ಕರ್ನಾಟಕ

karnataka

By

Published : Dec 6, 2021, 2:52 PM IST

Updated : Dec 6, 2021, 6:57 PM IST

ETV Bharat / sukhibhava

ಆರೋಗ್ಯಕರ ಕೂದಲು ಮತ್ತು ತ್ವಚೆಗಾಗಿ ಇಲ್ಲಿವೆ 5 ಸಸ್ಯ ತೈಲಗಳು

ಅರ್ಗಾನ್, ಬಾದಾಮಿ, ಜೊಜೊಬಾ ಮತ್ತು ದಾಳಿಂಬೆ ಬೀಜದ ಎಣ್ಣೆ ಸೇರಿದಂತೆ ಸಸ್ಯ ತೈಲಗಳು ನೈಸರ್ಗಿಕ ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳಿಂದ ಕೂಡಿವೆ. ಹೀಗಾಗಿ ಇವು ಚರ್ಮ ಹಾಗೂ ಕೂದಲನ್ನು ಇತರ ಸಮಸ್ಯೆಗಳು ಬರದಂತೆ ಮತ್ತು ಮಾಲಿನ್ಯದಿಂದ ರಕ್ಷಿಸುತ್ತವೆ.

Plant Oils
ಸಸ್ಯ ತೈಲಗಳು

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಅನೇಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಯಾವುದನ್ನು ಆಯ್ಕೆ ಮಾಡುವುದು ಎಂಬ ಪ್ರಶ್ನೆ ಬರುತ್ತದೆ. ಅದೇ ನಿಟ್ಟಿನಲ್ಲಿ, ನೈಸರ್ಗಿಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮತ್ತು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರದ, ಸಸ್ಯ ಆಧಾರಿತ ತೈಲಗಳು ಕೂದಲು ಮತ್ತು ಚರ್ಮದ ಆರೈಕೆಗೆ ಸೂಕ್ತವೆಂದು ಪರಿಗಣಿಸಲಾಗಿದೆ.

ಹೆಚ್ಚು ನೈಸರ್ಗಿಕ ಅಂಶಗಳು ಮತ್ತು ಕಡಿಮೆ ರಾಸಾಯನಿಕಗಳನ್ನು ಹೊಂದಿರುವ ಕಾಸ್ಮೆಟಿಕ್ ಮತ್ತು ಚರ್ಮದ ಆರೈಕೆ ಉತ್ಪನ್ನಗಳನ್ನು ಬಳಸಬೇಕೆಂದು ಸೌಂದರ್ಯ ತಜ್ಞರು ಮತ್ತು ಚರ್ಮರೋಗ ತಜ್ಞರು ಸಲಹೆ ನೀಡುತ್ತಾರೆ. ರಾಸಾಯನಿಕಗಳ ಅತಿಯಾದ ಬಳಕೆಯು ನಮ್ಮ ಸೂಕ್ಷ್ಮ ಚರ್ಮವನ್ನು ಆಳವಾಗಿ ಹಾನಿಗೊಳಿಸುತ್ತದೆ.

ಆದ್ದರಿಂದ, ಸಸ್ಯದ ಎಣ್ಣೆಗಳು, ಅಂದರೆ ಸಸ್ಯಗಳ ಎಲೆಗಳು, ಹಣ್ಣುಗಳು ಮತ್ತು ಬೀಜಗಳಿಂದ ತೆಗೆದ ಎಣ್ಣೆಯು ಚರ್ಮ ಮತ್ತು ಕೂದಲಿನ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯೋಜನಕಾರಿಯಾಗಿದೆ.

ಇಂತಹ ತೈಲಗಳು ನೈಸರ್ಗಿಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ ಮತ್ತು ಹೆಚ್ಚಿನ ತೈಲಗಳು ಕೂದಲು ಮತ್ತು ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ.

ಅರ್ಗಾನ್, ಬಾದಾಮಿ, ಜೊಜೊಬಾ ಮತ್ತು ದಾಳಿಂಬೆ ಬೀಜದ ಎಣ್ಣೆ ಸೇರಿದಂತೆ ತೈಲಗಳು ನೈಸರ್ಗಿಕ ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳಿಂದ ತುಂಬಿವೆ. ಇವು ಚರ್ಮವನ್ನು ಪೋಷಿಸುತ್ತವೆ. ಹೀಗಾಗಿ ಇವು ಚರ್ಮದ ಸಮಸ್ಯೆಗಳು ಎದುರಾಗದಂತೆ ಮತ್ತು ಮಾಲಿನ್ಯದಿಂದ ನಮ್ಮನ್ನು ರಕ್ಷಿಸುತ್ತವೆ.

ಇದನ್ನೂ ಓದಿ: ಮನೆಯಲ್ಲೇ ಕಾಂತಿಯುತ ಮುಖ ಪಡೆಯುವುದು ಹೇಗೆ..? ಇಲ್ಲಿದೆ ಟಿಪ್ಸ್​

ನಮ್ಮ ಚರ್ಮದ ಮೇಲೆ ಹವಾಮಾನ, ನಾವು ಬಳಸುವ ಉತ್ಪನ್ನಗಳು ಮತ್ತು ಮಾಲಿನ್ಯದಿಂದ ಹೆಚ್ಚು ಪರಿಣಾಮ ಬೀರುತ್ತವೆ. ಏಕೆಂದರೆ ಅದು ತನ್ನ ಸಂಪರ್ಕಕ್ಕೆ ಬರುವ ಸುಮಾರು ಶೇ.60-70ರಷ್ಟು ಬಾಹ್ಯ ಅಂಶಗಳನ್ನು ಹೀರಿಕೊಳ್ಳುತ್ತದೆ.

ಅಂತಹ ಸಂದರ್ಭದಲ್ಲಿ ಚರ್ಮದ ಮೇಲೆ ಬೀರುವ ಪರಿಣಾಮಗಳು ತೇವಾಂಶ ಮತ್ತು ನೈಸರ್ಗಿಕ ಹೊಳಪಿನ ಕೊರತೆ, ಶುಷ್ಕತೆ ಮತ್ತು ಇತರ ಚರ್ಮ ಸಂಬಂಧಿತ ಸಮಸ್ಯೆಗಳ ರೂಪದಲ್ಲಿ ಗೋಚರಿಸುತ್ತವೆ. ಕೂದಲಿನ ವಿಚಾರದಲ್ಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ.

ಕೂದಲು ಮತ್ತು ಚರ್ಮದ ಆರೋಗ್ಯಕ್ಕಾಗಿ ಇಲ್ಲಿವೆ 5 ಸಸ್ಯ ತೈಲಗಳು

1.ಅರ್ಗಾನ್ ಎಣ್ಣೆ

‘ಲಿಕ್ವಿಡ್ ಗೋಲ್ಡ್’ ಎಂದು ಕರೆಯಲ್ಪಡುವ ಈ ಎಣ್ಣೆ ಕೂದಲು ಮತ್ತು ತ್ವಚೆಗೆ ಮ್ಯಾಜಿಕ್​​ನಂತೆ ಕೆಲಸ ಮಾಡುತ್ತದೆ. ಈ ಎಣ್ಣೆಯನ್ನು ಅರ್ಗಾನ್ ಮರದ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಕೂದಲು ಮತ್ತು ತ್ವಚೆಯನ್ನು ಪೋಷಿಸುವ ಜೊತೆಗೆ, ಈ ಎಣ್ಣೆಯು ದದ್ದುಗಳು ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಮತ್ತು ಗಾಯಗಳನ್ನು ವೇಗವಾಗಿ ಗುಣಪಡಿಸುತ್ತದೆ.

ಅರ್ಗಾನ್ ಎಣ್ಣೆಯಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಇ ಹೇರಳವಾಗಿ ಕಂಡು ಬರುತ್ತವೆ. ಇದರೊಂದಿಗೆ, ಇದು ಲಿನೋಲಿಕ್ ಆಮ್ಲ, ಒಮೆಗಾ - 6, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ.

ಜೊತೆಗೆ ಚರ್ಮ ಮತ್ತು ಕೂದಲನ್ನು ಹಾನಿಕಾರಕ ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಇದಲ್ಲದೇ, ಇದರಲ್ಲಿ ಕಂಡುಬರುವ ಟೊಕೊಫೆರಾಲ್, ಇದು ಒಂದು ರೀತಿಯ ವಿಟಮಿನ್-ಇ, ಉಗುರುಗಳನ್ನು ಆರೋಗ್ಯಕರವಾಗಿಡಲು ಕೂಡ ಸಹಾಯ ಮಾಡುತ್ತದೆ.

2.ಜೊಜೊಬಾ ಎಣ್ಣೆ

ಜೊಜೊಬಾ ಸಸ್ಯದ ಬೀಜಗಳಿಂದ ಹೊರತೆಗೆಯಲಾದ ಈ ಎಣ್ಣೆಯು ವಿಟಮಿನ್ ಇ, ವಿಟಮಿನ್ ಬಿ ಮತ್ತು ತಾಮ್ರ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಜನರು ಈ ಎಣ್ಣೆಯನ್ನು ಮಸಾಜ್ ಮಾಡಲು, ಮೇಕಪ್ ರಿಮೂವರ್‌, ಕಂಡೀಷನರ್‌, ಸ್ಕಿನ್ ಕ್ಲೆನ್ಸರ್‌ಗಳು ಮತ್ತು ಫೇಸ್ ಮಾಸ್ಕ್‌ಗಳಲ್ಲಿ ಬಳಸುತ್ತಾರೆ.

ಈ ತೈಲವು ಬಾಹ್ಯ ಬಳಕೆಗೆ ಮಾತ್ರ ಮತ್ತು ಖಾದ್ಯವಲ್ಲ. ಕೆಲವು ಜನರು ಇದರೊಂದಿಗೆ ಅಲರ್ಜಿಯನ್ನು ಹೊಂದಿರುತ್ತಾರೆ, ಆದ್ದರಿಂದ ಈಗಾಗಲೇ ಅಲರ್ಜಿ ಸಮಸ್ಯೆ ಇರುವವರು ಬಳಸದಿರುವುದು ಸೂಕ್ತ.

3.ಅವಕಾಡೊ ಎಣ್ಣೆ

ಅವಕಾಡೊ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ, ಅದರ ಎಣ್ಣೆ ಕೂದಲು ಮತ್ತು ಚರ್ಮ ಎರಡಕ್ಕೂ ಒಳ್ಳೆಯದು. ಅವಕಾಡೊ ಎಣ್ಣೆಯು ಪೊಟ್ಯಾಸಿಯಮ್, ವಿಟಮಿನ್ ಡಿ ಮತ್ತು ಇ, ಮೆಗ್ನೀಸಿಯಮ್ ಮತ್ತು ಲಿನೋಲಿಕ್ ಆಮ್ಲದಿಂದ ಕೂಡಿದೆ. ಈ ಎಣ್ಣೆಯು ಚರ್ಮವನ್ನು ದೀರ್ಘಕಾಲದವರೆಗೆ ತೇವಾಂಶದಿಂದ ಇಡುತ್ತದೆ ಮತ್ತು ಒಣಗದಂತೆ ತಡೆಯುತ್ತದೆ.

4.ದಾಳಿಂಬೆ ಬೀಜದ ಎಣ್ಣೆ

ದಾಳಿಂಬೆ ಬೀಜದ ಎಣ್ಣೆಯನ್ನು ಎಲ್ಲ ರೀತಿಯ ಚರ್ಮದವರು ಬಳಸಬಹುದು. ಇದು ಹೆಚ್ಚು ಜಿಡ್ಡಿನಲ್ಲದ ಕಾರಣ, ಇದು ಚರ್ಮದಿಂದ ಸುಲಭವಾಗಿ ಹೀರಲ್ಪಡುತ್ತದೆ ಮತ್ತು ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಈ ಎಣ್ಣೆಯು ತ್ವಚೆಯನ್ನು ಆರೋಗ್ಯಕರವಾಗಿಸುವುದಲ್ಲದೆ, ಮೊಡವೆ ಮತ್ತು ಇತರ ತ್ವಚೆಯ ಸಮಸ್ಯೆಗಳಿಗೂ ಪ್ರಯೋಜನವನ್ನು ನೀಡುತ್ತದೆ.

ಇದಲ್ಲದೇ ಇದು ಕಾಲಜನ್ (ಸ್ನಾಯು ಸಂಬಂಧಿತ ಅಂಶ) ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದಾಳಿಂಬೆ ಎಣ್ಣೆಯು ಒಣ ಮತ್ತು ನಿರ್ಜೀವ ಕೂದಲು ಮತ್ತು ಉತ್ಕರ್ಷಣ ನಿರೋಧಕಗಳನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಅದರಲ್ಲಿ ಹೆಚ್ಚಿನ ಪ್ರಮಾಣದ ಜೀವಸತ್ವಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: ಚಳಿಗಾಲದ ಆಹಾರದಲ್ಲಿ ಸೇರಿಸಿ ಒಂದು ಚಿಟಿಕೆ ಅರಿಶಿನ: ಸರ್ವ ರೋಗಗಳಿಗೆ ಹೇಳಿ Bye Bye

5.ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯು ವಿಟಮಿನ್ ಎ, ಇ, ಡಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮ್ಯಾಂಗನೀಸ್, ರಂಜಕ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇವೆಲ್ಲವೂ ನಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದು ಬಾದಾಮಿ ತಿನ್ನುವುದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ.

ಪ್ರತಿ ರಾತ್ರಿ ಮಲಗುವ ಮುನ್ನ ನಿಮ್ಮ ಮುಖದ ಮೇಲೆ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ಕಲೆಗಳು ಕಡಿಮೆಯಾಗುತ್ತವೆ ಮತ್ತು ಚರ್ಮವು ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದಲ್ಲದೇ, ನಿಯಮಿತವಾಗಿ ತಲೆಯನ್ನು ಮಸಾಜ್ ಮಾಡುವುದರಿಂದ ಕೂದಲನ್ನು ಬಲವಾಗಿ ಮತ್ತು ಸುಂದರವಾಗಿ ಮಾಡುತ್ತದೆ.

ಬಳಕೆಯ ಸಲಹೆಗಳು

ಅರ್ಗಾನ್ ಮತ್ತು ಜೊಜೊಬಾ ಎಣ್ಣೆಯನ್ನು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಬಳಸಬೇಕು. ಇದಲ್ಲದೇ, ಅವುಗಳನ್ನು ಮುಖಕ್ಕೆ ಬಳಸುವ ಮಾಶ್ಚರೈಸರ್​ ಜೊತೆ ಸಹ ಬಳಸಬಹುದು. ಅವುಗಳನ್ನು ದಿನಕ್ಕೆ ಎರಡು ಬಾರಿ ಬಳಸಬಹುದು. ಈ ರೀತಿಯಾಗಿ, ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲಾಗುತ್ತದೆ.


ಚರ್ಮವು ಆರೋಗ್ಯಕರವಾಗಿರುತ್ತದೆ ಮತ್ತು ಹೊಸ ಕೋಶಗಳ ರಚನೆಯನ್ನು ಉತ್ತೇಜಿಸುತ್ತದೆ. ಹೆಚ್ಚಿನ ಸಸ್ಯ ತೈಲಗಳು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಮತ್ತು ಅವುಗಳನ್ನು ಚರ್ಮ, ಕೂದಲು ಮತ್ತು ಉಗುರುಗಳ ಮೇಲೆ ಬಳಸಬಹುದು.

Last Updated : Dec 6, 2021, 6:57 PM IST

ABOUT THE AUTHOR

...view details