ಕರ್ನಾಟಕ

karnataka

ETV Bharat / sukhibhava

ಗರ್ಭಿಣಿಯರಲ್ಲಿ ಅಪಾಯ ಹೆಚ್ಚಿಸುತ್ತದೆ ಅಡೆನೊಮೈಯೋಸಿಸ್​​ - ಈಟಿವಿ ಭಾರತ್​ ಕನ್ನಡ

ಋತುಚಕ್ರದ ವೇಳೆ ಭಾರೀ ರಕ್ತಸ್ರಾವ ಹೊಂದಿರುವ ಮಹಿಳೆಯರಲ್ಲಿ ಈ ಅಡೆನೊಮೈಯೋಸಿಸ್​ ಅಪಾಯ ಹೆಚ್ಚಿದೆ. ಈ ಹಿನ್ನೆಲೆ ಅವರು ಮಗುವಿನ ಜನನದ ವೇಳೆ ಹೆಚ್ಚು ಸಮಸ್ಯೆ ಅನುಭವಿಸುತ್ತಾರೆ.

Adenomyosis increases the risk in pregnant women
Adenomyosis increases the risk in pregnant women

By

Published : Jun 29, 2023, 11:58 AM IST

ಡೆನ್ಮಾರ್ಕ್​: ಶ್ರೋಣಿಯ ನೋವು ಮತ್ತು ಭಾರೀ ಮುಟ್ಟಿನ ರಕ್ತಸ್ರಾವವನ್ನು ಉಂಟುಮಾಡುವ ದೀರ್ಘಕಾಲದ ಸ್ಥಿತಿಯಾದ ಅಡೆನೊಮೈಯೋಸಿಸ್ ಹೊಂದಿರುವ ಮಹಿಳೆಯರು ಬಂಜೆತನದ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. ಇವರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂದು ಯುರೋಪಿಯನ್​ ಸೊಸೈಟಿ ಆಫ್​ ಹ್ಯೂಮನ್​ ರಿಪ್ರೊಡಕ್ಷನ್​ ಅಂಡ್​ ಎಮಬ್ರೊಯೊಲಾಜಿಯ 39ನೇ ವಾರ್ಷಿಕ ಸಭೆಯಲ್ಲಿ ಸಂಶೋಧಕರು ತಿಳಿಸಿದ್ದಾರೆ.

ಮೊದಲ ಅಧ್ಯಯನದ ದತ್ತಾಂಶದಲ್ಲಿ 9 ಮಿಲಿಯನ್​ ತಾಯಿಯಾಗುತ್ತಿರುವ ಅಡೆನೊಮೈಯೋಸಿಸ್​ ಹೊಂದಿರುವ ಮಹಿಳೆಯರು ಹೆಚ್ಚಿನ ತೊಂದರೆಯ ದರವನ್ನು ಹೊಂದಿರುತ್ತಾರೆ. ಅತಿ ಹೆಚ್ಚಿನ ಅಪಾಯವೂ ಸೀಸೆರಿಯನ್​ ಡೆಲಿವರಿಯಲ್ಲಿ ಹೊಂದಿದೆ. ಇದು ಸಾಮಾನ್ಯ ಸ್ಥಿತಿಗಿಂತ ಶೇ 20ರಷ್ಟು ಹೆಚ್ಚು ಅಪಾಯಕಾರಿಯಾಗಿದೆ. ಈ ವೇಳೆ ಗರ್ಭಾಶಯ ಮತ್ತು ಅದರ ಗಾಯದ ತೊಂದರೆಗಳು ಹೆಚ್ಚಾಗುವ ಸಂಭವ ಇದೆ ಎಂದು ಫಲಿತಾಂಶ ತೋರಿಸುತ್ತಿದೆ ಎಂದಿದ್ದಾರೆ.

ಜಾಗತಿಕವಾಗಿ ಅಡೆನೊಮೈಯೋಸಿಸ್​ ಹೊಂದಿರುವ ಮಿಲಿಯನ್​ಗಟ್ಟಲೇ ಮಹಿಳೆಯರನ್ನು ಮಾನಿಟರಿಂಗ್​ ಮಾಡುವ ಅಗತ್ಯ ಇದೆ ಎಂದು ಲೇಖಕರು ತಿಳಿಸುತ್ತಾರೆ. ಇದು ಮಹಿಳೆಯರ ಗಂಭೀರ ಸಮಸ್ಯೆಗಳು ಅಥವಾ ಮಗು ಅಥವಾ ತಾಯಿಯ ಸಾವಿನ ಅಪಾಯವನ್ನು ಕಡಿಮೆ ಮಾಡಲು ಅಥವಾ ತಗ್ಗಿಸಲು ಸಹಾಯ ಮಾಡುತ್ತದೆ. ಅಡೆನೊಮೈಯೋಸಿಸ್​ ಹೊಂದಿರುವ ಮಹಿಳೆಯರು ಫಲವತ್ತತ್ತೆಯ ಸಮಸ್ಯೆ, ಅವಧಿ ಪೂರ್ವ ಜನನ ಅಥವಾ ಸ್ತ್ರಿರೋಗ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂದು ಅಧ್ಯಯನ ಪ್ರಮುಖ ಲೇಖಕ ಡಾ ಮೊಹಮ್ಮದ್​​ ಬಸರಾಹ್​ ತಿಳಿಸಿದ್ದಾರೆ.

ಗರ್ಭಾವಸ್ಥೆಯ ಪರಿಣಾಮದ ದೀರ್ಘ ಉರಿಯೂತದಂತಹ ಹಲವು ಅಂಶಗಳ ಮೇಲೆ ಅಧ್ಯಯನವೂ ಆಳವಾದ ವಿಶ್ಲೇಷಣೆಯನ್ನು ನೀಡುತ್ತದೆ. ಇದು ರೋಗಿಗಳ ಕಾಳಜಿ ಮತ್ತು ಮಾನಿಟರ್​ ಮಾಡಲು ವೈದ್ಯರಿಗೆ ಸಹಾಯ ಮಾಡುತ್ತದೆ. ಅಡೆನೊಮೈಯೋಸಿಸ್​​ ಮಹಿಳೆಯರ ಸಂತಾನೋತ್ಪತ್ತಿಯ ವಯಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಎಂಡೊಮೆಟ್ರಿಯಲ್ ಅಂಗಾಂಶ ಮತ್ತು ಸಾಮಾನ್ಯವಾಗಿ ಗರ್ಭಾಶಯವನ್ನು ಆವರಿಸಿರುವ ಗ್ರಂಥಿಗಳು ಗರ್ಭಾಶಯದ ಸ್ನಾಯುವಿನ ಗೋಡೆಯಲ್ಲಿ ಕಂಡುಬಂದಾಗ ಅಥವಾ ಬೆಳೆಯುವಾಗ ಇದು ಸಂಭವಿಸುತ್ತದೆ.

ಋತುಚಕ್ರದಲ್ಲಿ ಈ ದಪ್ಪ ಟಿಶ್ಯೂ ಮತ್ತು ರಕ್ತಸ್ರಾವಗಳು ಸಾಮಾನ್ಯವಾಗು ಗರ್ಭಾಶಯದಲ್ಲಿ ಇರುತ್ತದೆ. ಅನೇಕ ನೋವು, ಅಧಿಕ ರಕ್ತಸ್ರಾವ ಮತ್ತು ಲೈಂಗಿಕತೆ ಸಮಯದಲ್ಲಿ ನೋವಿನಂತಹ ಗುಣಲಕ್ಷಣವನ್ನು ಹೊಂದಿದೆ. ಆದಾಗ್ಯೂ, ಕೆಲವು ಮಹಿಳೆಯರು ಈ ಸಮಸ್ಯೆ ಪತ್ತೆಯಾಗುವವರೆಗೆ ದೈಹಿಕವಾಗಿ ಯಾವುದೇ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ. ಅಡೆನೊಮೈಯೋಸಿಸ್​​ ಎಂಡೊಮೆಟ್ರಿಯಲ್​ ಜೊತೆ ಉಂಟಾಗಬಹುದು. ಇದು ಅದೇ ರೀತಿ ಇದ್ದರೂ, ಇದು ಪತ್ಯೇಕ ಸ್ಥಿತಿಯಾಗಿದೆ.

ಅಡೆನೊಮೈಯೋಸಿಸ್ ರೋಗಿಗಳು​​ ಹೆಚ್ಚಾಗಿ ಪ್ರಸೂತಿ ಮತ್ತು ಸ್ತ್ರಿರೋಗದ ಸಮಸ್ಯೆಯನ್ನು ಅನುಭವ ಹೊಂದಿರುತ್ತಾರೆ. ಈ ಕುರಿತು ಅಧ್ಯಯನಕ್ಕಾಗಿ 2004ರಿಂದ 204ರವರೆಗೆ ದೇಶಾವ್ಯಾಪಿ ಒಳರೋಗಿಗಳ (ಎನ್​ಐಎಸ್​) ಮಾದರಿಗಳ ದತ್ತಾಂಶವನ್ನು ಬಳಕೆ ಮಾಡಲಾಗುತ್ತದೆ. ಅಮೆರಿಕದಲ್ಲಿ ಆರೋಗ್ಯ ಕಾಳಜಿ ವೆಚ್ಚ ಮತ್ತು ಬಳಕೆ ಯೋಜನೆಯ ಭಾಗವಾಗಿ ಈ ಎನ್​ಐ ಇದೆ. ಇದು ಒಳರೋಗಿಗಳ ದೊಡ್ಡ ಮಟ್ಟದ ದತ್ತಾಂಶ ಸಂಗ್ರಹಣೆ ಆಗಿದೆ. ಈ ಅಧ್ಯಯನದಲ್ಲಿ 9, 094,321 ಅಡೆನೊಮೈಯೋಸಿಸ್​ ಹೊಂದಿರದ ಗರ್ಭಿಣಿರುತು ಮತ್ತು 2,467 ಅಡೆನೊಮೈಯೋಸಿಸ್​ ಗರ್ಭಿಣಿಯರ ದತ್ತಾಂಶವನ್ನು ಪಡೆಯಲಾಗಿದೆ. ಈ ವೇಳೆ ಇಬ್ಬರ ಫಲಿತಾಂಶವನ್ನು ಹೋಲಿಕೆ ಮಾಡಲಾಗಿದೆ. ಫಲಿತಾಂಶದಲ್ಲಿ ಅಡೆನೊಮೈಯೋಸಿಸ್​​ ವಯಸ್ಸಾದ, ಸ್ಥೂಲಕಾಯ ಮತ್ತು ಅಧಿಕ ರಕ್ತದೊತ್ತಡ, ಥೈರಾಯ್ಡ್​ ಸಮಸ್ಯೆ, ಪೂರ್ವದಲ್ಲಿ ಸಿ ಸೆಕ್ಷನ್​ ಅಥವಾ ಐವಿಎಫ್​ ಹೊಂದಿರುವವರಲ್ಲಿ ಪತ್ತೆಯಾಗಿದೆ. ಅಡೆನೊಮೈಯೋಸಿಸ್​ ಹೊಂದಿರುವ ಮಹಿಳೆಯರು ಹೆರಿಗೆ ವೇಳೆ 5.86 ಪಟ್ಟು ಹೆಚ್ಚಿನ ಅಪಾಯ ಹೊಂದಿರುತ್ತಾರೆ.

ಇದನ್ನೂ ಓದಿ: Infertility: ಬಂಜೆತನದಿಂದ ಬಳಲುವ ದಂಪತಿಗಳಿಗೆ ವರವಾಗಲಿದೆ ಹಾರ್ಮೋನ್​ ಚಿಕಿತ್ಸೆ; ಏನಿದು ಹೊಸ ವಿಧಾನ?

ABOUT THE AUTHOR

...view details