ನಮ್ಮ ಆರೋಗ್ಯ ಉತ್ತಮವಾಗಿ ಇರುವುದರಲ್ಲಿ ದೇಹದ ಸಾಮರ್ಥ್ಯವು (ಫಿಟ್ನೆಸ್) ಮುಖ್ಯವಾಗಿರುತ್ತದೆ. ಆ ಫಿಟ್ನೆಸ್ಗಾಗಿ ವ್ಯಾಯಾಮವು ತುಂಬಾ ಉಪಯುಕ್ತ. ಆದರೆ ವ್ಯಾಯಾಮವನ್ನು ಸರಿಯಾಗಿ ಮಾಡುವುದು ಇನ್ನೂ ತುಂಬಾ ಮುಖ್ಯವಾಗಿದೆ. ಹಾಗಾದರೆ ವ್ಯಾಯಾಮಕ್ಕೆ ಸಂಬಂಧಪಟ್ಟ ಕೆಲವು ಸಲಹೆಗಳನ್ನು ತಿಳಿಯೋಣ ಬನ್ನಿ..
- ನಿಮ್ಮ ದೇಹದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದಲ್ಲಿ ವ್ಯಾಯಾಮ ನಿಲ್ಲಿಸುವುದು ಸೂಕ್ತವಲ್ಲ. ಇದರಿಂದ ನಿಮ್ಮ ಫಿಟ್‌ನೆಸ್ ಗುರಿ ತಲುಪಲು ಕಷ್ಟವಾಗುತ್ತದೆ. ಒಂದು ಬಾರಿ ವ್ಯಾಯಾಮ ನಿಲ್ಲಿಸಿದರೆ ಪರಿಣಾಮವಾಗಿ ಅಲ್ಲಿಯವರೆಗೆ ಮಾಡಿದ ಎಲ್ಲಾ ಪ್ರಯತ್ನದ ಬೆಳವಣಿಗೆಗಳು ಹಿಂದಕ್ಕೆ ಹೋಗುತ್ತದೆ.
- ಇನ್ನು ನೀವು ವ್ಯಾಯಾಮ ಪ್ರಾರಂಭಿಸುವ 2 ಗಂಟೆಯ ಮೊದಲು ಆಹಾರವನ್ನು ತಿನ್ನಬಾರದು. ಯಾಕೆಂದರೆ ಈ ರೀತಿ ಮಾಡುವುದರಿಂದ ನಿಮ್ಮ ಸ್ನಾಯುಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗುವುದಿಲ್ಲ. ಅಲ್ಲದೆ ಇದರಿಂದ ಸ್ನಾಯು ಸೆಳೆತ ಉಂಟಾಗಬಹುದು.
- ಹಾಗೆ ಪ್ರತಿ ಬಾರಿ ವ್ಯಾಯಾಮ ಪ್ರಾರಂಭಿಸುವ ಮೊದಲು ಪೂರ್ವಸಿದ್ಧತಾ ವ್ಯಾಯಾಮಗಳು ಮಾಡುವುದು ಸಹ ಮುಖ್ಯವಾಗುತ್ತದೆ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುದರ ಜೊತೆಗೆ ರಕ್ತ ಪೂರೈಕೆಯನ್ನು ಪುನಃಸ್ಥಾಪಿಸಲಾಗುತ್ತದೆ. ಪರಿಣಾಮ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ.
- ವ್ಯಾಯಾಮದ ಸಂದಂರ್ಭದಲ್ಲಿ ಮಾಡಲು ಬಯಸುವ ಭಂಗಿಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ ಇಲ್ಲಾವಾದರೆ ಬಿದ್ದು ಗಾಯಗೊಳ್ಳುವ ಸನ್ನಿವೇಷ ಬರಬಹುದು. ಉದಾಹರಣೆಗೆ-ಟ್ರೆಡ್ ಮಿಲ್ ಮೇಲೆ ನಡೆಯುವಾಗ ಸಾಧನದ ಮೇಲೆ ಒರಗಬೇಡಿ. ಇನ್ನು, ತೂಕವನ್ನು ಎತ್ತುವಾಗ ಬೆನ್ನನ್ನು ನೇರವಾಗಿರಿಸಿ ಭುಜಗಳನ್ನು ಹಿಂದಕ್ಕೆ ಸರಿಸಿ ವಿಶ್ರಾಂತಿ ಪಡೆಯಿರಿ. ಹಾಗೆ ನಿಮ್ಮ ಮೊಣಕಾಲನ್ನು ಕೂಡ ತುಂಬಾ ಬಿಗಿಯಾಗಿ ಇಡಬೇಡಿ.
- ಕೆಲವು ರೀತಿಯ ವ್ಯಾಯಾಮಗಳನ್ನು ಮಾಡುವಾಗ, ಉಸಿರಾಟವು ಬಿಗಿಯಾಗುತ್ತದೆ. ಇದು ಆರೋಗ್ಯಕ್ಕೆ ಅಡ್ಡ ಪರಿಣಾಮ ಬೀರಬಹುದು ಯಾಕೆಂದರೆ ಉಸಿರಾಟದ ತೊಂದರೆಯು ದೇಹಕ್ಕೆ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ತೂಕವನ್ನು ಎತ್ತುವಂಥ ಸಂದಂರ್ಭದಲ್ಲಿ ಮೊದಲು ಆಳವಾದ ಉಸಿರನ್ನು ತೆಗೆದುಕೊಂಡು ನಂತರ ಆರಾಮವಾಗಿ ಬಿಡಬೇಕು.
- ಹೆಚ್ಚಿನವರಿಗೆ ತಮ್ಮ ದೇಹದ ಫಿಟ್ನೆಸ್ ಬೇಗ ವೃದ್ಧಿಯಾಗಬೇಕೆಂದು ತಮ್ಮ ಸಾಮರ್ಥ್ಯವನ್ನು ಮೀರಿ ವ್ಯಾಯಾಮ, ವರ್ಕೌಟ್ ಮಾಡುತ್ತಾರೆ. ಆದರೆ ನೆನಪಿಟ್ಟುಕೊಳ್ಳಿ ನಿಮ್ಮ ಶಕ್ತಿ ಮೀರಿ ಭಾರ ಎತ್ತಿದರೆ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಇದರಿಂದ ನೀವು ವ್ಯಾಯಾಮವನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿ ಬರಬಹುದು.