ಕರ್ನಾಟಕ

karnataka

ETV Bharat / sukhibhava

ಗರ್ಭಾವಸ್ಥೆಯ ಮಧುಮೇಹಕ್ಕೇನು ಚಿಕಿತ್ಸೆ? ಭರವಸೆ ಮೂಡಿಸಿದ ಹೊಸ ಅಧ್ಯಯನ ವರದಿ - ಗರ್ಭಿಣಿಯರಲ್ಲಿ ಹೊಸ ಆಶಾಕಿರಣವೊಂದನ್ನು ಮೂಡಿಸಿದೆ

ಗರ್ಭಾವಸ್ಥೆಯ ಮಧುಮೇಹ ಎಂಬುದು ಜಗತ್ತಿನಾದ್ಯಂತ ಗರ್ಭಿಣಿಯರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಯಾಗಿದ್ದು, ಪ್ರತಿ ವರ್ಷ ಮೂರು ಲಕ್ಷ ಮಹಿಳೆಯರು ಇದಕ್ಕೆ ತುತ್ತಾಗುತ್ತಿದ್ದಾರೆ.

A promising new treatment for the gestational diabetes
A promising new treatment for the gestational diabetes

By ETV Bharat Karnataka Team

Published : Oct 3, 2023, 5:02 PM IST

ವಾಷಿಂಗ್ಟನ್​: ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್​ ನಿರ್ವಹಣೆಗೆ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದ್ದು ಗರ್ಭಿಣಿಯರಲ್ಲಿ ಭರವಸೆಯ ಹೊಸ ಆಶಾಕಿರಣ ಮೂಡಿಸಿದೆ. ಈ ಕುರಿತು ಜಾಮಾ (ಜರ್ನಲ್​​ ಆಫ್​ ದಿ ಅಮೆರಿಕನ್​ ಮೆಡಿಕಲ್​ ಅಸೋಸಿಯೇಷನ್​)ನಲ್ಲಿ ಸಂಶೋಧನಾ ವರದಿ ಪ್ರಕಟಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಅನುಭವಿಸುವ ಈ ಸ್ಥಿತಿಯಿಂದ ಗರ್ಭಿಣಿ ಮತ್ತು ಮಗು ಇಬ್ಬರೂ ಕೂಡ ಆರೋಗ್ಯ ಅಪಾಯ ಎದುರಿಸುತ್ತಾರೆ. ಗಾಲ್ವೇ ವಿಶ್ವವಿದ್ಯಾನಿಲಯದ ಮೆಡಿಸಿನ್ ಪ್ರೊಫೆಸರ್ ಮತ್ತು ಸಾಲ್ಟಾ ಯೂನಿವರ್ಸಿಟಿ ಹೆಲ್ತ್ ಕೇರ್ ಗ್ರೂಪ್‌ನಲ್ಲಿ ಕನ್ಸಲ್ಟೆಂಟ್ ಎಂಡೋಕ್ರೈನಾಲಜಿಸ್ಟ್ ಆಗಿರುವ ಪ್ರೊಫೆಸರ್ ಫಿಡೆಲ್ಮಾ ಡನ್ನೆ 500ಕ್ಕೂ ಹೆಚ್ಚು ಗರ್ಭಿಣಿಯರನ್ನು ಒಳಗೊಂಡಿರುವ ಎಮೆರ್ಜೆ ಪ್ರಯೋಗದ ಮೇಲ್ವಿಚಾರಣೆ ನಡೆಸಿದ್ದಾರೆ.

ಕಳೆದ 60 ವರ್ಷಗಳಿಂದ ಟೈಪ್​ 2 ಡಯಾಬಿಟೀಸ್​ಗೆ ಮೆಟಾಪೋರ್ಮಿನ್​ ಅನ್ನು ನಿಯಮಿತವಾಗಿ ಬಳಕೆ ಮಾಡುತ್ತಿದ್ದು, ಇದು ವಾಣಿಜ್ಯವಾಗಿ ಲಭ್ಯವಿದೆ. ಗರ್ಭಿಣಿಯರ ಗುಂಪಿಗೆ 32 ಅಥವಾ 38 ವಾರವಿದ್ದಾಗ ಊಟಕ್ಕೆ ಮುಂಚೆ ಮತ್ತು ನಂತರದಲ್ಲಿ ಕಡಿಮೆ ಪ್ರಮಾಣದ ಮೆಟಾಫೋರ್ಮಿನ್​ ನೀಡಲಾಗಿದೆ. ಮೆಟಾಪೋರ್ಮಿನ್​ ಅನ್ನು ಕಡಿಮೆ ತೂಕವನ್ನು ಹೊಂದಿದಾಗ ಗರ್ಭಿಣಿ ಪಡೆದಿದ್ದು, ಈ ತೂಕ 12 ಪ್ರಸವವಾದ 12 ವಾರಗಳ ಬಳಿಕ ವಿಭಿನ್ನವಾಗಿದೆ.

ಈ ವೇಳೆ ಮಗುವಿನ ಕಳಪೆ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಮಗುವನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಬೇಕಿದೆ. ಮಕ್ಕಳಲ್ಲಿ ಉಸಿರಾಟ ಸಮಸ್ಯೆ, ಜಾಂಡೀಸ್​, ಡೆಲಿವರಿ ಟ್ರಾಮಾ ಅಥವಾ ಕಡಿಮೆ ಸಕ್ಕರೆ ಮಟ್ಟ ಕಂಡುಬಂದಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಅಲ್ಲದೇ ಪ್ರಸವದ ವೇಳೆ ಕೂಡ ಸಿಸೇರಿಯನ್​ ಹೆರಿಗೆ, ಮೆಟರ್ನಲ್​ ಹ್ಯಾಮರೇಜ್​, ಸೋಂಕು ಅಥವಾ ರಕ್ತದೊತ್ತಡದಂತಹ ಸಮಸ್ಯೆ ಕಂಡುಬಂದಿದೆ.

ಸುಧಾರಿತ ಸಕ್ಕರೆ ನಿಯಂತ್ರಣವು ಸುಧಾರಿತ ಗರ್ಭಾವಸ್ಥೆಯ ಫಲಿತಾಂಶಗಳೊಂದಿಗೆ ಸಂಬಂಧಿಸಿದೆ ಎಂಬುದಕ್ಕೆ ಪುರಾವೆಗಳಿದ್ದರೂ, ಗರ್ಭಾವಸ್ಥೆಯ ಮಧುಮೇಹದ ರೋಗನಿರ್ಣಯದ ನಂತರ ಸೂಕ್ತ ನಿರ್ವಹಣಾ ವಿಧಾನದ ಬಗ್ಗೆ ಅನಿಶ್ಚಿತತೆಯಿತ್ತು ಎಂದು ಪ್ರೋಫೆಸರ್​ ಡುನ್ನೆ ತಿಳಿಸಿದ್ದಾರೆ.

ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಆಯ್ಕೆ ನಮ್ಮ ಗುರಿ. ನಾವು ಪರ್ಯಾಯ ಮಾರ್ಗ ಹುಡುಕಿದೆವು. ಮೆಟಾಫೋರ್ಮಿನ್​ ಔಷಧವೂ ಹಿಂದಿನ ಟ್ರಯಲ್​ಗೆ ಹೋಲಿಕೆ ಮಾಡಿದಾಗ ಪರಿಣಾಮಕಾರಿಯಾಗಿ ಕಂಡುಬಂತು. ವಿಶೇಷವಾಗಿ ಅವಧಿ ಪೂರ್ವ ಮತ್ತು ಮಗುವಿನ ತೂಕದ ವಿಚಾರದಲ್ಲಿ ಆದರೂ ಕಾಳಜಿಯಾಗಿದೆ. ಗ್ಯಾಲ್ವೆ ಯುನಿವರ್ಸಿಟಿ, ಪ್ಲೆಸೆಬೊ ನಿಯಂತ್ರಣ ಪರೀಕ್ಷೆಯನ್ನು ನಡೆಸಿದ್ದು, ಮಧುಮೇಹ ಚಿಕಿತ್ಸೆಯಲ್ಲಿ ಗಂಭೀರ ಅಂತರವನ್ನು ತುಂಬಿದೆ.

ಸಾಂಪ್ರದಾಯಿಕ, ಗರ್ಭಾವಸ್ಥೆ ಮಧುಮೇಹ ಆರಂಭದಲ್ಲಿ ಆಹಾರ ಪದ್ಧತಿ ಸಲಹೆ ಮತ್ತು ವ್ಯಾಯಾಮದ ಜೊತೆಗೆ ನಿರ್ವಹಣೆ ಮಾಡಬಹುದು. ಕಳಪೆ ಗರ್ಭಾವಸ್ಥೆಯ ಪ್ರಕರಣದಲ್ಲಿ ಇನ್ಸುಲಿನ್​ ಬಳಕೆಯೂ ಸವಾಲಿನಿಂದ ಕೂಡಿರುತ್ತದೆ. ಕಡಿಮೆ ಸಕ್ಕರೆಯೂ ಮಗು ಮತ್ತು ತಾಯಿಯ ಆರೋಗ್ಯದ ಸವಾಲಿನ ಪ್ರಶ್ನೆಯಾಗಿದೆ. ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ತಾಯಂದಿರು ಅಧಿಕ ರಕ್ತದೊತ್ತಡ ಮತ್ತು ಪ್ರಿಕ್ಲಾಂಪ್ಸಿಯಾ ಅಪಾಯ ಹೊಂದಿರುತ್ತಾರೆ.

ಮಧುಮೇಹ ಹೊಂದಿರುವ ತಾಯಂದಿರಿಗೆ ಜನಿಸುವ ಮಕ್ಕಳು ತಮ್ಮದೇ ಆದ ಅಪಾಯ ಹೊಂದಿರುತ್ತವೆ. ಅದರಲ್ಲಿ ಅಧಿಕ ತೂಕ, ಜನನ ವೇಳೆ ಗಾಯ, ಉಸಿರಾಟ ಸಮಸ್ಯೆ ಮತ್ತು ಕಡಿಮೆ ಸಕ್ಕರೆ ಮಟ್ಟಗಳು ಆಗಿರುತ್ತದೆ. ಗರ್ಭಾವಸ್ಥೆಯ ಮಧುಮೇಹ ತಾಯಿ ಮತ್ತು ಮಗುವಿನಲ್ಲಿ ಮಧುಮೇಹದ ಅಪಾಯವನ್ನು ಹೊಂದಿರುತ್ತದೆ. ತಾಯಿ ಜೀವನ ಪರ್ಯಾಂತ ಹೃದಯರಕ್ತ ನಾಳದ ಸಮಸ್ಯೆಯಿಂದ ಬಳಲಬಹುದು. ಅಲ್ಲದೇ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಇದು ಗಮರ್ನಾರ್ಹ ಹೊರೆ ಹೆಚ್ಚಿಸುತ್ತದೆ.

ಎಮೆರ್ಜೆ ಅಧ್ಯಯನದ ಫಲಿತಾಂಶವೂ ಮಧುಮೇಹದ ಗರ್ಭಿಣಿಯರಲ್ಲಿ ಗಮನಾರ್ಹ ಹೆಜ್ಜೆಯಾಗಿದೆ. ಮೆಟಾಫೋರ್ಮಿನಾ ಗರ್ಭಾವಸ್ಥೆಯ ಮಧುಮೇಹ ಪರ್ಯಾಯ ಪರಿಣಾಮಕಾರಿ ಚಿಕಿತ್ಸೆಯೂ ಹೌದು. (ಎಎನ್​ಐ)

ಇದನ್ನೂ ಓದಿ: ಕಳಪೆ ನಿದ್ದೆಯಿಂದಾಗಿ ಮಹಿಳೆಯರಲ್ಲಿ ಹೈಪರ್​​ ಟೆನ್ಷನ್​​ ರಿಸ್ಕ್​; ಅಧ್ಯಯನ

ABOUT THE AUTHOR

...view details