ಭಾವನಾತ್ಮಕವಾಗಿ ನೋವು ಅನುಭವಿಸುವ ಮನುಷ್ಯ ಅದರಿಂದ ಹೊರಗೆ ಬರೋಕೆ ಚಡಪಡಿಸುತ್ತಿರುತ್ತಾನೆ. ಭಾವನಾತ್ಮಕ ರೀತಿಯಲ್ಲಿ ದೂಷಣೆ ಮಾಡಿದರೆ ಆಗ ಪೀಡಿತ ವ್ಯಕ್ತಿಗೆ ಏನೋ ತಪ್ಪಾಗಿದೆ ಎಂದು ತಿಳಿಯಲು ಸಾಧ್ಯವಾಗದೆ ಇರಬಹುದು. ಹೀಗೆ ನಿಂದನೆಗೆ ಒಳಗಾಗಿರುವ ವ್ಯಕ್ತಿಯನ್ನು ಅರಿಯಲು ಇಲ್ಲಿವೆ ಕೆಲವು ಸಲಹೆಗಳು...
ಭಾವನಾತ್ಮಕವಾಗಿ ಆಗುವಂತಹ ದೂಷಣೆಯನ್ನು ತಿಳಿಯುವುದು ತುಂಬಾ ಕಷ್ಟ. ಕೆಲವೊಂದು ಸಂದರ್ಭದಲ್ಲಿ ಪೀಡಿತರು ಇದು ಸಂಬಂಧದ ಒಂದು ಅಂಗವೆಂದೇ ತಿಳಿದುಕೊಂಡು ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸುವರು. ಆದರೆ ಇಲ್ಲಿ ಭಾವನಾತ್ಮಕ ನಿಂದನೆಗೆ ಒಳಗಾಗುವ ವ್ಯಕ್ತಿಯು ಇದು ಏನು ಎಂದು ತಿಳಿಯಲು ತುಂಬಾ ಕಷ್ಟಪಡುವರು. ಭಾವನಾತ್ಮಕವಾಗಿ ಸಂಗಾತಿಯು ದೂಷಿಸುತ್ತಿದ್ದಾರೆ ಎಂದು ನಿಮಗೆ ಅನ್ನಿಸಿದರೆ ಆಗ ನೀವು ಈ ಕೆಳಗಿನ ಚಿಹ್ನೆಗಳು ಇದು ಭಾವನಾತ್ಮಕ ದೂಷಣೆ ಎನ್ನುವುದನ್ನು ತಿಳಿಯಬಹುದು.
1.ಸಂಗಾತಿಯನ್ನು ನಿರಾಶೆಗೊಳಿಸದಿರಲು ಯಾವಾಗಲೂ ಪ್ರಯತ್ನಿಸುತ್ತೀರಿ:
ನಿಮ್ಮ ಸ್ವಂತ ಮನೆಯಲ್ಲಿ ನೀವು ಸ್ವತಂತ್ರರಲ್ಲದಾಗ ಅಥವಾ ಸುರಕ್ಷಿತವಾಗಿಲ್ಲ ಎಂದಾಗ ಈ ರೀತಿ ಮಾಡುತ್ತೀರಿ. ನಿಮ್ಮ ಕೆಲಸದಿಂದ ಆಗುವ ಅಪಾಯಗಳ ಬಗ್ಗೆ ನೀವು ಹೆಚ್ಚಾಗಿ ಲೆಕ್ಕ ಹಾಕುತ್ತಿರುತ್ತೀರಿ ಮತ್ತು ನಿಮ್ಮ ಸಂಗಾತಿಯ ನಿಯಮಗಳ ಪ್ರಕಾರ ಬದುಕಲು ಪ್ರಯತ್ನಿಸುತ್ತೀರಿ.
2.ಆತ್ಮಸ್ಥೈರ್ಯ ಕುಸಿದಿರುವುದು:
ಭಾವನಾತ್ಮಕವಾಗಿ ನಿಂದಿಸುವಂತಹ ಸಂಗಾತಿಯು ಯಾವಾಗಲೂ ತನ್ನ ಸಂಗಾತಿಯ ಆತ್ಮವಿಶ್ವಾಸವನ್ನೇ ತಿನ್ನುವ ಪರಾವಲಂಬಿಯಂತೆ. ತನ್ನ ಬಗ್ಗೆ ತುಂಬಾ ಒಳ್ಳೆಯ ಭಾವನೆ ಬರುವಂತೆ ಮಾಡಲು ಪೀಡಿತರನ್ನು ಭಾವನಾತ್ಮಕವಾಗಿ ನೋಯಿಸಲು ಅವರು ಹಿಂಜರಿಯುವುದಿಲ್ಲ. ಇದರ ಪರಿಣಾಮವಾಗಿ ಭಾವನಾತ್ಮಕವಾಗಿ ಪೀಡನೆಗೆ ಒಳಗಾದವರು ತುಂಬಾ ಕೆಳಮಟ್ಟದ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ಹೊಂದುತ್ತಾರೆ.
ಓದಿ: ಬೆನ್ನು ನೋವು ನಿಮ್ಮನ್ನು ಕಾಡುತ್ತಿದೆಯೇ : ಈ ಕೆಳಗಿನ ಕ್ರಮಗಳನ್ನು ಅನುಸರಿಸಿ..