ನವದೆಹಲಿ: ಕಾಶ್ಮೀರದ ಕಣಿವೆ ಎಂದರೆ ನೆನಪಾಗುವುದು ಹಿಮಾಲಯದ ಪರ್ವತಗಳ ಜೊತೆಗೆ ರುಚಿಕರ ಸ್ಥಳೀಯ ಸೇಬುಗಳು. ಭಾರತದಲ್ಲಿ ಅನೇಕ ಬಗೆಯ ಸೇಬುಗಳನ್ನು ಬೆಳೆಯಲಾಗುವುದು. ಪ್ರತಿಯೊಂದು ಸೇಬು ಕೂಡ ತನ್ನದೇ ಆದ ಮಹತ್ವ ಹೊಂದಿದ್ದು, ಆರೋಗ್ಯ ಪ್ರಯೋಜನ ನೀಡುತ್ತದೆ. ಅಂತಹ ಸೇಬಿನ ಕುರಿತು ಮಾಹಿತಿ ಇಲ್ಲಿದೆ
ಒಟಿಪೆ ಎಂಬ ಅಗ್ರಿ ಟೆಕ್ ಸ್ಟಾರ್ಟ್ಅಪ್ನ ಉಪಾಧ್ಯಕ್ಷರಾಗಿರುವ ದೀಪಕ್ ತಿವಾರಿ, ಭಾರತದಲ್ಲಿ ಬೆಳೆಯಲಾಗುವ ಆರು ಸೇಬಿನ ವಿಶೇಷತೆ, ಅದರ ರುಚಿ ಹಾಗೂ ಅದರಿಂದಾಗುವ ಆರೋಗ್ಯ ಪ್ರಯೋಜನ ಕುರಿತು ಮಾಹಿತಿ ನೀಡಿದ್ದಾರೆ.
ಶಿಮ್ಲಾ ಸೇಬು: ಶಿಮ್ಲಾ ಸೇಬು ಸಿಹಿ ಮತ್ತು ಜ್ಯೂಸಿ ರುಚಿ ಹೊಂದಿದೆ. ಕ್ರಿಸ್ಪ್ ಟೆಕ್ಸಚರ್ ಹೊಂದಿರುವ ಈ ಸೇಬನ್ನು ಹಿಮಾಲಯದಲ್ಲಿ 6000 ಅಡಿ ಎತ್ತರದಲ್ಲಿ ಬೆಳೆಯಲಾಗುವುದು. ಇದರಲ್ಲಿ ವಿಟಮಿನ್, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿರುತ್ತದೆ. ಸಮೃದ್ಧ ವಿಟಮಿನ್ ಸಿ ಮತ್ತು ಫೈಬರ್ ಹೊಂದಿರುವ ಶಿಮ್ಲಾ ಸೇಬು ಇಮ್ಯೂನಿಟಿ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಶೀತ ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ರೆಸಿಪಿ ಐಡಿಯಾ: ಶಿಮ್ಲಾ ಸೇಬಿಗೆ ಜೇನುತುಪ್ಪ ಮತ್ತು ವಾಲ್ನಟ್ ಹಾಕಿ ಬೆರಸಿ ಸೇವಿಸಬಹುದು
ಕಾಶ್ಮೀರಿ ಸೇಬು: ಕಾಶ್ಮೀರಿ ಕಣಿವೆಯಲ್ಲಿ ಸಿಗುವ ರಸಭರಿತ, ಸಿಹಿ ಮತ್ತು ಮೃದು ಸೇಬು ಇದಾಗಿದೆ. ಇತರೆ ಸೇಬಿಗೆ ಹೋಲಿಕೆ ಮಾಡಿದಾಗ ಇದು ಕೊಂಚ ಕಡಿಮೆ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಲು, ಕಡಿಮೆ ಕೊಲೆಸ್ಟ್ರಾಲ್ಗೆ ಇದು ಸಹಾಯವಾಗಿದೆ. ಶ್ವಾಸಕೋಶ ಕಾರ್ಯಾಚರಣೆ, ಇಮ್ಯೂನಿಟಿ ಹೆಚ್ಚಳ, ಚರ್ಮ ಮತ್ತು ಕೂದಲ ಆರೋಗ್ಯಕ್ಕೆ ಇದು ಸಹಾಯ ಮಾಡುತ್ತದೆ.
ರೆಸಿಪಿ ಐಡಿಯಾ: ಕಾಶ್ಮೀರಿ ಸೇಬಿನ ಚಟ್ನಿ ಜೊತೆಗೆ ಏಲಕ್ಕಿ ಮತ್ತು ಚಕ್ಕೆ ಪುಡಿಯನ್ನು ಬೆರಸಿದರೆ, ರುಚಿಕರ ಆಹಾರ ಸಿದ್ದ
ಕಿನ್ನೊರ್ ಸೇಬು: ಹಿಮಾಚಲದ ಕಿನ್ನೊರ್ ಜಿಲ್ಲೆಯ ಈ ಸೇಬನ್ನು 9000 ಅಡಿ ಎತ್ತರದ ಪ್ರದೇಶದಲ್ಲಿ ಬೆಳೆಯಲಾಗುವುದು. ಈ ಬಗೆಯ ಸೇಬು ಗಾಢ ಕೆಂಪು ಬಣ್ಣದಲ್ಲಿರುತ್ತದೆ. ನೀಡಲು ಅತ್ಯಾಕರ್ಷಕವಾಗಿರುವ ಈ ಸೇಬಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇಮ್ಯೂನಿಟಿ ಹೆಚ್ಚಿಸಿ, ತೂಕ ನಿರ್ವಹಣೆ ಮಾಡುವ ಇದು ಬಾಯಿಯ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.