ಹತ್ತಿರ ಇದ್ದವರೇನೋ ರೋಜ್ ನೀಡಿ, ಕೇಕ್ ಕತ್ತರಿಸಿ, ಸ್ಪೆಷಲ್ ಡಿನ್ನರ್ ಏರ್ಪಡಿಸಿ, ಚುಂಬನ- ಅಪ್ಪುಗೆ ನೀಡಿ, ಕೆಲ ಸ್ಥಳಗಳಿಗೆ ಭೇಟಿ ನೀಡಿ ಹೀಗೆ ವಿವಿಧ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿಕೊಳ್ಳುತ್ತಾರೆ. ಆದರೆ, ದೂರ ದೂರ ಇರುವವರು ಹೇಗೆ ವ್ಯಾಲೆಂಟೈನ್ಸ್ ಡೇ ಆಚರಣೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ 9 ಟಿಪ್ಸ್..
1. ವರ್ಚುಯಲ್ ದಿಂಬಿನ ಮಾತುಕತೆ: ಈಗೆನಿದ್ದರೂ ಎಲ್ಲ ವರ್ಚುಯಲ್. ಅನೇಕ ನಿಶ್ಚಿತಾರ್ಥ, ವಿವಾಹಗಳೇ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದಿರುವ ಉದಾಹರಣೆಗಳಿವೆ. ನಿಮ್ಮ ಸಂಗಾತಿ ಜೊತೆ ಈ ದಿನದಂದು ವಿಡಿಯೋ ಕರೆ ಮಾಡಿ ಇಬ್ಬರು ದಿಂಬನ್ನು ತಬ್ಬಿಕೊಂಡು ಮುದ್ದಾಗಿ ಮಾತನಾಡಿಕೊಳ್ಳಿ. ಈ ವರ್ಚುಯಲ್ ಪಿಲ್ಲೋ ಟಾಕ್ ನಿಮ್ಮ ಆಸೆಗಳನ್ನು ವರ್ಧಿಸುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ನೀವು ನಂಬಲಾಗದಷ್ಟು ಸಂಪರ್ಕ ಹೊಂದುವಂತೆ ಮಾಡುತ್ತದೆ.
2. ವರ್ಚುಯಲ್ ಕ್ಯಾಂಡಲ್ ಲೈಟ್ ಡಿನ್ನರ್: ಸಂಬಂಧಗಳನ್ನು ಬೆಸೆಯುವಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾಂಡಲ್ ಲೈಟ್ ಡಿನ್ನರ್ ಏರ್ಪಡಿಸಿ ನಿಮ್ಮ ಸಂಗಾತಿಗೆ ವಿಡಿಯೋ ಕರೆ ಮಾಡಿ ಸರ್ಪ್ರೈಸ್ ನೀಡಿ. ಸೌಮ್ಯವಾದ ಬೆಳಕಿನೊಂದಿಗೆ ರೋಮ್ಯಾಂಟಿಕ್ ಟ್ಯೂನ್ ಕೇಳುವಂತೆಯೂ ಮಾಡಿ. ನಿಮ್ಮ ಸಂಗಾತಿಯ ನೆಚ್ಚಿನ ಆಹಾರವನ್ನು ತಯಾರಿಸಿರುವುದನ್ನು ತೋರಿಸಿ. ವೈನ್ ಗ್ಲಾಸ್ ಕೈಯಲ್ಲಿ ಹಿಡಿದು ನಿಮ್ಮ ರೊಮ್ಯಾಂಟಿಕ್ ಸಂಭಾಷಣೆ ಆರಂಭಿಸಿ.
3. ಅತೀಂದ್ರಿಯ ಓದುವಿಕೆ:ನಿಮ್ಮ ಸಂಗಾತಿಯ ಕಣ್ಣನ್ನ ನೋಡಿ ಮನಸ್ಸಲ್ಲಿ ಏನಿದೆ ಎಂಬುದನ್ನು ಓದುವ ಪ್ರಯತ್ನ ಮಾಡಿ. ಇದು ನಿಮ್ಮ ಜೀವನದ ಉದ್ದೇಶ, ಭರವಸೆಗಳು ಮತ್ತು ಕನಸುಗಳ ಬಗ್ಗೆ ಕ್ರಿಯಾತ್ಮಕ ಸಂಭಾಷಣೆಗೆ ನಿಮ್ಮಿಬ್ಬರನ್ನೂ ಕರೆದೊಯ್ಯುತ್ತದೆ.
4. ಕಲಾಕೃತಿ ರಚನೆ: ಆಡಿಯೋ - ವೀಡಿಯೊ ಚಾಟ್‌ಗಳಿಗಿಂತ ಹೆಚ್ಚು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಕಲಾಕೃತಿಗಳು. ನಿಮ್ಮ ಕೈಲಾದ ಮಟ್ಟಿಗೆ ಪೇಂಟಿಂಗ್, ಡ್ರಾಯಿಂಗ್ ಸೇರಿದಂತೆ ಯಾವುದಾದರೂ ಒಂದು ಬಗೆಯ ಕಲಾಕೃತಿ ರಚಿಸಿ ಅದನ್ನು ನಿಮ್ಮ ಸಂಗಾತಿಗೆ ಕಳುಹಿಸಿಕೊಡಿ. ಇದಕ್ಕಾಗಿ ನೀವು ಉತ್ತಮ ಕಲಾವಿದರೇ ಆಗಬೇಕಾಗಿಲ್ಲ. ಹೀಗೆ ಮಾಡುವುದರಿಂದ ನೀವು ಮತ್ತಷ್ಟು ಹತ್ತಿರವಾಗುತ್ತೀರಿ.