ಕರ್ನಾಟಕ

karnataka

ಮಾನವನ ಉಸಿರಾಟ ಪ್ರದೇಶದಲ್ಲಿ ಶೇಖರಣೆಯಾಗುತ್ತಿದೆ ಅಪಾಯಕಾರಿ ಮೈಕ್ರೋ ಪ್ಲಾಸ್ಟಿಕ್​!

By

Published : Jun 14, 2023, 5:16 PM IST

ಪ್ಲಾಸ್ಟಿಕ್​ ಕಣಗಳು ಉಸಿರಾಡುವಾಗ ಹೇಗೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

Accumulation of dangerous micro plastic in human respiratory tract
Accumulation of dangerous micro plastic in human respiratory tract

ಮಾನವ ಕಂಡು ಹಿಡಿದ ಅತ್ಯಂತ ದೊಡ್ಡ ವಿಷಕಾರಕ ಅಂಶಗಳಲ್ಲಿ ಪ್ಲಾಸ್ಟಿಕ್​ ಒಂದು. ಭೂಮಿಯಲ್ಲಿ ಕರಗಲಾರದ ಈ ಪ್ಲಾಸ್ಟಿಕ್​ ಪರಿಸರಕ್ಕೆ ಮಾತ್ರವಲ್ಲ, ಮಾನವನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ವಿಷಕಾರಕ ಮಾಲಿನ್ಯ ಮತ್ತು ರಾಸಾಯನಿಕ ಹೊಂದಿರುವ ಮೈಕ್ರೋ ಪ್ಲಾಸ್ಟಿಕ್‌​ಗಳು ಮಾನವನ ದೇಹದ ಉಸಿರಾಟ ಪ್ರದೇಶದಲ್ಲಿ ಶೇಖರಣೆಯಾಗುತ್ತಿದೆ. ಇದು ಗಂಭೀರ ಆರೋಗ್ಯ ಅಪಾಯಕ್ಕೆ ಕಾರಣವಾಗುತ್ತಿದೆ ಎಂದು ಹೊಸ ಅಧ್ಯಯನ ಎಚ್ಚರಿಸಿದೆ.

2022ರ ಸಂಶೋಧನೆಯಲ್ಲಿ ಮಾನವ ಉಸಿರಾಡುವಾಗ ಪ್ರತಿ ಗಂಟೆಗೆ 16.2 ಬಿಟ್ಸ್​ ಪ್ರಮಾಣದ ಪ್ಲಾಸ್ಟಿಕ್​​ ಕಣಗಳನ್ನು ಸೇವಿಸುತ್ತಿದ್ದಾರೆ. ಈ ಪ್ಲಾಸ್ಟಿಕ್​ ಕಣಗಳು ಪರಿಸರದಲ್ಲಿನ ಸಣ್ಣ ಶಿಲಾಖಂಡರಾಶಿಗಳಾಗಿವೆ. ಸಾಮಾನ್ಯವಾಗಿ ಇದು ವಿಷಕಾರಿ ಮಾಲಿನ್ಯಕಾರಕಗಳು ಮತ್ತು ರಾಸಾಯನಿಕಗಳನ್ನು ಹೊಂದಿರುತ್ತವೆ. ಮೈಕ್ರೋ ಪ್ಲಾಸ್ಟಿಕ್​ಗಳ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಆಸ್ಟ್ರೇಲಿಯಾದ ಸಂಶೋಧಕರು, ಕಂಪ್ಯೂಟೇಶನಲ್ ಫ್ಲುಯಿಡ್​ ಡೈನಾಮಿಕ್ಸ್ ಮಾದರಿ ಅಭಿವೃದ್ಧಿಪಡಿಸಿದ್ದು, ಗಾಳಿಯಲ್ಲಿ ಪ್ಲಾಸ್ಟಿಕ್ ಕಣಗಳು ಹೇಗೆ ಸಾಗಣೆಯಾಗುತ್ತದೆ ಮತ್ತು ಶೇಖರಣೆಯಾಗುತ್ತದೆ ಎಂದು ವಿಶ್ಲೇಷಿಸಿದ್ದಾರೆ.

ಉಸಿರಾಟದಲ್ಲಿ ಶೇಖರಣೆ: ಅಧ್ಯಯನಕಾರರು ಪ್ಲಾಸ್ಟಿಕ್​ ಕಣಗಳ ವಿವಿಧ ಆಕೃತಿ ಮತ್ತು ಗಾತ್ರದ ಚಲನೆಯನ್ನು ಹುಡುಕಿದ್ದಾರೆ. ಇವು ವೇಗ ಮತ್ತು ನಿಧಾನ ಉಸಿರಾಟ ಪರಿಸ್ಥಿತಿಯಲ್ಲಿ ಹೇಗೆ ದೇಹದೊಳಗೆ ಸೇರುತ್ತಿದೆ ಎಂಬುದನ್ನು ಗಮನಿಸಿದ್ದಾರೆ. ಈ ಫಲಿತಾಂಶವನ್ನು ಜರ್ನಲ್​ ಪಿಸಿಕ್ಸ್​ ಆಫ್​ ಫ್ಲಯಿಡ್​ನಲ್ಲಿ ಪ್ರಕಟಿಸಲಾಗಿದೆ. ಪ್ಲಾಸ್ಟಿಕ್ ಕಣ​ಗಳು ಮೂಗಿನ ಕುಹುರು ಮತ್ತು ಒರೊಫಾರೆನೆಕ್ಸ್​ ಅಥವಾ ಗಂಟಲಿನ ಹಿಂಬಾದಿ ಪತ್ತೆಯಾಗಿದೆ. ಸಂಕೀರ್ಣ ಮತ್ತು ಹೆಚ್ಚಿನ ಅಸಮ್ಮಿತ ಅಂಗರಚನಾಶಾಸ್ತ್ರಗಳಿಂದಾಗಿ ಪ್ಲಾಸ್ಟಿಕ್​ ಕಣಗಳು ಉಸಿರಾಟದ ಮೂಲಕ ಮೂಗಿನ ಕುಹರ ಮತ್ತು ಒರೊಫಾರೆನ್ಎಕ್ಸ್​​ ಮೂಲಕ ಈ ಸ್ಥಳಗಳಲ್ಲಿ ಶೇಖರಣೆಯಾಗುತ್ತದೆ ಎಂದು ಸಿಡ್ನಿ ಯೂನಿವರ್ಸಿಟಿ ಆಫ್​ ಟೆಕ್ನಾಲೊಜಿಯ ಮೊಹಮ್ಮದ್​ ಎಸ್​ ಇಸ್ಲಾಂ ತಿಳಿಸಿದ್ದಾರೆ.

ಹರಿವಿನ ವೇಗ, ಕಣ ಜಡತ್ವ, ಮತ್ತು ಅಸಮ್ಮಿತ ಅಂಗರಚನಾಶಾಸ್ತ್ರಗಳು ಈ ಒಟ್ಟಾರೆ ಶೇಖರಣೆ ಮತ್ತು ಮೂವಿನ ಕುರುಹು ಮತ್ತು ಒರೊಫಾರೆನೆಕ್ಸ್​ ಪ್ರದೇಶದಲ್ಲಿ ಹೆಚ್ಚಿನ ಸಂಗ್ರಹವಾಗುವುದಕ್ಕೆ ಪ್ರಮುಖ ಕಾರಣವಾಗಿದೆ. ಉಸಿರಾಟದ ಸ್ಥಿತಿಗತಿ ಮತ್ತು ಆಕಾರಗಳು ಗಾಳಿಯಲ್ಲಿ ಪ್ಲಾಸ್ಟಿಕ್​ ಕಣಗಳು ಒಟ್ಟಾರೆಯಾಗಿ ಸಂಗ್ರಹವಾಗಲು ಪ್ರಭಾವವಾಗುವ ಅಂಶವಾಗಿದೆ. ಪ್ಲಾಸ್ಟಿಕ್​ ಕಣಗಳು ಉಸಿರಾಡುವಿಕೆ ತೆರೆದುಕೊಳ್ಳುವಿಕೆಗೆ ಕುರಿತು ಹೆಚ್ಚಿನ ಕಾಳಜಿವಹಿಸುವ ಕುರಿತು ಲೇಖಕರು ಹೆಚ್ಚು ಒತ್ತು ನೀಡಿದ್ದಾರೆ. ಅದರಲ್ಲೂ ಹೆಚ್ಚಿನ ಪ್ಲಾಸ್ಟಿಕ್​ ಮಾಲಿನ್ಯ ಅಥವಾ ಉದ್ಯಮ ಚಟುವಟಿಕೆ ಪ್ರದೇಶದಲ್ಲಿ ಈ ಬಗ್ಗೆ ಗಮನ ನೀಡಬೇಕಿದೆ. ಈ ಫಲಿತಾಂಶವೂ ಆರೋಗ್ಯ ಸುಧಾರಣೆ ಜೊತೆಗೆ ಅಪಾಯವನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಪ್ಲಾಸ್ಟಿಕ್​ ಕಣಗಳು ಉಸಿರಾಡುವಾಗ ಹೇಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಹೆಚ್ಚಿನ ಅರಿವು ಮೂಡಿಸುವ ಬಗ್ಗೆ ಅಧ್ಯಯನ ಒತ್ತಿ ಹೇಳಿದೆ ಎಂದು ಅಧ್ಯಯನಕಾರ ಯುನ್​ ಟೊಗ್​ ಗು ತಿಳಿಸಿದ್ದಾರೆ.

ಇದನ್ನೂ ಓದಿ: World Environment Day: ಪ್ರತಿ ವರ್ಷ ಸಮುದ್ರ, ನದಿ, ಕೆರೆ ಸೇರುತ್ತಿದೆ 2 ಸಾವಿರ ಟ್ರಕ್​ ಲೋಡ್​ ಪ್ಲಾಸ್ಟಿಕ್​​

ABOUT THE AUTHOR

...view details