ಬೀಜಿಂಗ್( ಚೀನಾ): ಕೊರೊನಾ ವಿಶ್ವಾದ್ಯಂತ ಅಸಂಖ್ಯಾತ ಜನರನ್ನು ಭಾದಿಸಿದೆ, ಬಾಧಿಸುತ್ತಿದೆ. ಕೋಟಿ ಕೋಟಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಮಹಾಮಾರಿ ನಿಯಂತ್ರಣಕ್ಕೆ ಲಸಿಕೆಯೇನೋ ಬಂದಿದೆ. ಸೂಕ್ತ ಚಿಕಿತ್ಸೆ ಬಳಿಕ ಕೊರೊನಾದಿಂದ ಗುಣಮುಖರೂ ಆಗಿದ್ದಾರೆ. ಆದರೆ, ದೈಹಿಕ ಮತ್ತು ಮಾನಸಿಕ ಆರೋಗ್ಯವು ಸಾಮಾನ್ಯವಾಗಿ ಕಾಲಾನಂತರದಲ್ಲಿ ಸುಧಾರಿಸಿದ್ದರೂ, ದೇಹಾರೋಗ್ಯದಲ್ಲಿ ಕೆಲ ಕಿರಿಕಿರಿ ಅನುಭವಿಸುತ್ತಿದ್ದಾರೆ. ಸುಸ್ತನ್ನು ಎದುರಿಸುತ್ತಿದ್ದಾರೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.
ದಿ ಲ್ಯಾನ್ಸೆಟ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಯಲಾಗಿದೆ. ಸಾಂಕ್ರಾಮಿಕ ರೋಗದ ಮೊದಲ ಹಂತದಲ್ಲಿ ಚೀನಾದಲ್ಲಿ SARS-CoV-2 ಸೋಂಕಿಗೆ ಒಳಗಾದ ಸುಮಾರು 1,192 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿ ಈ ಅಂಶವನ್ನು ಕಂಡುಕೊಳ್ಳಲಾಗಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳುವ ಪ್ರಕಾರ, ಕೋವಿಡ್ಗೆ ತುತ್ತಾಗದ ಸಾಮಾನ್ಯರಂತೆ, ಕೋವಿಡ್ಗೆ ಒಳಗಾದವರ ಆರೋಗ್ಯಮಟ್ಟ ಸುಧಾರಣೆಯಾಗಿಲ್ಲ ಎಂಬ ಅಂಶವನ್ನ ಕಂಡುಕೊಳ್ಳಲಾಗಿದೆ.
ಸಂಪೂರ್ಣ ಗುಣಮುಖರಾಗಲು 2 ವರ್ಷಗಳೇ ಬೇಕಂತೆ:ಕೋವಿಡ್ಗೆ ತುತ್ತಾದ ಬಹುತೇಕರಲ್ಲಿ ಸಾಮಾನ್ಯವಾಗಿ ಆಯಾಸ, ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಆರಂಭದಲ್ಲಿ ಅನಾರೋಗ್ಯಕ್ಕೆ ಒಳಗಾದ ಎರಡು ವರ್ಷಗಳ ನಂತರ ನಿದ್ರೆಯ ತೊಂದರೆಗಳನ್ನು ಒಳಗೊಂಡಂತೆ ಕನಿಷ್ಠ ಒಂದು ರೋಗಲಕ್ಷಣವನ್ನು ಹೊಂದಿದ್ದಾರೆ.
ಕೋವಿಡ್ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಬದುಕುಳಿದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಸೋಂಕಿನಿಂದ ಇವರೆಲ್ಲ ಚೇತರಿಕೆ ಕಂಡು, ಈಗ ಸಹಜ ಜೀವನ ನಡೆಸುತ್ತಿದ್ದಾರೆ. ಆದರೆ ಕೋವಿಡ್ನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು 2ವರ್ಷಗಳೇ ಬೇಕಾಗುತ್ತಂತೆ. ಹೀಗಂತಾ ಚೀನಾ - ಜಪಾನ್‌ನ ಪ್ರಮುಖ ಲೇಖಕ ಪ್ರೊಫೆಸರ್ ಬಿನ್ ಕಾವೊ ಹೇಳಿದ್ದಾರೆ.
ಆರಂಭದಲ್ಲಿ ಅನಾರೋಗ್ಯಕ್ಕೆ ಒಳಗಾದ ಆರು ತಿಂಗಳ ನಂತರ ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಶೇ 68 ರಷ್ಟು ಪ್ರತಿಶತದಷ್ಟು ಜನ ದೀರ್ಘವಾದ ಕೋವಿಡ್ ರೋಗ ಲಕ್ಷಣಗಳು ಕಂಡು ಬಂದಿವೆ. COVID-19ಕ್ಕೆ ತುತ್ತಾಗಿ ಗುಣ ಮುಖರಾದವರಲ್ಲಿ, ಕೀಲು ನೋವು, ಬಡಿತ, ತಲೆತಿರುಗುವಿಕೆ ಮತ್ತು ತಲೆನೋವು, ನೋವು ಅಥವಾ ಅಸ್ವಸ್ಥತೆ ಮತ್ತು ಆತಂಕ ಅಥವಾ ಖಿನ್ನತೆ ಒಳಗೊಂಡಂತೆ ಹಲವಾರು ಇತರ ರೋಗಲಕ್ಷಣಗಳು ಕಂಡು ಬರುವ ಸಾಧ್ಯತೆಗಳಿವೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಇದನ್ನ ಓದಿ:ಗೇರುಹಣ್ಣಿನಲ್ಲಿ ವೈನ್ ತಯಾರಿಸಿ ಪೇಟೆಂಟ್ ಪಡೆದ ಮಂಗಳೂರಿನ ಎನ್ಐಟಿಕೆ ಪ್ರೊಫೆಸರ್!