ನವದೆಹಲಿ: ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿದ್ದು, ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದ ಹಲವಾರು ಶಾಲೆಗಳಲ್ಲಿ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸುತ್ತಿವೆ. ಪೋಷಕರು ಕೂಡ ಆನ್ಲೈನ್ನಿಂದ ತಮ್ಮ ಮಕ್ಕಳನ್ನು ಆಫ್‌ಲೈನ್ ವೇಳಾಪಟ್ಟಿಗೆ ಹೊಂದಿಸಲು ಮರಳಿದ್ದಾರೆ. ವಿಶೇಷವಾಗಿ ಆನ್‌ಲೈನ್ ಶಾಲಾ ಶಿಕ್ಷಣದ ಸಮಯದಲ್ಲಿ ವಿದ್ಯಾರ್ಥಿಗಳ ಆಹಾರ ಪದ್ಧತಿಯು ಸಾಕಷ್ಟು ಬದಲಾಗಿರುವುದರಿಂದ ಈಗ ಮಕ್ಕಳ ಆಫ್‌ಲೈನ್ ತರಗತಿಗೆ ಹೊಂದುವಂತೆ ಟಿಫಿನ್ ತಯಾರಿಸುವುದು ಅನೇಕ ಪೋಷಕರಿಗೆ ಸವಾಲುಗಳಾಗಿ ಪರಿಣಮಿಸಿದೆ.
ಲಾಕ್‌ಡೌನ್ ಸಮಯದಲ್ಲಿ, ಹೆಚ್ಚಿನ ವಿದ್ಯಾರ್ಥಿಗಳಿಗೆ ಯಾವುದೇ ನಿಗದಿತ ದಿನಚರಿ ಇರಲಿಲ್ಲ. ಅದಲ್ಲದೆ ಅವರಲ್ಲಿ ಅನೇಕರು ಆಗೊಮ್ಮೆ ಈಗೊಮ್ಮೆ ಜಂಕ್ಫುಡ್ಗಳನ್ನು ತಿನ್ನುವ ಅಭ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ಆದ್ದರಿಂದ, ನಿಮ್ಮ ಮಗುವಿನ ಆರೋಗ್ಯಕರ ಆಹಾರ ಪದ್ಧತಿಯನ್ನು ಪುನರುಜ್ಜೀವನಗೊಳಿಸಲು ಅವರ ಡಬ್ಬದೊಳಗೆ ಏನನ್ನು ತುಂಬಬೇಕು ಎಂಬುದರ ಕುರಿತು ನೀವು ಚಿಂತಿಸುತ್ತಿದ್ದರೆ, ಈ ರೆಸಿಪಿ ತಯಾರಿಸಿ. ಆಹಾರದ ಸಮತೋಲಿತ ಸಂಯೋಜನೆಯೊಂದಿಗೆ ಅವರ ಊಟದ ಬಾಕ್ಸ್ಗಳನ್ನು ತುಂಬಲು ನಾವು ತ್ವರಿತ ಮತ್ತು ಸುಲಭವಾದ ಮಾರ್ಗಗಳ ಪಟ್ಟಿಯನ್ನು ತಯಾರಿಸಿದ್ದೇವೆ. ಅವುಗಳು ಮಕ್ಕಳಿಗೆ ಪೋಷಕಾಂಶಗಳನ್ನು ನೀಡುವುದರೊಂದಿಗೆ ಮಕ್ಕಳು ಹೆಚ್ಚು ಇಷ್ಟಪಡುವ ರೆಸ್ಟೋರೆಂಟ್ ಭಕ್ಷ್ಯಗಳಂತೆಯೇ ರುಚಿಯನ್ನು ನೀಡುತ್ತವೆ.
1. ಬೇಯಿಸಿದ ಇಡ್ಲಿ: ಕರಿಬೇವಿನ ಎಲೆ ತುಂಬಿರುವ ಬೇಯಿಸಿದ ಇಡ್ಲಿ ಖಂಡಿತವಾಗಿಯೂ ನಿಮ್ಮ ಮಗುವಿನ ಹೃದಯವನ್ನು ಗೆಲ್ಲುತ್ತದೆ. ಇದು ಆರೋಗ್ಯಕರ ಮತ್ತು ಉದರಕ್ಕೂ ಉತ್ತಮ ಆಹಾರ ಎಂದು ಇದನ್ನು ಪರಿಗಣಿಸಲಾಗುತ್ತದೆ. ಆದ್ದರಿಂದ ಇದು ಮಕ್ಕಳಿಗೆ ಉತ್ತಮ ಟಿಫಿನ್ ಆಯ್ಕೆಯಾಗಿದೆ. ಬಿಸಿ ಬಿಸಿಯಾದ ಇಡ್ಲಿಗಳನ್ನು ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಮಕ್ಕಳಿಗೆ ಪ್ಯಾಕ್ ಮಾಡಿ ಕೊಡಲು ಮರೆಯಬೇಡಿ.
2. ರೋಟಿ ಪಿಜ್ಜಾ:ಮಕ್ಕಳು ಪಿಜ್ಜಾವನ್ನು ಇಷ್ಟಪಡುತ್ತಾರೆ. ಆದರೆ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕರಿಸಿದ ಹಿಟ್ಟು ಬಳಸಿ ತಯಾರಿಸಿದ ಪಿಜ್ಜಾಗಳನ್ನು ತಿನ್ನಿಸಲು ಹಿಂಜರಿಯುತ್ತಾರೆ. ಆದರೆ ಮಕ್ಕಳು ಅದನ್ನೇ ಆಸೆ ಪಡುತ್ತಾರೆ. ಹಾಗಾಗಿ ಈ ರೋಟಿ ಪಿಜ್ಜಾ ನಿಮಗೆ ಸೂಕ್ತವಾದ ಆಯ್ಕೆಯಾಗಿದೆ. ನಿಮಗೆ ಬೇಕಾಗಿರುವುದು ಹಸಿರು ತರಕಾರಿಗಳು ಮತ್ತು ಸಂಪೂರ್ಣ ಗೋಧಿ ಹಿಟ್ಟು. ಇದನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಪಿಜ್ಜಾ ಸಾಸ್ ಮತ್ತು ಚೀಸ್ ಬಳಸಿ.
3. ಬೇಸನ್ ಚಿಲಾ ಸ್ಯಾಂಡ್ವಿಚ್: ಈ ಸ್ಟಾರ್ಟರ್ ಅನ್ನು ಹೆಚ್ಚಾಗಿ ಮೊಟ್ಟೆ ತಿನ್ನದ ಜನರಿಗೆ ಆದ್ಯತೆಯಾಗಿ ನೀಡಬಹುದು. ಇದನ್ನು ಟೊಮೆಟೊ ಚಟ್ನಿ ಅಥವಾ ಪುದೀನಾ ಚಟ್ನಿಯೊಂದಿಗೆ ಬಡಿಸಿದರೆ ರುಚಿಕರವಾಗಿರುತ್ತದೆ. ಈ ಪಾಕವಿಧಾನದ ಮುಖ್ಯ ಅಂಶವೆಂದರೆ ಕಡಲೇ ಹಿಟ್ಟು (ಅಥವಾ ಬೇಸನ್) ಇದು ಈ ತಿಂಡಿಯನ್ನು ಹೆಚ್ಚು ಪೌಷ್ಟಿಕವಾಗಿಸುತ್ತದೆ. ಮೊದಲು ಬೇಸನ್ ಚಿಲಾ ತಯಾರಿಸಿಕೊಂಡು ನಂತರ ಬ್ರೆಡ್ ಸ್ಲೈಸ್‌ಗಳ ನಡುವೆ ಅದನ್ನಿರಿಸಿ ಸವಿಯಿರಿ.