ಮನುಷ್ಯನಿಗೆ ಒಳ್ಳೆಯ ನಿದ್ರೆ ತಂದು ಕೊಡುವ ಈ ಆಹಾರಗಳನ್ನು ನೀವು ಆದಷ್ಟು ನಿಮ್ಮ ಜೀವನದಲ್ಲಿ ನಿದ್ರೆ ಮಾಡುವ ಮುಂಚೆ ಸೇವಿಸುವ ಅಭ್ಯಾಸ ಮಾಡಿಕೊಂಡು ಬಂದರೆ, ದಿನ ಕಳೆದಂತೆ ನಿಮ್ಮ ನಿದ್ರಾಹೀನತೆಯ ಸಮಸ್ಯೆ ದೂರಾಗಿ ಒಂದು ವೇಳೆ ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೆ ಬಹಳ ಬೇಗನೆ ನಿಮಗೆ ಇದಕ್ಕೆ ಪರಿಹಾರ ಸಿಕ್ಕಂತಾಗುವುದು.
ಚಹಾ, ಕಾಫಿ ಅಥವಾ ಆಲ್ಕೋಹಾಲ್ ಇವುಗಳನ್ನು ನೀವು ನಿದ್ರೆ ಮಾಡುವ ಮುಂಚೆ ಸೇವಿಸಿದ್ರೆ, ಇದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಹಾಗಾಗಿ ಉತ್ತಮ ನಿದ್ರೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಆಹಾರ ಮತ್ತು ಪಾನೀಯಗಳ ಬಗ್ಗೆ ನಿಮಗೆ ತಿಳಿದಿರಬೇಕು. ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಮಾಡಲು ಮತ್ತು ಶಾಂತ ಮನಸ್ಸಿನಿಂದ ಎಚ್ಚರಗೊಳ್ಳಲು ಈ ಕೆಳಗಿನ ಆಹಾರ ಪದ್ಧತಿಯನ್ನು ನೀವು ಅನುಸರಿಸಬಹುದಾಗಿದೆ.
ಬೆಚ್ಚಗಿನ ಹಾಲನ್ನು ಸೇವಿಸಿ:
ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲನ್ನು ಸೇವಿಸಿ. ಇದರ ಹಿಂದಿನ ನಿಜವಾದ ಕಾರಣವೆಂದರೆ ಹಾಲಿನಲ್ಲಿ ಟ್ರಿಪ್ಟೊಫಾನ್, ಕ್ಯಾಲ್ಸಿಯಂ, ಮೆಲಟೋನಿನ್ ಮತ್ತು ವಿಟಮಿನ್ ಡಿ ಇವೆ. ಈ ನಾಲ್ಕು ಅಂಶಗಳು ನಿದ್ರೆಯನ್ನು ಹೆಚ್ಚಿಸುತ್ತವೆ. ಸ್ವಲ್ಪ ಪರಿಮಳ ಮತ್ತು ಹೆಚ್ಚುವರಿ ಆರೋಗ್ಯ ಪ್ರಯೋಜನಗಳಿಗಾಗಿ, ನೀವು ಇದಕ್ಕೆ ಅರಿಶಿನವನ್ನು ಕೂಡ ಸೇರಿಸಬಹುದು.
ಪೌಷ್ಟಿಕಾಂಶಯುಕ್ತ ಕಾಳುಗಳನ್ನು ಸೇವಿಸಿ:
ಎಲ್ಲ ರೀತಿಯ ಕಾಲಗಳು ಮೆಲಟೋನಿನ್ ಜೊತೆಗೆ ಮೆಗ್ನೀಸಿಯಮ್, ಟ್ರಿಪ್ಟೊಫಾನ್ ಮುಂತಾದ ಖನಿಜಗಳನ್ನು ಒಳಗೊಂಡಿರುತ್ತವೆ. ನಿದ್ರಾಹೀನತೆಯನ್ನು ಕೊನೆಗೊಳಿಸಲು ಇವು ಹೆಚ್ಚು ಸಹಾಯ ಮಾಡುತ್ತವೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ.
ಕ್ಯಾಮೊಮೈಲ್ ಟೀ:
ಕ್ಯಾಮೊಮೈಲ್ ಒಂದು ಗಿಡಮೂಲಿಕೆಗೆ ಸಂಬಂಧ ಪಟ್ಟ ಆಹಾರ ಪದಾರ್ಥ ಆಗಿದ್ದು, ವಿಶ್ವದಾದ್ಯಂತ ಹಲವಾರು ಜನರು ನಮ್ಮ ಮನೆಯ ಸದಸ್ಯರ ಆರೋಗ್ಯದ ಹಿತ ದೃಷ್ಟಿಯಿಂದ ಇದನ್ನು ಸೇವಿಸುತ್ತಾರೆ. ತಮ್ಮ ಹೊಟ್ಟೆಯ ಸಮಸ್ಯೆಗಳನ್ನು ಜೊತೆಗೆ ತಮ್ಮ ಮನಸ್ಸಿನ ಆತಂಕವನ್ನು ನಿವಾರಣೆ ಮಾಡಿಕೊಳ್ಳಲು ಬಹಳಷ್ಟು ವರ್ಷಗಳ ಕಾಲ ಜನರು ಕ್ಯಾಮೊಮೈಲ್ ಚಹಾವನ್ನು ರೂಢಿ ಮಾಡಿಕೊಂಡಿದ್ದ ಉದಾಹರಣೆಗಳಿವೆ. ನಿದ್ರೆಯ ವಿಷಯಕ್ಕೆ ಬಂದಾಗ ಮನುಷ್ಯನ ಮನಸ್ಸಿನ ದುಗುಡ, ದುಮ್ಮಾನ, ಒತ್ತಡ ಮತ್ತು ಆತಂಕವನ್ನು ಕ್ಷಣ ಮಾತ್ರದಲ್ಲಿ ದೂರ ಮಾಡಿ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ಕೊಟ್ಟು ಒಳ್ಳೆಯ ನಿದ್ರೆ ಬರುವಂತೆ ಮಾಡುವ ಕೆಲಸ ಕ್ಯಾಮೊಮೈಲ್ ಚಹಾ ಮಾಡುತ್ತದೆ.
ಕಿವಿ ಹಣ್ಣು:
ಕಿವಿ ಹಣ್ಣು ವಿಟಮಿನ್ ಸಿಯನ್ನು ಹೊಂದಿದ್ದು, ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಅವುಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ಮೆಲಟೋನಿನ್, ಫೋಲೇಟ್, ಮೆಗ್ನೀಸಿಯಮ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇವೆಲ್ಲವೂ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಟರ್ಕಿ ಪಕ್ಷಿಯ ಮಾಂಸ:
ಟರ್ಕಿ ಪಕ್ಷಿಯ ಮಾಂಸವನ್ನು ಸೇವಿಸಿದ ಬಳಿಕ ಜನರು ಉತ್ತಮ ನಿದ್ರೆಯನ್ನು ಪಡೆಯುತ್ತಾರೆ. ಏಕೆಂದರೆ ಇದರಲ್ಲಿ ಪ್ರೋಟೀನ್ ಮತ್ತು ಟ್ರಿಪ್ಟೊಫಾನ್ ಹೆಚ್ಚಿರುತ್ತದೆ. ಇದು ದಣಿವನ್ನು ನಿವಾರಿಸುತ್ತದೆ ಮತ್ತು ಇದರ ಪರಿಣಾಮವಾಗಿ ನೀವು ಉತ್ತಮವಾಗಿ ನಿದ್ರೆ ಮಾಡಲು ಸಹಾಯವಾಗುತ್ತದೆ.