ಹೈದರಾಬಾದ್:ಈಗಬೇಸಿಗೆ ಕಾಲ. ಹೀಗಾಗಿ ಈ ಋತುವಿನಲ್ಲಿ ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಬಿಸಿಲು ಮತ್ತು ಏರುತ್ತಿರುವ ತಾಪಮಾನದಲ್ಲಿ, ನಾವು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅವಶ್ಯಕವಾಗಿದೆ. ಬಿಸಿಲ ತಾಪ, ಆಹಾರ ಸರಿಯಾಗಿ ಜೀರ್ಣವಾಗದೇ ನಿರ್ಜಲೀಕರಣದಂತಹ ಹಲವಾರು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದೇಹವನ್ನು ಹೈಡ್ರೀಕರಿಸಿದ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.
ಈ ಅವಧಿಯಲ್ಲಿ ನಮ್ಮ ದೇಹವನ್ನು ತಂಪಾಗಿ ಮತ್ತು ತೇವಾಂಶದಿಂದ ಇಡುವುದು ಮುಖ್ಯ. ವರ್ಷದ ಈ ಸಮಯದಲ್ಲಿ, ಅತಿಯಾದ ನಿರ್ಜಲೀಕರಣ ಮತ್ತು ಬೆವರುವಿಕೆಯಿಂದಾಗಿ ನಾವು ದಣಿವು ಮತ್ತು ಆಯಾಸವನ್ನು ಅನುಭವಿಸುತ್ತೇವೆ.ನಮ್ಮ ದೇಹವನ್ನು ಪುನಃ ಶಕ್ತಿಯುತಗೊಳಿಸಲು ನೀರಿನ ಅಂಶವನ್ನು ಹೊಂದಿರುವ ಹಣ್ಣುಗಳ ಸೇವನೆ ಉತ್ತಮ ಮಾರ್ಗ. ಹೆಚ್ಚಿನ ನೀರಿನ ಅಂಶವನ್ನು ಹೊಂದಿರುರುವ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡ ಒಂದಾಗಿದೆ. ಇದನ್ನು ಬೇಸಿಗೆಯ ಶಾಖವನ್ನು ಎದುರಿಸಲು ವಿವಿಧ ವಿಧಾನಗಳಲ್ಲಿ ಬಳಸಲಾಗುತ್ತದೆ. ಈ ಬೇಸಿಗೆಯಲ್ಲಿ ನೀವು ಮನೆಯಲ್ಲಿ ಆನಂದಿಸಬಹುದಾದ ತಂಪಾದ ಕಲ್ಲಂಗಡಿ ಪಾನೀಯಗಳ ಪಟ್ಟಿ ಹೀಗಿದೆ..
ಕಲ್ಲಂಗಡಿ - ಸ್ಟ್ರಾಬೆರಿ ಸ್ಮೂಥಿ:ಬೇಸಿಗೆಯ ದಿನದಂದು ಈ ಸ್ಮೂಥಿಯು ರಿಫ್ರೆಶ್ ಆಗಿರುತ್ತದೆ ಮತ್ತು ಇಡೀ ದಿನ ಶಕ್ತಿಯುತವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಕಲ್ಲಂಗಡಿ-ಸ್ಟ್ರಾಬೆರಿ ಸ್ಮೂಥಿ ಆರೋಗ್ಯಕರ ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ತಾಜಾ ಸ್ಟ್ರಾಬೆರಿಗಳು, ಕಲ್ಲಂಗಡಿ, ಚಿಯಾ ಬೀಜಗಳು, ಜೇನುತುಪ್ಪ ಮತ್ತು ಕಡಿಮೆ - ಕೊಬ್ಬಿನ ಮೊಸರುಗಳಿಂದ ತಯಾರಿಸಲಾಗುತ್ತದೆ. ಇದು ರುಚಿಕರ ಮಾತ್ರವಲ್ಲದೇ ನಿಮ್ಮ ದೇಹಕ್ಕೆ ಉತ್ತಮವಾದ ಮಿಟಮಿನ್‌ಗಳು ಮತ್ತು ಪೋಷಕಾಂಶಗಳನ್ನು ನೀಡುತ್ತದೆ.
ಕಲ್ಲಂಗಡಿ ಮೊಜಿಟೊ: ಬಬ್ಲಿ, ರಿಫ್ರೆಶ್ ಸುವಾಸನೆಯೊಂದಿಗೆ, ಮಿಂಟಿ ಮೊಜಿಟೊ ಬೇಸಿಗೆ ಕಾಲಕ್ಕೆ ಸೂಕ್ತವಾಗಿದೆ. ತಾಜಾ ಕಲ್ಲಂಗಡಿ, ಪುದೀನ ವನ್ನು ಮೊಜಿಟೊ ಮಾಡಲು ಬಳಸಲಾಗುತ್ತದೆ. ಇದು ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.