ಕರ್ನಾಟಕ

karnataka

ETV Bharat / sukhibhava

ಗರ್ಭಿಣಿಯ ಡಯಟ್​ ಕೇವಲ ಮಗು ಮಾತ್ರವಲ್ಲ, ಮೊಮ್ಮಗುವಿನ ಮೆದುಳಿನ ಆರೋಗ್ಯವನ್ನೂ ಕಾಪಾಡುತ್ತದೆ.. ಅದು ಹೇಗೆ?

ತಾಯಿಯ ಆಹಾರ ಪದ್ದತಿಗಳು ಕೇವಲ ಆಕೆಗೆ ಹುಟ್ಟಲಿರುವ ಮಾತ್ರವಲ್ಲದೇ, ಆಕೆಯ ಪೀಳಿಗೆಯ ಮೊಮ್ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ

A pregnant diet protects not only baby but also the grandchild mind health
A pregnant diet protects not only baby but also the grandchild mind health

By

Published : Aug 7, 2023, 10:49 AM IST

Updated : Aug 7, 2023, 12:43 PM IST

ನವದೆಹಲಿ: ಗರ್ಭಾವಸ್ಥೆಯಲ್ಲಿ ತಾಯಿ ಸೇಬು ಮತ್ತು ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಆಕೆ ತನ್ನ ಮಗುವಿನ ಮಿದುಳಿನ ಆರೋಗ್ಯವನ್ನು ಮಾತ್ರವಲ್ಲ, ಮೊಮ್ಮಗುವಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾಳೆ ಎಂದು ಮೊನಾಶಾ ಯುನಿವರ್ಸಿಟಿ ನಡೆಸಿದ ಅನುವಂಶಿಕ ಮಾದರಿ ಅಧ್ಯಯನದಲ್ಲಿ ಪತ್ತೆಯಾಗಿದೆ.

ತಾಯಿಯ ಆಹಾರ ಪದ್ದತಿಗಳು ಕೇವಲ ಆಕೆಗೆ ಹುಟ್ಟಲಿರುವ ಮಾತ್ರವಲ್ಲದೇ, ಆಕೆಯ ಪೀಳಿಗೆಯ ಮೊಮ್ಮಗವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಈ ಅಧ್ಯಯನದಲ್ಲಿ ಪತ್ತೆಯಾಗಿದೆ. ಈ ಅಧ್ಯಯನವನ್ನು ನೇಚರ್​ ಸೆಲ್​ ಬಯೋಲಾಜಿಯಲ್ಲಿ ಪ್ರಕಟಿಸಲಾಗಿದೆ. ಮೊನಾಶ್ ಬಯೋಮೆಡಿಸಿನ್ ಡಿಸ್ಕವರಿ ಇನ್ಸಿಟಿಟ್ಯೂಟ್​ ಅಧ್ಯಯನದಲ್ಲಿ ಕೆಲವು ನಿರ್ದಿಷ್ಟ ಆಹಾರಗಳು ಮಿದುಳಿನ ಕಾರ್ಯಾಚರಣೆ ಕುಗ್ಗುವುದನ್ನು ತಪ್ಪಿಸುತ್ತದೆ ಎಂದು ಪತ್ತೆ ಮಾಡಿದೆ.

ವ್ಯಕ್ತಿಗಳ ಜೀನ್​ಗಳಲ್ಲಿ ಕಂಡು ಬರುವ ರೌಂಡ್‌ವರ್ಮ್‌ಗಳನ್ನು ಅನುವಂಶಿಕ ಮಾದರಿಯಾಗಿ ಬಳಸಿ, ಈ ಅಧ್ಯಯನ ನಡೆಸಿದ್ದು, ಇದು ಮಾನವ ಕೋಶದ ಒಳನೋಟವನ್ನು ನೀಡುತ್ತದೆ. ಕೆಲವು ನಿರ್ದಿಷ್ಟ ಮಾಲಿಕ್ಯೂಲ್​ಗಳು ಸೇಬು, ತುಳಸಿ, ರೋಸ್​ಮೆರಿ, ಥೈಮೆ, ಒರೆಗನೊ ಮತ್ತು ಸೇಜ್​ ರೀತಿಯ ಗಿಡಮೂಲಿಕೆಯಲ್ಲಿ ಪತ್ತೆಯಾಗುತ್ತದೆ. ಇದು ಮೆದುಳು ಸರಿಯಾಗಿ ಕೆಲಸ ಮಾಡಲು ಅಗತ್ಯವಿರುವ ಸಂವಹನ ಸ್ಥಗಿತವಾಗದಂತೆ ನೋಡಿಕೊಳ್ಳುತ್ತದೆ.

ಹಿರಿಯ ಪ್ರೋ ರೋಜೆರ್​ ಪೊಕಾಕ್​ ತಿಳಿಸುವಂತೆ, ’’ನಮ್ಮ ತಂಡ ಮಿದುಳಿನಲ್ಲಿರುವ ನರ ಕೋಶಗಳನ್ನು ತನಿಖೆ ಮಾಡಿತು. ಇದು ಆಕ್ಸಾನ್​​ ಎಂಬ ಕೇಬಲ್​ ಮೂಲಕ 8,50,000 ಕಿ.ಮೀ ಉದ್ದಕ್ಕೆ ಒಬ್ಬರಿಗೆ ಒಬ್ಬರು ಸಂಪರ್ಕ ಸಾಧಿಸಲು ಸಹಾಯ ಮಾಡಿದೆ. ಆಕ್ಸಾನ್‌ಗಳು ದುರ್ಬಲವಾದಾಗ ಅಸಮರ್ಪಕ ಕಾರ್ಯವು ಮೆದುಳಿನ ಅಪಸಾಮಾನ್ಯ ಕ್ರಿಯೆ ಮತ್ತು ನ್ಯೂರೋ ಡಿಜೆನರೇಶನ್‌ಗೆ ಕಾರಣವಾಗಬಹುದು‘‘ ಎಂದಿದ್ದಾರೆ.

ಪ್ರಾಣಿಗಳ ಮೇಲೂ ಅಧ್ಯಯನ:ಸಂಶೋಧನಾ ತಂಡವೂ ಅನುವಂಶಿಕ ಮಾದರಿ ಬಳಸಿಕೊಂಡು ಪ್ರಾಣಿಗಳ ಮೇಲೂ ಅಧ್ಯಯನ ನಡೆಸಿದೆ. ಈ ವೇಳೆ ಪ್ರಾಣಿಗಳಲ್ಲಿ ವಯಸ್ಸಾದಂತೆ ದುರ್ಬಲವಾದ ಆಕ್ಸಾನ್​ಗಳು ಮುರಿದಿದೆ. ಈ ಆಕ್ಸಾನ್​ಗಳ ಮುರಿತವನ್ನು ತಪ್ಪಿಸಲು ನೈಸರ್ಗಿಕ ಉತ್ಪನ್ನಗಳು ಆಹಾರಗಳು ಸಹಾಯ ಮಾಡಬಹುದೇ ಎಂದು ಗಮನಸಿದಾಗಿದೆ. ಈ ವೇಳೆ ಸೇಬು ಮತ್ತು ಗಿಡಮೂಲಿಕೆಯಲ್ಲಿ ಕಂಡು ಬರುವ ಅಣುಗಳು ಆಕ್ಸಾನ್​ ದುರ್ಬಲವಾಗುವುದನ್ನು ತಡೆಯುತ್ತದೆ ಎಂಬುದನ್ನು ನಾವು ಪತ್ತೆ ಮಾಡಿದ್ದೇವೆ. ಅರ್ಸೊಲಿಕ್​ ಆಮ್ಲವೂ ಹೇಗೆ ಜೀನ್​ಗಳಲ್ಲಿ ನಿರ್ದಿಷ್ಟ ಕೊಬ್ಬಿಗೆ ಹೇಗೆ ಕಾರಣವಾಗುತ್ತದೆ ಎಂದು ಪತ್ತೆ ಮಾಡಿದ್ದೇವೆ. ಈ ನಿರ್ದಿಷ್ಟ ಕೊಬ್ಬು ಆಕ್ಸಾನ್​ ಸಾಗಣೆಯನ್ನು ಸುಧಾರಿಸುವ ಮೂಲಕ ಪ್ರಾಣಿಗಳ ವಯಸ್ಸಾದಂತೆ ಆಕ್ಸಾನ್ ದುರ್ಬಲತೆಯನ್ನು ತಡೆಯುತ್ತದೆ

ತಾಯಿಯ ಕರುಳಿನಲ್ಲಿ ಆಹಾರ ಜೀರ್ಣವಾಗುವಾಗ ಅಂಡಾಶಯದಲ್ಲಿರುವ ಮೊಟ್ಟೆಯನ್ನು ಈ ಆಕ್ಸಾನ್​ಗಳು ಮುಂದಿನ ಪೀಳಿಗೆಗೂ ಸುರಕ್ಷಿತವಾಗಿರಿಸುತ್ತದೆ. ಈ ಫಲಿತಾಂಶವೂ ಭರವಸೆದಾಯಕವಾಗಿದೆ. ಈ ಬಗ್ಗೆ ಇನ್ನಷ್ಟು ದೃಢೀಕರಣಗಳು ಬೇಕಾಗಿದೆ. ಇದೇ ಮೊದಲ ಬಾರಿ ಕೊಬ್ಬನ್ನು ವಂಶವಾಹಿನಿಯಲ್ಲಿ ತೋರಿಸಿದೆ. ತಾಯಿಯ ಆಹಾರ ಪದ್ದತಿ ಕೇವಲ ತಮ್ಮ ಮಗುವಿಗೆ ಮಾತ್ರವಲ್ಲದೇ, ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ. ತಾಯಿಯ ಆಹಾರಗಳು ಮಗುವಿನ ಮಿದುಳಿನ ಅಭಿವೃದ್ಧಿ ಮತ್ತು ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿದೆ ಎಂಬುದನ್ನು ನಮ್ಮ ಅಧ್ಯಯನ ಬೆಂಬಲಿಸುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಸವ ಪೂರ್ವ ಖಿನ್ನತೆಯ ಚಿಕಿತ್ಸೆಗೆ ಮಾತ್ರೆ; ಅಮೆರಿಕದ ಎಫ್​ಡಿಎನಿಂದ ಅನುಮೋದನೆ

Last Updated : Aug 7, 2023, 12:43 PM IST

ABOUT THE AUTHOR

...view details