ಕರ್ನಾಟಕ

karnataka

ETV Bharat / sukhibhava

ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ತಾನದ​ ಮಗುವಿಗೆ ಮರುಜೀವ ನೀಡಿದ ಬೆಂಗಳೂರು ವೈದ್ಯರು - ಆಸ್ಟಿಯೋಪೆಟ್ರೋಸಿಸ್ ಎಂಬ ಸಮಸ್ಯೆ

ಐದು ತಿಂಗಳ ಹಸುಗೂಸು ಇನ್ಫಾನ್ಟೈಲ್​ ಆಸ್ಟಿಯೋಪೆಟ್ರೋಸಿಸ್​ ಎಂಬ ಮಾರಣಾಂತಿಕ ರೋಗದಿಂದ ಬಳಲುತ್ತಿತ್ತು.

A Bangalore doctor gave life to a Pakistani child who was suffering from a rare problem
A Bangalore doctor gave life to a Pakistani child who was suffering from a rare problem

By ETV Bharat Karnataka Team

Published : Sep 20, 2023, 5:48 PM IST

ಬೆಂಗಳೂರು: ಅಪರೂಪದ ಮತ್ತು ಜೀವಕ್ಕೆ ಕುತ್ತು ತರುವಂತಹ ಆಸ್ಟಿಯೋಪೆಟ್ರೋಸಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು, ಪಾಕಿಸ್ತಾನದ ಐದು ತಿಂಗಳ ಮಗುವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆಯನ್ನು ನೀಡಿದ್ದಾರೆ. ಇದೀಗ ಮಗು ಆರೋಗ್ಯಯುತವಾಗಿದ್ದು, ತನ್ನ ದೇಶಕ್ಕೆ ಮರಳಲು ಸಜ್ಜಾಗಿದೆ.

ಇನ್ಫಾನ್ಟೈಲ್​ ಆಸ್ಟಿಯೋಪೆಟ್ರೋಸಿಸ್​ ಎಂಬುದು ಮಾರ್ಬಲ್​ ಮೂಳೆ ರೋಗವಾಗಿದೆ. ಈ ಸಮಸ್ಯೆಗೆ ತುತ್ತಾದವರು ಅನೇಕ ಮೂಳೆಗಳ ಬಿಗಿತನ, ದೃಷ್ಟಿ ಹೀನತೆ ಮತ್ತು ಕೀವಿ ಕೇಳದಿರುವಿಕೆ ಮತ್ತು ಅಸ್ಥಿಮಜ್ಜೆ ಸಮಸ್ಯೆಗೆ ಒಳಗಾಗಿ ಅವರ ಜೀವಿತಾವಧಿಯೇ ಕುಗ್ಗುತ್ತದೆ. ಇಂತಹ ಮಗುವಿಗೆ ಹೊಸ ರೀತಿಯ ಬೋನ್​ ಮ್ಯಾರೋ ಟ್ರಾನ್ಸ್​ಪ್ಲಾಂಟ್​ ಟೆಕ್ನಿಕ್​ ಮೂಲಕ ಚಿಕಿತ್ಸೆ ನೀಡಲಾಗಿದೆ.

ಕರಾಚಿ ಮೂಲದ ದಂಪತಿಗಳಿಗೆ ದಶಕಗಳ ಬಳಿಕ ಸಮವೀಯ ಎಂಬ ಮಗು ಜನಿಸಿದೆ. ಮಗುವಿಗೆ ಎರಡು ತಿಂಗಳಿದ್ದಾಗ ಅದಕ್ಕೆ ತಿನ್ನಿಸುವುದು ಕಷ್ಟವಾಗುತ್ತಿದೆ ಎಂದು ಪಾಕಿಸ್ತಾನದ ಆಸ್ಪತ್ರೆಗೆ ಪೋಷಕರು ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗು ವಿಶೇಷವಾದ ಅನುವಂಶಿಕ ಪರಿಸ್ಥಿತಿಯಿಂದ ಬಳಲುತ್ತಿರುವುದು ಕಂಡು ಬಂದಿದೆ.

ಆಕೆಯ ಸಮಸ್ಯೆ ಕಣ್ಣು, ಕಿವಿ ಮತ್ತು ಆಕೆಯ ಮೆದುಳಿನ ಮೇಲೆ ಪರಿಣಾಮ ಬೀರಿತು ಹಲವು ಚಿಕಿತ್ಸೆಗಳ ಬಳಿಕ ಪೋಷಕರು ಬೆಂಗಳೂರಿನ ನಾರಾಯಣ ಹೆಲ್ತ್​ ಸಿಟಿಗೆ ಮಗುವನ್ನು ಕರೆ ತಂದಿದ್ದಾರೆ.

ಮಾರ್ಚ್​ನಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ದೃಷ್ಟಿ ಕಳೆದುಕೊಳ್ಳುತ್ತಿರುವುದಾಗಿ ಪತ್ತೆಯಾಗಿದೆ. ಆಕೆಯ ದೃಷ್ಟಿಯನ್ನು ಸುರಕ್ಷೆ ಮಾಡುವ ನಿಟ್ಟಿನಲ್ಲಿ ತುರ್ತು ಕ್ರನಿಯಲ್​ ಡೆಕಂಪ್ರೆಷನ್​​ ಪ್ರಕ್ರಿಯೆ ನಡೆಸಿದ್ದಾರೆ. ಇದರ ಜೊತೆಗೆ ಮೆಟಿಕ್ಯಲೊಸ್​ ಪ್ರಿ ಟ್ರಾನ್ಸ್​​ಪ್ಲಾಂಟ್ ಅನ್ನು ಸಿದ್ಧತೆ ಮಾಡಿದ್ದು, ಆಕೆಯ ತಂದೆಯಿಂದ ಅರ್ಧ ಹೋಲಿಕೆಯಾದ ಕಾಂಡ ಕೋಶವನ್ನು ಮೇ 16ರಂದು ಬಳಸಿಕೊಳ್ಳಲಾಗಿದೆ.

ಬೋನ್​ ಮ್ಯಾರೋ ಟ್ರಾನ್ಸ್​ಪ್ಲಾಂಟ್​ನಿಂದ ಇದು ಗುಣಮುಖವಾಗಿತ್ತದೆ ಎಮದು ನಿರೀಕ್ಷಿಸಲಾಗಿದೆ. ಆದರೆ, ಈ ಚಿಕಿತ್ಸೆಯನ್ನು ದೇಹ ತಿರಸ್ಕರಿಸಿದೆ. ಈ ವೇಳೆ ವೈದ್ಯರು ಟಿಸಿಆರ್​ ಅಲ್ಫಾ ಬೆಟಾ ಮತ್ತು ಸಿಡಿ 45 ಆರ್​ಎ ಡೆಪ್ಲೆಟಿಯನ್​ ಟೆಕ್ನಿಕ್​ ಬಳಕೆ ಮಾಡಿದ್ದಾರೆ. ಸಂಪೂರ್ಣ ಹೊಂದಾಣಿಕೆಯ ದಾನಿಗಳಿಲ್ಲದ ರೋಗಿಗಳಿಗೆ ಅನುಗುಣವಾಗಿ ಅತ್ಯಾಧುನಿಕ ವಿಧಾನವು ಗಮನಾರ್ಹ ಯಶಸ್ಸನ್ನು ತೋರಿಸಿದೆ.

ಇನ್ಫಾನ್ಟೈಲ್​ ಆಸ್ಟಿಯೋಪೆಟ್ರೋಸಿಸ್ ಅಪರೂಪದ ಅನುವಂಶಿಕತೆ ಸಮಸ್ಯೆ ಆಗಿದ್ದು, ಮೂಳೆ, ದೃಷ್ಟಿ ಮತ್ತು ಕೇಳುವಿಕೆ ಸಮಸ್ಯೆ ಮತ್ತು ಬೋನ್​ ಮ್ಯಾರೋ ವಿಫಲತೆಯಂತಹ ಅನೇಕ ಸಮಸ್ಯೆಗೆ ಕಾರಣವಾಗಿತ್ತದೆ. ಇದು ಕೆಲವೇ ವರ್ಷದಲ್ಲಿ ಜೀವಕ್ಕೆ ಮಾರಣಾಂತಿಕವಾಗಲಿದೆ. ಬೋನ್​ ಮ್ಯಾರೋ ಟ್ರಾನ್ಸ್​ಪ್ಲಾಟ್​​ ತಂತ್ರಜ್ಞಾನವೂ ಇದರ ಚಿಕಿತ್ಸಕ ಆಯ್ಕೆ ಆಗಿದ್ದು ಈ ತಂತ್ರವು ಸವಾಲಿನಿಂದ ಕೂಡಿದೆ ಎಂದು ನಾರಾಯಣ ಹೆಲ್ತ್​​ ಸಿಟಿಯ ಆನ್​ಕಾಲಾಜಿ ವೈಸ್​ ಚೆರ್ಮನ್​ ಮತ್ತು ಪಿಡಿಯಾಟ್ರಿಕ್​ ಹೆಮೆಟೊಲಾಜಿ ಆನ್​ಕೊಲಾಜಿ ನಿರ್ದೇಶಕ ಸುನೀಲ್​ ಭಟ್​​ ತಿಳಿಸಿದ್ದಾರೆ.

ನಾಲ್ಕು ತಿಂಗಳ ಟ್ರಾನ್ಸ್​ಪ್ಲಾಂಟೇಷನ್​ ಬಳಿಕ ಮಗುವು ಶೇ 100ರಷ್ಟು ದಾನಿಗಳ ಕೋಶದಿಂದ ರೋಗ ಮುಕ್ತವಾಗಿದೆ ಎಂದು ವೈದ್ಯರು ತಿಳಿಸಿದ್ದು, ಗುಣಮುಖ ಹಾದಿಯಲ್ಲಿದೆ. ಆಕೆಯ ಮೂಳೆಗಳು ಪುನರ್​ ಮಾದರಿಯತ್ತ ಸಕಾರಾತ್ಮಕ ಪ್ರಕ್ರಿಯೆ ತೋರುತ್ತಿವೆ.

ಮಗುವು ಇದೀಗ ಎಲ್ಲರಂತೆ ಸಾಮಾನ್ಯವಾಗಲಿದ್ದು, ಅಪರೂಪದ ಕಾಯಿಲೆಯಿಂದ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಗುವಿನ ತಂದೆ ಜುನೈದ್​ ಅಲಿ ಮಾತನಾಡಿ, ವೈದ್ಯರಿಗೆ ಮತ್ತು ತಜ್ಞರಿಗೆ ಧನ್ಯವಾದ ಅರ್ಪಿಸಿದ್ದಾರೆ. ಮಗಳನ್ನು ಕೇವಲ ಕಾಳಜಿ ತೋರಿ ಅವರ ಕೇವಲ ವೈದ್ಯಕೀಯ ಪರಿಹಾರ ನೀಡಲಿಲ್ಲ. ಈ ಸಮಯದಲ್ಲಿ ಅವರು ತಮ್ಮ ಕುಟುಂಬದ ಭಾಗವಾದರು ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಅಪೌಷ್ಟಿಕತೆಯಿಂದ ಮಗುವಿನ ಬೆಳವಣಿಗೆ ಕುಂಠಿತ... ಸಾವಿನ ಅಪಾಯವೂ ಹೆಚ್ಚು..

ABOUT THE AUTHOR

...view details