ಶಸ್ತ್ರಚಿಕಿತ್ಸೆಯ ಮೂಲಕ ಕೊಬ್ಬು ಕಡಿಮೆ ಮಾಡುವುದು ಕೆಲವೊಮ್ಮೆ ಮಾರಣಾಂತಿಕವಾಗಬಹುದು. ಇದಕ್ಕೆ ಉದಾಹರಣೆ ಎಂಬಂತೆ, ಇತ್ತೀಚೆಗಷ್ಟೇ ಕನ್ನಡದ ಜನಪ್ರಿಯ ಕಿರುತೆರೆ ನಟಿ ಚೇತನಾ ರಾಜ್, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊಬ್ಬು- ಮುಕ್ತ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ (ಲಿಪೊಸಕ್ಷನ್) ಪಡೆದುಕೊಂಡು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.
ದೇಹದ ಕೊಬ್ಬು ಕಳೆದುಕೊಳ್ಳುವುದು ಕಷ್ಟಕರವಾದ ಪ್ರಕ್ರಿಯೆ. ಏಕೆಂದರೆ ಇದಕ್ಕೆ ಸಾಕಷ್ಟು ತಾಳ್ಮೆ ಹಾಗೂ ನಿರಂತರ ಪ್ರಯತ್ನ ಬೇಕು. ಆದರೆ, ಕೊಬ್ಬು ನಷ್ಟದ ಶಸ್ತ್ರಚಿಕಿತ್ಸೆಗೆ ಹೋಗುವುದಕ್ಕಿಂತ ಮುನ್ನ ನಾವು ಸ್ವಾಭಾವಿಕವಾಗೇ ದೇಹದ ಕೊಬ್ಬನ್ನು ಕರಗಿಸುವತ್ತ ಹೆಚ್ಚಿನ ಗಮನ ಕೊಡಬೇಕು. ಅದಕ್ಕೆ 7 ಅತ್ಯಂತ ಪರಿಣಾಮಕಾರಿ ತೂಕ ನಷ್ಟ ತಂತ್ರಗಳು ಇಲ್ಲಿವೆ.
ಬಾರ ಎತ್ತುವ ತರಬೇತಿ: ಬಾರ ಎತ್ತುವ ತರಬೇತಿಯು ಒಂದು ರೀತಿಯ ವ್ಯಾಯಾಮವಾಗಿದ್ದು, ಅದು ನಿಮ್ಮ ಸ್ನಾಯುಗಳನ್ನು ಸಂಕುಚಿತಗೊಳಿಸುವುದನ್ನು ಒಳಗೊಂಡಿರುತ್ತದೆ. ಇದು ಬಾರ ಎತ್ತುವ ವಿಧಾನವಾಗಿದ್ದು, ಕಾಲಾನಂತರದಲ್ಲಿ ಸ್ನಾಯುಗಳ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾರ ಎತ್ತುವ ತರಬೇತಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಕೊಬ್ಬು ನಷ್ಟಕ್ಕೆ ಇದು ತುಂಬಾ ಸಹಕಾರಿಯಾಗಿದೆ. ಸಂಶೋಧನೆಗಳಿಂದಲೂ ಇದು ದೃಢವಾಗಿದೆ.
ಪ್ರೋಟಿನ್ ಭರಿತ ಆಹಾರ: ಹೆಚ್ಚು ಪ್ರೋಟೀನ್ ಭರಿತ ಆಹಾರಗಳನ್ನು ತಿನ್ನುವುದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹಸಿವು ಕಡಿಮೆ ಮಾಡಲು ಈ ರೀತಿಯ ಆಹಾರ ಸೇವನೆ ನೆರವು ನೀಡುತ್ತದೆ. ವಾಸ್ತವವಾಗಿ, ಹೆಚ್ಚಿನ ಗುಣಮಟ್ಟದ ಪ್ರೋಟೀನ್ ಅನ್ನು ನಿಯಮಿತವಾಗಿ ತಿನ್ನುವುದರಿಂದ ಹೆಚ್ಚುವರಿ ದೇಹದ ಕೊಬ್ಬು ಮತ್ತು ಸ್ಥೂಲಕಾಯತೆ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳಿಂದ ಕಂಡು ಬಂದಿದೆ.
ಹೆಚ್ಚು ನಿದ್ರೆ ಮಾಡಿ:ಆರೋಗ್ಯಕರ ತೂಕ ಹೊಂದಲು ಮತ್ತು ದೇಹವನ್ನ ಹೆಚ್ಚಿನ ತೂಕದಿಂದ ಮುಕ್ತಗೊಳಿಸಲು ನಿದ್ರೆ ಸಹಾಯ ಮಾಡುತ್ತದೆ. ಸ್ವಲ್ಪ ಮುಂಚಿತವಾಗಿ ಮಲಗುವುದು ಹಾಗೂ ಬೇಗ ಎಳುವ ಅಭ್ಯಾಸ ರೂಢಿಸಿಕೊಳ್ಳಿ. ನಿಯಮಿತ ನಿದ್ರೆಯ ವೇಳಾಪಟ್ಟಿಗೆ ಅಂಟಿಕೊಳ್ಳಿ. ಸಂಜೆ ಚಹಾ, ಕಾಫಿ ಸೇರಿದಂತೆ ಕೆಫಿನ್ ಅಂಶಗಳನ್ನು ಸೇವಿಸುವುದರಿಂದ ದೂರವಿರಿ. ನಿದ್ರೆಗೆ ಮೊದಲು, ಮೊಬೈಲ್, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳಿಂದ ದೂರವಿದ್ದು ಶಾಂತತೆ ಕಡೆ ಹೆಚ್ಚಿನ ಗಮನ ಕೊಡುವುದರಿಂದಲೂ ಆರೋಗ್ಯ ಕಾಪಾಡಿಕೊಳ್ಳಬಹುದು.