ನ್ಯೂಯಾರ್ಕ್: ಇತ್ತೀಚಿನ ದಿನಗಳಲ್ಲಿ ಹೃದಯದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಎಂದು ಹೆಚ್ಚು ಮಂದಿ ಅವಕಾಡೊ ಎಣ್ಣೆ ಬಳಕೆಗೆ ಮುಂದಾಗುತ್ತಾರೆ. ಬೇಡಿಕೆ ಹೆಚ್ಚಿದಂತೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಎಣ್ಣೆಗಳು ಕೂಡ ಕಲಬೆರಕೆಯಾಗುತ್ತಿವೆ. ಈ ಕುರಿತು ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಶೇ 70ರಷ್ಟು ಅವಕಾಡೊ ಎಣ್ಣೆಗಳು ಕಲಬೆರಕೆಯಾಗಿದ್ದು, ಅವುಗಳನ್ನು ಇತರೆ ಎಣ್ಣೆಗಳೊಂದಿಗೆ ಬೆರೆಸಲಾಗುತ್ತಿದೆ ಎಂಬ ಸತ್ಯಾಂಶ ಹೊರಬಂದಿದೆ.
ಡೆವಿಸ್, ಕ್ಯಾಲಿಫೋರ್ನಿಯಾ ಯುನಿರ್ವಸಿಟಿ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿರುವ 36 ಖಾಸಗಿ ಲೇಬಲ್ ಅವಕಾಡೊ ಎಣ್ಣೆ ಉತ್ಪನ್ನಗಳ ಗುಣಮಟ್ಟ ಮತ್ತು ಶುದ್ಧತೆ ಪರಿಶೀಲನೆ ನಡೆಸಲಾಗಿದೆ. ಫಲಿತಾಂಶವನ್ನು ಜರ್ನಲ್ ಫುಡ್ ಕಂಡ್ರೊಲ್ನಲ್ಲಿ ಪ್ರಕಟಿಸಲಾಗಿದೆ.
ಫಲಿತಾಂಶದಲ್ಲಿ ಶೇ 31 ರಷ್ಟು ಮಾದರಿಗಳ ಪರೀಕ್ಷೆಯಲ್ಲಿ ಶುದ್ದತೆ ಬಂದಿದ್ದು, ಶೇ 36 ರಷ್ಟು ಪ್ರಮಾಣದ ಶುದ್ಧತೆ ಗುಣಮಟ್ಟದಲ್ಲಿ ಕಳಪೆಯಾಗಿದೆ ಎಂದು ತಿಳಿಸಿದೆ. ಈ ಶುದ್ಧತೆಯ ಅಧ್ಯಯನಕ್ಕಾಗಿ ಫ್ಯಾಟಿ ಆಮ್ಲ, ಸ್ಟೆರೊಲ್ಸ್ ಮತ್ತು ಇತರೆ ಅಂಶಗಳ ಮೂಲಕ ವಿವಿಧ ಅವಕಾಡೊ ಎಣ್ಣೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಅಮೆರಿಕ ಮತ್ತು ಕೆನಡಾದ 19 ರಿಟೈಲ್ ಶಾಪ್ಗಳಿಂದ ವಿವಿಧ ದರದ ಎಣ್ಣೆಗಳನ್ನು ಖರೀದಿಸಿ ಅಧ್ಯಯನ ನಡೆಸಲಾಗಿದೆ. ಇದಕ್ಕೆ ಕಡಿಮೆ ಬೆಲೆಯ ಎಣ್ಣೆಗಳು ಹೆಚ್ಚಾಗಿ ಕಲಬೆರಕೆಯಾಗಿವೆ. ಇದೇ ವೇಳೆ ಹೆಚ್ಚಿನ ಬೆಲೆಯ ಎಣ್ಣೆಗಳು ಶುದ್ಧತೆ ಮತ್ತು ಗುಣಮಟ್ಟದ ಬಗ್ಗೆ ಕೂಡ ಸಕಾರಾತ್ಮಕವಾಗಿಲ್ಲ ಎಂದು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ತಿಳಿಸಿದ್ದಾರೆ.