ನಾವು ನಿತ್ಯ ಸೇವಿಸುವ ಆಹಾರವೇ ನಮ್ಮ ಆರೋಗ್ಯದ ಗುಟ್ಟಾಗಿರುತ್ತದೆ. ಆದರೆ, ಯಾವ ರೀತಿಯ ಆಹಾರವನ್ನು ಸೇವಿಸುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಪ್ರತಿದಿನ ಒಂದೇ ರೀತಿಯ ಆಹಾರ ಅಥವಾ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಇಲ್ಲದ ಆಹಾರವನ್ನು ಸೇವಿಸುತ್ತಿದ್ದರೆ ಅದರಿಂದ ಯಾವುದೇ ಪ್ರಯೋಜನವಿರುವುದಿಲ್ಲ. ತಟ್ಟೆ ತುಂಬಾ ತಿನ್ನುತ್ತಿರುತ್ತೇವೆ ಆದರೆ ದೇಹಕ್ಕೆ ಸಿಗೋದು ಮಾತ್ರ ಒಂದು ಹಿಡಿಯಷ್ಟು ಮಾತ್ರ ಎಂದಾಗುತ್ತದೆ.
ಹಾಗಾಗಿ ನಮ್ಮ ಸ್ನಾಯುಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಜೊತೆಗೆ ನಿಮ್ಮ ಚರ್ಮ ಮತ್ತು ಕೂದಲನ್ನು ಬಲವಾದ ಮತ್ತು ಆರೋಗ್ಯಕರವಾಗಿಡಲು ಪ್ರೋಟೀನ್ ಪ್ರಮುಖ ಅಂಶವಾಗಿದೆ. ನೀವು ಪ್ರೋಟೀನ್ ಬಗ್ಗೆ ಯೋಚಿಸಿದಾಗ, ಮಾಂಸ ಅಥವಾ ಕೋಳಿಯ ಬಗ್ಗೆ ಯೋಚಿಸಬಹುದು. ಆದರೆ ನೀವು ಸಸ್ಯಾಹಾರಿಯಾಗಿದ್ದರೆ, ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅನ್ನು ಪಡೆಯಲು ಇತರ ಮಾರ್ಗಗಳಿವೆ. ನಿಮ್ಮ ಆಹಾರದಲ್ಲಿ ಸೇರಿಸಲು 5 ಸಸ್ಯಾಹಾರಿ ಪ್ರೋಟೀನ್ - ಭರಿತ ಆಹಾರಗಳನ್ನು ನಾವು ಹೇಳುತ್ತೇವೆ..
ಬೀಜಗಳು (Nuts): ನಿಮ್ಮ ದಿನವನ್ನು ಬೆರಳೆಣಿಕೆಯ ಕಾಳುಗಳನ್ನು ತಿನ್ನುವುದರೊಂದಿಗೆ ನಿಮ್ಮ ಆಹಾರದಲ್ಲಿ ಪ್ರೋಟೀನ್ ಸಂಯೋಜಿಸಲು ಉತ್ತಮ ಮಾರ್ಗವಾಗಿದೆ. ಮತ್ತು ಇದು ಅತಿಯಾಗಿ ಸಿಹಿ ತಿನ್ನುವ ಆಸೆಯನ್ನೂ ಕಂಟ್ರೋಲ್ ಮಾಡುತ್ತದೆ. ಬಾದಾಮಿಯನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಸೇವಿಸಿ.
ಮೊಸರು (Yoghurt): ನಿಮ್ಮ ಉಪಹಾರದಲ್ಲಿ ಹೆಚ್ಚುವರಿಯಾಗಿ ಮನೆಯಲ್ಲಿ ತಯಾರಿಸಿದ ಮೊಸರು ಹಾಕಿ ಸೇವಿಸಿ. ಪ್ರೋಟೀನ್ ಸೇವನೆಯನ್ನು ಸುಧಾರಿಸುವುದರ ಹೊರತಾಗಿ, ಮನೆಯಲ್ಲಿ ತಯಾರಿಸಿದ ಮೊಸರು ಸರಿಯಾದ ಪ್ರಮಾಣದ ಪ್ರೋಬಯಾಟಿಕ್‌ಗಳನ್ನು ಒದಗಿಸುತ್ತದೆ. ಅದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆ, ಹೀರಿಕೊಳ್ಳುವಿಕೆ ಮತ್ತು ಹಲವಾರು ಸೂಕ್ಷ್ಮ ಮತ್ತು ಮ್ಯಾಕ್ರೋನ್ಯೂಟ್ರಿಯಂಟ್‌ಗಳ ಸಂಯೋಜನೆಗೆ ಸಹಾಯ ಮಾಡುತ್ತದೆ.