ಲಖನೌ( ಉತ್ತರಪ್ರದೇಶ): ಅಪಘಾತ ಆದ ಸ್ಥಳದಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಯ ನಿರ್ವಹಣೆ ಸಂದರ್ಭದಲ್ಲಿ ನಡೆಸಲಾಗುವ ತಪ್ಪಾಗಿ ನಡುವಳಿಕೆಗಳಿಂದ ಶೇ 90ರಷ್ಟು ಆಘಾತ ಪ್ರಕರಣಗಳು ಸಂಭವಿಸುತ್ತದೆ. ಇದು ರೋಗಿಯ ಗಾಯವನ್ನು ಮತ್ತಷ್ಟು ಕೆಟ್ಟದಾಗಿಸುವ ಜೊತೆಗೆ ದೀರ್ಘಕಾಲಿನ ಚಿಕಿತ್ಸೆ ಬೇಡುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.
ಕಿಂಗ್ ಜಾರ್ಜ್ನ ಮೆಡಿಕಲ್ ಯುನಿವರ್ಸಿಟಿಯ ಟ್ರಾಮಾ ಸರ್ಜರಿ ವಿಭಾಗ ಅಪಘಾತ ವಲಯದಲ್ಲಿ ಹೇಗೆ ಆಘಾತ ಪ್ರಕರಣಗಳನ್ನು ನಿರ್ವಹಣೆ ಮಾಡಲಾಗುತ್ತದೆ ಎಂದು ಸಾರ್ವಜನಿಕರೊಂದಿಗೆ ಸಂವಹನ ಸೆಷನ್ ನಡೆಸಿದೆ. ಟ್ರಾಮಾ ಸರ್ಜರಿ ವಿಭಾಗದ ಹಿರಿಯ ಸಿಬ್ಬಂದಿ ಪ್ರೋ ಸಮೀರ್ ಮಿಶ್ರಾ ಮಾತನಾಡಿ, ಅಪಘಾತದ ಸ್ಥಳದಲ್ಲಿ ಗಾಯಾಳುವಿನ ಸರಿಯಾದ ಚಿಕಿತ್ಸೆಯನ್ನು ನೀಡಿದಲ್ಲಿ, ರಕ್ತಸ್ರಾವ ತಡೆಯುವ, ಮೂಳೆ ಮುರಿತ ತಪ್ಪಿಸುವ ಮತ್ತು ಶೀಘ್ರ ಗುಣಮುಖದ ಭರವಸೆ ಕಾಣಬಹುದು. ದುರದೃಷ್ಟ ಇಂತಹವುಗಳು ನಡೆಯುವುದಿಲ್ಲ ಶೇ 90ರಷ್ಟು ಅಪಘಾತ ಪ್ರಕರಣದಲ್ಲಿ ಕೆಟ್ಟ ಗಾಯಗಳ ಫಲಿತಾಂಶದಿಂದ ಕೂಡಿರುತ್ತದೆ ಎಂದಿದ್ದಾರೆ.
ಸುರಕ್ಷತಾ ನಿಯಮ ಅನುಕರಣೆ: ಅಪಘಾತ ಸ್ಥಳದಲ್ಲಿ ಪ್ಯಾರಾಮೆಡಿಕ್ಗಳ ಅಥವಾ ಇತರ ಜನರು, ಅಪಘಾತಗೊಂಡ ವ್ಯಕ್ತಿಯ ಅಘಾತವನ್ನು ತಡೆಯುವ ಸರಳ ಅಭ್ಯಾಸಗಳನ್ನು ಅನುಸರಿಸಬಹುದು. ಉದಾಹರಣೆಗೆ ವ್ಯಕ್ತಿಯನ್ನು ಸ್ಟ್ರೇಚರ್ ಮೇಲೆ ಮಲಗಿಸುವಾಗ ನಾಲ್ಕು ಜನ ಗಾಯಾಳುವನ್ನು ಎತ್ತಬೇಕು. ಕಾರಣ ಈ ಸಂದರ್ಭದಲ್ಲಿ ಬೆನ್ನು ಹುರಿ ಮೇಲೆ ಯಾವುದೇ ಒತ್ತಡ ಆಗದಂತೆ ನೋಡಿಕೊಳ್ಳುವುದು ಉತ್ತಮ.