ವಾಷಿಂಗ್ಟನ್: ಸಾಮಾಜಿಕ ಸಂವಹನ ಆನಂದಿಸಿದರೂ ಒತ್ತಡ ಆಥವಾ ಅಹಿತಕರ ಸಾಮಾಜಿಕ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಏಕಾಂತವಾಗಿ ಕಾಲ ಕಳೆಯುವ ಉತ್ತಮ ಮಾರ್ಗ ಎಂಬುದನ್ನು ಅನೇಕ ಯುವಜನತೆ ಕಂಡುಕೊಂಡಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.
ನಡುವಳಿಕೆಗಳ ಅಭಿವೃದ್ಧಿ ಸಂಬಂಧ ನಡೆಸಿದ ಅಂತಾರಾಷ್ಟ್ರೀಯ ಜರ್ನಲ್ನಲ್ಲಿ ಏಕಾಂಗಿಯಾಗಿ ಹಲವು ಗಂಟೆಗಳ ಕಾಲ ಸಾಮಾಜಿಕ ಸಂವಹನದಲ್ಲಿ ತೊಡಗುವುದು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಈ ಹಿಂದಿನ ಅಧ್ಯಯನ ತಿಳಿಸಿತ್ತು. ಅಲ್ಲದೇ ಏಕಾಂಗಿತನ ಮತ್ತು ಭಾವನಾತ್ಮಕ ಒತ್ತಡ ಮೂಡಿಸುತ್ತದೆ ಎಂದಿತ್ತು. ಮತ್ತೊಂದು ಅಧ್ಯಯನ ಏಕಾಂಗಿಯಾಗಿ ಸಾಮಾಜಿಕ ಸಂವಹನದಲ್ಲಿ ತೊಡಗುವುದು ಸಕಾರಾತ್ಮಕತೆ ಮೂಡಿಸುತ್ತದೆ. ಜೊತೆಗೆ ಸಿಟ್ಟು, ಆತಂಕ ಮತ್ತು ಬೇಜಾರನ್ನು ನೀಗಿಸುತ್ತದೆ ಎಂದಿದೆ. ಈ ಸಂಶೋಧನೆ ಏಕಾಂತದಲ್ಲಿ ಜನರು ಸಾಮಾಜಿಕ ಸಂವಹನದಲ್ಲಿ ಕಾಲ ಕಳೆಯುವುದಕ್ಕೂ ಯಾರೊಟ್ಟಿಗೆ ಜನರು ಕಾಲ ಕಳೆಯುವಾಗ ಏಕಾಂತ ಬಯಸುತ್ತಾರೆ ಎಂಬುದರ ಮೇಲೆ ಆಧರಿಸಿದೆ.
ಸಾಮಾಜಿಕ ಸಂವಹನ ಭಯದಿಂದಾಗಿ ಆತಂಕ ಮತ್ತು ಇತರರ ಜೊತೆ ಸಂವಹನದಿಂದಾಗಿ ಅವರು ಏಕಾಂತತೆಯನ್ನು ಬಯಸುತ್ತಾರೆ. ಸಾಮಾನ್ಯಕ್ಕಿಂತ ಹೆಚ್ಚಿನ ಸಮಯವನ್ನು ಅವರು ಒಬ್ಬಂಟಿಯಾಗಿ ಕಳೆಯಲು ಇಷ್ಟಪಡುತ್ತಾರೆ ಎಂದು ಹೋಪ್ ವೈಟ್ ತಿಳಿಸಿದ್ದಾರೆ.