ವಾಷಿಂಗ್ಟನ್:ಪ್ರಾಥಮಿಕ ಶಾಲಾ ಮಕ್ಕಳು ರಜೆ ದಿನಗಳಲ್ಲಿ ಹೆಚ್ಚು ಸ್ಕ್ರೀನ್ ಟೈಂನಲ್ಲಿ (ಮೊಬೈಲ್, ಟಿವಿ) ಸಮಯ ಕಳೆಯುವುದರಿಂದ ಅವರು ಹೆಚ್ಚು ಕ್ರಿಯಾಶೀಲವಾಗಿರುವುದಿಲ್ಲ. ಇದರಿಂದ ಅವರು ಶಾಲೆ ಸಮಯಕ್ಕಿಂತ ಕೆಟ್ಟ ಆಹಾರ ಕ್ರಮ ಹೊಂದಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಕುರಿತು ಪಿಡಿಯಾಟ್ರಿಕ್ ಒಬೆಸಿಟಿಯಲ್ಲಿ ಜರ್ನಲ್ನಲ್ಲಿ ಪ್ರಕಟವಾಗಿದೆ. ಈ ಸಂಬಂಧ ಗ್ರೇಡ್ 4 ಮತ್ತು 5ರ 358 ಪ್ರಾಥಮಿಕ ಶಾಲಾ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ವೇಳೇ ಒಂದು ಗಂಟೆಗೂ ಹೆಚ್ಚು ಸಮಯ ಅವರು ಸ್ಕ್ರೀನ್ ಟೈಮ್ನಲ್ಲಿ ಕಾಲ ಕಳೆಯುತ್ತಾರೆ ಎಂದಿದ್ದಾರೆ.
ಅನಾರೋಗ್ಯಕರ ಆಹಾರ ಪದ್ಧತಿ: ರಜಾದಿನಗಳಲ್ಲಿ ಮಕ್ಕಳು ಕಡಿಮೆ ಮತ್ತು ಹೆಚ್ಚು ಅನಾರೋಗ್ಯಕರ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಅವರಲ್ಲಿ ತೂಕ ಹೆಚ್ಚಳ ಮತ್ತು ಕಳಪೆ ಆರೋಗ್ಯಕ್ಕೆ ಕಾರಣವಾಗುತ್ತದೆ. ಮಕ್ಕಳು ರಜೆ ಆರಂಭವಾಗುತ್ತಿದ್ದಂತೆ ತಮ್ಮ ದೈನಂದಿನ ಶಾಲಾ ಚಟವಟಿಕೆಗೆಯಿಂದ ಬ್ರೇಕ್ ಸಿಗುತ್ತದೆ ಎಂಬ ಉತ್ಸುಕರಾಗಿದ್ದಾರೆ. ಇದರಿಂದ ಪ್ರಯೋಜನವಾದರೂ ಮಕ್ಕಳಿಗೆ ಸ್ವಲ್ಪ ಹಿನ್ನಡೆ ಉಂಟಾಗಲಿದೆ ಎಂದು ಡಾ ವ್ಯಾಟ್ಸನ್ ತಿಳಿಸಿದ್ದಾರೆ.
ಶಾಲಾ ರಜಾದಿನಗಳಲ್ಲಿ ಮಕ್ಕಳು ಅನಾರೋಗ್ಯಕರ ನಡುವಳಿಕೆಯನ್ನು ತೋರುತ್ತಾರೆ. ಕಡಿಮೆ ಕ್ರಿಯಾಶೀಲತೆ, ಹೆಚ್ಚು ಕುಳಿತಿರುವುದು, ಹೆಚ್ಚು ಜಂಕ್ಫುಡ್ ತಿನ್ನುವುದು ಹೆಚ್ಚು ಸಮಯ ಸ್ಕ್ರೀನ್ಮುಂದೆ ಕಳೆಯುತ್ತಾರೆ. ಶಾಲೆಯಿಂದ ರಜೆ ಪಡೆದಾಗ ಗುಣಮಟ್ಟದ ಸಮಯವನ್ನು ಮೋಜು ಮಸ್ತಿಯಲ್ಲಿ ಕಳೆಯಬೇಕು. ಆದರೆ, ಅವರು, ಹೆಚ್ಚು ಸಕ್ರಿಯವಾಗಿ, ಸಾಕಷ್ಟು ಉತ್ತಮ ವ್ಯಾಯಾಮ ಹೊಂದುವುದು ಅಗತ್ಯವಾಗುತ್ತದೆ.