ನವದೆಹಲಿ: ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಇತ್ತೀಚಿಗೆ ನಡೆಸಿದ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಆಧಾರ್ ದೃಢೀಕರಣದ ಸೈನ್ ಅಪ್ ಮೂಲಕ ವೆಬ್ಸೈಟ್ನಲ್ಲಿ ಅಂಗಾಂಗ ದಾನ ಪ್ರಕ್ರಿಯೆಗೆ ನೋಂದಣಿ ನಡೆಸಬಹುದಾಗಿದೆ.
ಸೆಪ್ಟೆಂಬರ್ 16ರಿಂದ ಆರಂಭದಾದ ಈ ನೋಂದಣಿಯಲ್ಲಿ 82 ಸಾವಿರ ಮಂದಿ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದು, 30 ರಿಂದ 44 ವರ್ಷದ ಗುಂಪಿನ ಈ ಅಂಗಾಂಗ ದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ಎನ್ಒಟಿಟಿಒ ವೆಬ್ಸೈಟ್ ದತ್ತಾಂಶ ತಿಳಿಸಿದೆ.
ವೆಬ್ಸೈಟ್ನಲ್ಲಿ ಅಪ್ಡೇಟ್ ಆದ ದತ್ತಾಂಶದ ಪ್ರಕಾರ, 30 - 44 ವರ್ಷದ 40, 320 ಮಂದಿ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿದ್ದಾರೆ. ಇದರಲ್ಲಿ 18-29 ವರ್ಷದ 18,160 ಮಂದಿ ಈ ಪ್ರತಿಜ್ಞೆ ಮಾಡಿದರೆ 45 ರಿಂದ 59 ವರ್ಷದ ಗುಂಪಿದ 2,592 ಅಂಗಾಂದ ದಾನಕ್ಕೆ ಮುಂದಾಗಿದ್ದಾರೆ. ಇನ್ನು ಇದರಲ್ಲಿ 47,094 ಮಂದಿ ಮಹಿಳೆಯರಾದರೆ, 35,726 ಮಂದಿ ಪುರುಷರಾಗಿದ್ದು, 12 ಮಂದು ತೃತೀಯ ಲಿಂಗಿಗಳು ಅಂಗಾಂಗದಾನಕ್ಕೆ ಪೋರ್ಟಲ್ ಮೂಲಕ ಹೆಸರು ಖಾತ್ರಿಗೊಳಿಸಿದ್ದಾರೆ.
ಈ ಅಂಗಾಂಗ ದಾನ: ಈ ದಾನ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಂದರೆ 23,369 ಮಂದಿ ಹೆಸರು ನೋಂದಾಯಿಸಿದ್ದು, ನಂತರದ ಸ್ಥಾನದಲ್ಲಿ 18,847 ಮತ್ತು ತೆಲಂಗಾಣದಲ್ಲಿ 11,564 ಮಂದಿ ಪ್ರತಿಜ್ಞೆ ಮಾಡಿದ್ದಾರೆ. ಇದರಲ್ಲಿ ಹೆಚ್ಚಿನ ಮಂದಿ ಕಿಡ್ನಿ, ಹೃದಯ, ಯಕೃತ್, ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಕರುಳು ದಾನ ಮಾಡುವುದಾಗಿ ತಿಳಿಸಿದ್ದಾರೆ.