ಮುಂಬೈ:ಮನೆ ಮತ್ತು ಕಚೇರಿಯಲ್ಲಿನ ಅತಿ ಹೆಚ್ಚಿನ ಕೆಲಸ ಆಯಾಸಕ್ಕೆ ಕಾರಣವಾಗುತ್ತದೆ. ಯಾವುದೇ ವಯೋಮಾನದವರಲ್ಲಿ ಇರಲಿ ಆಯಾಸ ಕಾಡುವುದು ಸಹಜ. ಹಿರಿಯರಲ್ಲಿ ಇದು ಕಾಮನ್ ಕೂಡಾ. ಆದರೆ, 80 ವರ್ಷದ ಅಜ್ಜಿಯೊಬ್ಬರ ಉತ್ಸಾಹ ನೋಡಿದರೆ ನೀವು ಬೆರಾಗುತ್ತೀರಿ. ಈ ವಯಸ್ಸಿನಲ್ಲೂ ಇವರು ಯಾರದೇ ಸಹಾಯವನ್ನು ಪಡೆಯದೇ ಎಲ್ಲಾ ಕೆಲಸಗಳನ್ನು ಅವರು ನಿರ್ವಹಿಸುತ್ತಾರೆ.
ಇತ್ತೀಚೆಗೆ ಅವರು ಟಾಟಾ ಮುಂಬೈ ಮರಾಧಾನ್ನಲ್ಲಿ ಕೂಡ ಭಾಗಿಯಾಗಿದ್ದಾರೆ. ಇದರಲ್ಲಿ ಅವರು ಯಾವುದೇ ಆಯಾಸವಿಲ್ಲದೇ ಅವರು 5 ಕಿ.ಮೀ ಅನ್ನು ಓಡಿ, ಎಲ್ಲರನ್ನು ಅಚ್ಚರಿ ಪಡಿಸಿದ್ದಾರೆ. ಈ ಉತ್ಸಾಹಕ್ಕೆ ಕಾರಣ ಏನು? ಅಜ್ಜಿಯ ಉತ್ಸಾಹದ ಗುಟ್ಟು ಏನು ಎಂಬುದು ಇಲ್ಲಿದೆ. ಮ್ಯಾರಾಥಾನ್ ಓಟಕ್ಕೆ ವಯಸ್ಸು ಗಣನೆಗೆ ಬರುವುದಿಲ್ಲ. ಮಕ್ಕಳಿಂದ ವಯಸ್ಸಾದವರು ಕೂಡ ಇದರಲ್ಲಿ ಓಡಬಹುದಾಗಿದೆ. ಪ್ರತಿಯೊಬ್ಬರು ಕ್ರಿಯಾಶೀಲರಾಗಿ ಇದರಲ್ಲಿ ಭಾಗಿಯಾಗುವುದನ್ನು ಕಾಣಬಹುದಾಗಿದೆ. ಮುಂಬೈನಲ್ಲಿ ಪ್ರತಿ ವರ್ಷ 'ಟಾಟಾ ಮುಂಬೈ ಮರಾಥಾನ್' ಏರ್ಪಡಿಸಲಾಗುತ್ತದೆ. ಇದರಲ್ಲಿ 80 ವರ್ಷದ ಅಜ್ಜಿ ಎರಡು ವರ್ಷದ ಅಂತರದ ಬಳಿಕ ಈ ಮ್ಯಾರಾಥಾನ್ನಲ್ಲಿ ಭಾಗಿಯಾಗಿ, ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
50 ನಿಮಿಷದಲ್ಲಿ.. 5 ಕಿ.ಮೀ..!:ಮಹಾರಾಷ್ಟ್ರದ 80 ವರ್ಷದ ಭಾರ್ತಿ ಎಂಬುವವರು ಈ ಸಾಹಸ ತೋರಿದ ಅಜ್ಜಿ. 9 ಗಜದ ಸೀರೆಯುಟ್ಟ ಅಜ್ಜಿ, ಸ್ಪೋರ್ಟ್ಸ್ ಶೂ ಧರಿಸಿ ಓಡಿದ್ದರು. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಅವರು 51 ನಿಮಿಷದಲ್ಲೇ 4.2 ಕಿ.ಮೀ ಓಡಿ ಗಮನ ಸೆಳೆದಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಭಾರ್ತಿ ಉತ್ಸಾಹ, ವೇಗ ಕೆಲವೊಮ್ಮೆ ನಿಧಾನವಾಗಿ ಓಡಿದರೆ ಹೊರತು ಅವರಿಗೆ ಆಯಾಸ ಕಾಡಲಿಲ್ಲ.