ನವದೆಹಲಿ: ಭಾರತದ 10ರಲ್ಲಿ 6 ಹದಿಹರೆಯದ ಹೆಣ್ಣುಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ದೇಶದ ಹೊಸ ಸಂಶೋಧನೆಯೊಂದು ತಿಳಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ದತ್ತಾಂಶದ ಮೇಲೆ ಈ ಅಧ್ಯಯನ ನಡೆಸಲಾಗಿದೆ.
ಹದಿಹರೆಯದ ಹೆಣ್ಣುಮಕ್ಕಳ ಮದುವೆ ಮತ್ತು ತಾಯ್ತನ ಸೇರಿದಂತೆ ಕಳಪೆ ಪೋಷಣೆ ಮತ್ತು ಶಿಕ್ಷಣ ಹಾಗೂ ಹಣಕಾಸಿನಂತಹ ಸಾಮಾಜಿಕ ಆರ್ಥಿಕ ಸೇರಿದಂತೆ ಅನೇಕ ವಿಚಾರಗಳು ಈ ರಕ್ತ ಹೀನತೆ ಮೇಲೆ ನಿರ್ಣಯಕ ಅಂಶಗಳಾಗಿವೆ. ಭಾರತದ 15-19ರ ವಯೋಮಾನದ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ ಎಂದು ಉತ್ತರ ಪ್ರದೇಶದ ಬನಾರಸ್ ಹಿಂದೂ ಯುನಿವರ್ಸಿಟಿ ಮತ್ತು ಇತರೆ ಸಂಸ್ಥೆಗಳು ಪತ್ತೆ ಮಾಡಿವೆ.
ದುಪ್ಪಟ್ಟಾದ ಪ್ರಕರಣ: ಈ ರಕ್ತ ಹೀತನೆ ಪ್ರಕರಣಗಳು 2015-16ಕ್ಕೆ ಹೋಲಿಕೆ ಮಾಡಿದರೆ 2019-21ರಲ್ಲಿ ಶೇ 60ರಷ್ಟಿದ್ದು, ಇದು ದುಪ್ಪಟ್ಟು ಆಗಿದೆ ಎಂದು ಪಿಎಲ್ಒಎಸ್ ಗ್ಲೋಬಲ್ ಪಬ್ಲಿಕ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟಗೊಂಡಿದೆ.
ರಕ್ತ ಹೀನತೆ ಎಂಬುದು ಸಾರ್ವಜನಿಕ ಆರೋಗ್ಯದ ಪ್ರಮುಖ ಕಾಳಜಿ ವಿಷಯವಾಗಿದ್ದು, ಭಾರತದಲ್ಲಿ ಮಹಿಳೆಯರು ಹೆಚ್ಚು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೆಂಪು ರಕ್ತಕಣಗಳ ಕೊರತೆಯಿಂದ ಅವರು ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ.
ಎಫ್ಎಚ್ಎಸ್ (2015-16) ಮತ್ತು ಎನ್ಎಫ್ಎಚ್ಎಸ್-5 (2019-21)ರ ರಾಷ್ಟ್ರೀಯ ಸಮೀಕ್ಷೆಯ ದತ್ತಾಂಶವನ್ನು ನಾಲ್ಕು ಮತ್ತು ಐದು ಸುತ್ತು ಬಳಸಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಕ್ರಮವಾಗಿ 1,16,117 ಮತ್ತು 1,09,400 ಯುವತಿಯರು ಭಾಗಿಯಾಗಿದ್ದಾರೆ. ವಿಶ್ಲೇಷಣೆಯು ರಕ್ತಹೀನತೆ ತಡೆಯುವ ಮತ್ತು ರಕ್ತ ಹೀನತೆ ಅಪಾಯದ ಅಂಶ ಪತ್ತೆ ಮಾಡುವ ಕುರಿತು ತಿಳಿಸಿದೆ.
18 ವರ್ಷಕ್ಕಿಂತ ಮೊದಲು ವಿವಾಹವಾದ ಯುವತಿಯರಲ್ಲಿ ಹೆಚ್ಚಿನ ರಕ್ತ ಹೀನತೆ ಕಂಡು ಬಂದಿದೆ. ಎನ್ಎಫ್ಎಚ್ಎಸ್-4ರಲ್ಲಿ ಶೇ 10 ಮತ್ತು ಎಫ್ಎಚ್ಎಸ್ನಲ್ಲಿ ಶೇ 8ರಷ್ಟು ಕ್ರಮವಾಗಿ ಮಾದರಿಗಳನ್ನು ಪಡೆಯಲಾಗಿದೆ. ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಶೇ 70ರಷ್ಟು ಮಂದಿ ಗ್ರಾಮೀಣ ನಿವಾಸಿಗಳಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಎರಡು ಮಕ್ಕಳ ಹದಿಹರೆಯದ ತಾಯಂದಿರು ಹೆಚ್ಚು ರಕ್ತ ಹೀನತೆಗೆ ಒಳಗಾಗಿದ್ದು, ಹಾಲುಣಿಸುವ ತಾಯಂದಿರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಂಡು ಬಂದಿದೆ.
ಬೇಕಿದೆ ಶಿಕ್ಷಣ: ಹದಿವಯಸ್ಸಿನ ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ಕುರಿತು ಹೆಚ್ಚಿನ ಶಿಕ್ಷಣ ನೀಡಬೇಕಿದೆ. ಈ ಶಿಕ್ಷಣವೂ ಪೋಷಣೆ ಮತ್ತು ಆರೋಗ್ಯ ಜೊತೆಗೆ ಆರೈಕೆ ಹಾಗೂ ಪೋಷಕಾಂಶದ ಆಹಾರಗಳ ಸೇವನೆ ಮೂಲಕ ಅವರ ಉದ್ಯೋಗದ ಅವಕಾಶ ಮತ್ತು ಆದಾಯ ಸುಧಾರಿಸುವ ಕುರಿತು ತಿಳಿಸಬೇಕಿದೆ ಎಂದು ಲೇಖಕರು ತಿಳಿಸಿದ್ದಾರೆ.