ಲಂಡನ್: ಬಾಲ್ಯದಲ್ಲಿ ಅನುಭವಿಸಿದ ದೈಹಿಕ, ಲೈಂಗಿಕ ಅಥವಾ ಭಾವನಾತ್ಮಕ ನಿಂದನೆ ಅಥವಾ ನಿರ್ಲಕ್ಷ್ಯ, ಒಂಟಿತನ ಅಥವಾ ಇತರ ವಿಧದ ಆಘಾತಗಳು ಪ್ರೌಢಾವಸ್ಥೆಯಲ್ಲಿನ ದೀರ್ಘಕಾಲದ ನೋವು ಮತ್ತು ಅದಕ್ಕೆ ಸಂಬಂಧಿಸಿದ ಅಂಗವೈಕಲ್ಯತೆಯ ಅಪಾಯವನ್ನು ಹೆಚ್ಚಿಸಬಹುದು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.
ಹೊಸ ಸಂಶೋಧನಾ ಫಲಿತಾಂಶವೂ ಪ್ರತಿಕೂಲ ಬಾಲ್ಯದ ಅನುಭವಗಳನ್ನು (ಎಸಿಇ) ಕುರಿತು ತಿಳಿಸಿದೆ. 18 ವರ್ಷಕ್ಕಿಂತ ಮೊದಲು ಸಂಭವಿಸುವ ಆಘಾತಕಾರಿ ಘಟನೆಗಳನ್ನು ಜನರ ಆರೋಗ್ಯದ ಮೇಲೆ ಅವರ ಮೇಲೆ ದೀರ್ಘಕಾಲೀನ ಪ್ರಭಾವವನ್ನು ಬೀರುವ ಹಿನ್ನೆಲೆ ಅದನ್ನು ತಗ್ಗಿಸಲು ತುರ್ತು ಕ್ರಮದ ಅಗತ್ಯವನ್ನು ತಿಳಿಸಿದೆ.
ಎಸಿಇ ಮಕ್ಕಳು ಅಥವಾ ಹದಿ ವಯಸ್ಸಿನವರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅವರು ಅನುಭವಿಸಿದ ದೈಹಿಕ, ಲೈಂಗಿಕ ಅಥವಾ ಭಾವಾನಾತ್ಮಕ ನಿಂದನೆ ಅಥವಾ ನಿರ್ಲಕ್ಷ್ಯ ಅಥವಾ ಕೌಟುಂಬಿಕ ದೌರ್ಜನ್ಯಗಳಂತಹ ವಾತಾವರಣಗಳಿಗೆ ಪರೋಕ್ಷ ತೆರೆದುಕೊಳ್ಳುವಿಕೆ, ನಿಂದನೆ ಅಥವಾ ಪೋಷಕರ ಕಳೆದುಕೊಂಡು ಜೀವಿಸುವ ನೋವುಗಳು ಇದನ್ನು ಒಳಗೊಂಡಿದೆ. ಜಾಗತಿಕವಾಗಿ ಅಂಗವೈಕಲ್ಯತೆ ಕಾರಣಗಳಲ್ಲಿ ದೀರ್ಘಕಾಲದ ನೋವು ಪ್ರಮುಖವಾಗಿದೆ.
ದೀರ್ಘಕಾಲದ ನೋವಿನ ಪರಿಸ್ಥಿತಿಗಳಾದಂತಹ ಬೆನ್ನು ನೋವು, ಅಸ್ಥಿಸಂಧಿವಾತ, ತಲೆನೋವು ಮತ್ತು ಮೈಗ್ರೇನ್ ವ್ಯಕ್ತಿಯ ದೈನಂದಿನ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅವರು ಕೆಲಸ ಮಾಡಲು, ಸರಿಯಾಗಿ ತಿನ್ನಲು ಅಥವಾ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ.
ಯುರೋಪಿಯನ್ ಜರ್ನಲ್ ಆಫ್ ಸೈಕೋಟ್ರಾಮಟೊಲಾಜಿಯಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ತಂಡವೂ 85 ಅಧ್ಯಯನ ಒಳಗೊಂಡ ವ್ಯವಸ್ಥಿತ ವಿಮರ್ಶೆಯನ್ನು ನಡೆಸಿದೆ. ಇದರಲ್ಲಿ 57 ಅಧ್ಯಯನದ ಫಲಿತಾಂಶವನ್ನು ಮೆಟಾ ವಿಮರ್ಶೆಯಿಂದ ಪಡೆಯಲಾಗಿದೆ.
ಫಲಿತಾಂಶದಲ್ಲಿ ನೇರವಾಗಿ ಎಸಿಇಗೆ ಒಡ್ಡಿಕೊಂಡವರು, ಅಂದರೆ ದೈಹಿಕ, ಲೈಂಗಿಕ ಅಥವಾ ಭಾವನಾತ್ಮಕ ನಿಂದನೆ ಅಥವಾ ನಿರ್ಲಕ್ಷ್ಯಕ್ಕೆ ಒಳಗಾದವರು ಈ ರೀತಿಯ ಪರಿಸ್ಥಿತಿಗೆ ಒಳಗಾಗದವರಿಗಿಂತ ತಮ್ಮ ಪ್ರೌಢವಸ್ಥೆಯಲ್ಲಿ ಶೇ 45ರಷ್ಟು ದೀರ್ಘಕಾಲಕ್ಕೆ ಒಡ್ಡಿಕೊಳ್ಳುತ್ತಾರೆ. ಬಾಲ್ಯಾವಸ್ಥೆಯ ನಿಂದನೆಗಳು ದೀರ್ಘ ಕಾಲದ ನೋವು ಮತ್ತು ನೋವಿಗೆ ಸಂಬಂಧಿತ ಅಂಗವೈಕಲ್ಯತೆ ಹೀಗೆ ಎರಡರೊಂದಿಗೂ ಸಂಬಂಧ ಹೊಂದಿದೆ ಎಂದು ವರದಿ ತಿಳಿಸಿದೆ.
ಪ್ರೌಢಾವಸ್ಥೆಯಲ್ಲಿ ದೀರ್ಘಕಾಲದ ನೋವು ಅಥವಾ ನೋವು ಆಧಾರಿತ ಅಂಗವೈಕಲ್ಯತೆಯು ಯಾವುದೇ ನೇರ ಎಸಿಇ ಇಲ್ಲ ಪರೋಕ್ಷ ಎಸಿಇಗೆ ಒಡ್ಡಿಕೊಳ್ಳುವಿಕೆಯೊಂದಿಗೆ ಹೆಚ್ಚಿದೆ. ಈ ಅಧ್ಯಯನದ ಫಲಿತಾಂಶವೂ ಎಸಿಇಎಸ್ ಕುರಿತು ತುರ್ತು ಕ್ರಮಕ್ಕೆ ಒತ್ತಿ ಹೇಳಿದೆ. ವಿಶೇಷವಾಗಿ ಅವುಗಳ ಹರಡುವಿಕೆ ಮತ್ತು ಆರೋಗ್ಯ ಪರಿಣಾಮ ಕುರಿತು ತಿಳಿಸುತ್ತದೆ ಎಂದು ಸೌತರ್ನ್ ಡೆನ್ಮಾರ್ಕ್ ಯುನಿವರ್ಸಿಟಿಯ ಪ್ರೊ ಜಾನ್ ಹರ್ಟವಿಗ್ಸೆನ್ ತಿಳಿಸಿದ್ದಾರೆ.
ಎಸಿಇ ಮತ್ತು ದೀರ್ಘಕಾಲದ ನೋವಿನ ನಡುವಿನ ಸಂಬಂಧವನ್ನು ಅರ್ಥೈಸಿಕೊಂಡು ಅದು ಪ್ರೌಢವಸ್ಥೆಯಲ್ಲಿ ಜನರ ಮೇಲೆ ದೀರ್ಘಕಾಲದ ಪರಿಣಾಮವನ್ನು ತಿಳಿದು ಆರೋಗ್ಯ ಆರೈಕೆ ವೃತ್ತಿಪರರು ಮತ್ತು ನೀತಿ ನಿರೂಪಕರು ಕಾರ್ಯತಂತ್ರ ರೂಪಿಸಬೇಕು ಎಂದು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಮಕ್ಕಳಿಗೆ ಹೆಚ್ಚಾಗಿ ಬ್ರೆಡ್ನಂತಹ ಬೇಕರಿ ತಿಂಡಿಗಳನ್ನು ತಿನ್ನಲು ಕೊಡ್ತೀರಾ ; ಹಾಗಾದರೆ ಎಚ್ಚರ!