್ಲಿ ಕ್ಯಾನ್ಸರ್ ಟ್ಯೂಮರ್ ಅನ್ನು ಪತ್ತೆ ಮಾಡುವ ಅನೇಕ ತಂತ್ರಜ್ಞಾನಗಳು ಲಭ್ಯವಿದೆ. ಅವುಗಳನ್ನು ದೇಹದ ಇತರ ಅಂಗಾಂಗಗಳ ಮೇಲೆ ಹಾನಿ ಮಾಡದಂತೆ ಅವುಗಳನ್ನು ನಾಶ ಮಾಡಬಹುದಾಗಿದೆ. ಎಐ ಆಧಾರಿತ ತಂತ್ರಜ್ಞಾನದಿಂದ ಬಹುಬೇಗ ರೋಗನಿರ್ಣಯ ಮಾಡಿ ಚಿಕಿತ್ಸೆ ನೀಡುವ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ವೇಗವಾಗಿ ಮುಂದುವರೆದಿದೆ. ಎಐ ಸಹಾಯದ ಇಮೇಜ್ಗಳನ್ನು ಪಡೆದುಕೊಂಡು, ಅದು ನೀಡಿದ ದತ್ತಾಂಶಗಳ ಮೇಲೆ ರೋಗನಿರ್ಣಯ ಮಾಡಿ, ಪರಿಣಾಮ ಬೀರುವ ಅಂಶಗಳ ಬಗ್ಗೆ ಪರಿಶೋಧಿಸಲಾಗುತ್ತಿದೆ. ಈ ಮೂಲಕ ಎಐನ ಸಲಹೆಗಳನ್ನು ಸ್ವೀಕರಿಸಬಹುದಾಗಿದೆ. ಈಗಿಗ ಎಐ ಸಹಾಯದಿಂದ ನಿಖರವಾಗಿ ಕ್ಯಾನ್ಸರ್ ಅಂಶಗಳನ್ನು ಪತ್ತೆ ಹಚ್ಚಬಹುದಾಗಿದ್ದು, ಈ ಹಿಂದಿಗಿಂತ ಹೆಚ್ಚು ಕಾರ್ಯಕ್ಷಮತೆ ಹೊಂದಿದೆ.