ವೆಟ್ ವೈಪ್ಸ್ (ಒದ್ದೆ ಒರೆಸುವ ಬಟ್ಟೆ)ಅನ್ನು ಸಾಮಾನ್ಯವಾಗಿ ಚರ್ಮವನ್ನು ಸ್ವಚ್ಛಗೊಳಿಸಲು, ಡೈಪರ್ ಬದಲಾಯಿಸುವಾಗ ಅಥವಾ ಮನೆಯಲ್ಲಿ ಟೇಬಲ್ ಸೇರಿದಂತೆ ಕೆಲ ಮೇಲ್ಮೈಗಳನ್ನು ಸ್ವಚ್ಛಗೊಳಿಸಲು ಸಹ ಬಳಸಬಹುದು. ಸಾಮಾನ್ಯವಾಗಿ ನಾವು ನಮ್ಮ ಮನೆಯಲ್ಲೇ ವೈರಸ್ ಅನ್ನು ಸ್ವಚ್ಛಗೊಳಿಸುವ ಒರೆಸುವ ಬಟ್ಟೆಗಳನ್ನು ಹುಡುಕುತ್ತೇವೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಬ್ಯಾಕ್ಟೀರಿಯಾ ವಿರೋಧಿ ವೆಟ್ ವೈಪ್ಗಳನ್ನು ನಾವು ಖರೀದಿಸಿ ಬಳಸುತ್ತೇವೆ.
ವೆಟ್ ವೈಪ್ಗಳನ್ನು ಬಳಸುವಾಗ ನಾವು ಮಾಡುವ ಕೆಲ ಸಾಮಾನ್ಯ ತಪ್ಪುಗಳು ಇಲ್ಲಿವೆ. ಆದಷ್ಟು ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸುವುದು ಉತ್ತಮ.
1.ದೇಹದ ಸ್ವಚ್ಛತೆಗೆ ಬಳಸುವುದು
ಚರ್ಮದ ಸ್ವಚ್ಛತೆಗಾಗಿ ಸಾಮಾನ್ಯವಾಗಿ ಆ್ಯಂಟಿ ಬ್ಯಾಕ್ಟೀರಿಯಾ ವೆಟ್ ವೈಪ್ಸ್ ಬಳಸುತ್ತೇವೆ. ಆದರೆ ಯಾವುದೇ ಅಡ್ಡ ಪರಿಣಾಮವಿಲ್ಲವೆಂದು ನಾವು ನಂಬುವ ಈ ವೈಪ್ಗಳಿಂದ ದದ್ದುಗಳು, ತುರಿಕೆ ಅಥವಾ ಇತರ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬೇರೆ ಬೇರೆ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಕ್ಕೆಲ್ಲಾ ಅದರಲ್ಲಿರುವ ರಾಸಾಯನಿಕಗಳು ಕಾರಣ. ಹೀಗಾಗಿ ಖರೀದಿಸುವ ಮೊದಲು ಅದರ ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ. ವಿಶೇಷವಾಗಿ ಮಕ್ಕಳಿಗಾಗಿ ಖರೀದಿಸುವಾಗ ಇನ್ನೂ ಎಚ್ಚರಿಕೆಯಿಂದಿರಿ.
2. ಗಟ್ಟಿಯಾದ ಮೇಲ್ಮೈಗಳಿಗೆ ಮಾತ್ರ
ಈ ಒರೆಸುವ ವೆಟ್ ವೈಪ್ಗಳಿಂ ಸೋಫಾಗಳಂತಹ ಮೃದು ಮೇಲ್ಮೈಗಳನ್ನು ಒರೆಸಲು ಬಳಸಬಾರದು. ಆದ್ದರಿಂದ, ಟೇಬಲ್‌ಗಳಂತಹ ಗಟ್ಟಿ ಮೇಲ್ಮೈಗಳ ಒರೆಸುವಿಕೆಗೆ ಇವು ಉತ್ತಮ. ಅಲ್ಲಿ ಅವುಗಳ ತೇವಾಂಶವು ಸ್ವಲ್ಪ ಸಮಯದವರೆಗೆ ಉಳಿಯುತ್ತದೆ.
3. ವೈಪ್ಗಳ ಬರುಬಳಕೆ ಬೇಡ
ಒಂದು ಮೇಲ್ಮೈಯನ್ನು ಸ್ವಚ್ಛಗೊಳಿಸಿ, ನಂತರ ಅದೇ ವೈಪ್ಗಳನ್ನು ಬಳಸುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ನಿಮ್ಮ ಮನೆಯ ಸುತ್ತಲೂ ಹರಡಬಹುದು. ವಿಶೇಷವಾಗಿ ಸೋಂಕಿತ ಮೇಲ್ಮೈಗಳಿಗೆ ಪ್ರತ್ಯೇಕ ವೈಪ್ಗಳನ್ನು ಬಳಸಿ.
4. ಹಣ್ಣುಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಅಲ್ಲ