ಕರ್ನಾಟಕ

karnataka

ETV Bharat / sukhibhava

ನೃತ್ಯ ಮಾಡುತ್ತಾ ಆರೋಗ್ಯ ವೃದ್ಧಿಸಿಕೊಳ್ಳಿ: ಇಲ್ಲಿವೆ ಅತ್ಯಮೂಲ್ಯ 5 ಪ್ರಯೋಜನಗಳು..

ನೃತ್ಯ ಮಾಡುವುದರಿಂದ ಸಿಗುವ ಪಂಚ ಆರೋಗ್ಯ ಪ್ರಯೋಜನಗಳು ಹೀಗಿವೆ ನೋಡಿ..

dance for health
ನೃತ್ಯದ ಪ್ರಯೋಜನಗಳು

By

Published : May 1, 2022, 7:20 AM IST

ವ್ಯಾಯಾಮದಂತೆಯೇ ನೃತ್ಯವೂ ನಿಮ್ಮ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಒಳ್ಳೆಯದು. ಇತ್ತೀಚೆಗೆ, ಫ್ರೆಂಚ್ ನರ್ತಕಿ ಮತ್ತು ಆಧುನಿಕ ಬ್ಯಾಲೆ ಮಾಸ್ಟರ್ ಜೀನ್-ಜಾರ್ಜಸ್ ನೊವರ್ರೆ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಏ.29 ರಂದು ಅಂತರರಾಷ್ಟ್ರೀಯ ನೃತ್ಯ ದಿನವನ್ನಾಗಿ ಆಚರಿಸಲಾಯಿತು. ಈ ದಿನವು ಒಂದು ಕಲಾ ಪ್ರಕಾರವಾಗಿ ನೃತ್ಯದ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯನ್ನು ಪ್ರಪಂಚದಾದ್ಯಂತ ಉತ್ತೇಜಿಸುವ ಗುರಿ ಹೊಂದಿದೆ. ನೃತ್ಯವು ಅತ್ಯುತ್ತಮ, ಅತ್ಯಂತ ಆನಂದದಾಯಕ ಫಿಟ್‌ನೆಸ್‌ ವ್ಯಾಯಾಮಗಳಲ್ಲಿ ಒಂದು. ಇದು ದೈಹಿಕ, ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

  • ನಿಮ್ಮ ಶಕ್ತಿ ಮತ್ತು ಸಮತೋಲನವನ್ನು ಸುಧಾರಿಸುತ್ತದೆ: ನೃತ್ಯವು ದೇಹದ ಸ್ಥಿರತೆಯನ್ನು ಹೆಚ್ಚಿಸುತ್ತದೆ ಮತ್ತು ದೈಹಿಕ ಸಾಮರ್ಥ್ಯ ಮತ್ತು ಸಮತೋಲನವನ್ನು ಸುಧಾರಿಸುವಲ್ಲಿ ಬಹಳ ಪರಿಣಾಮಕಾರಿ. ನಿಮ್ಮ ದೇಹವನ್ನು ನಿಯಂತ್ರಿಸಲು ಮತ್ತು ನಿಮ್ಮ ಭಂಗಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಚಿಕ್ಕ ವಯಸ್ಸಿನಿಂದಲೇ ನೃತ್ಯ ಮಾಡಲು ಪ್ರಾರಂಭಿಸಿದರೆ, ನಿಮಗೆ ದೇಹವನ್ನು ಸಮತೋಲನದಲ್ಲಿಡುವುದು ಸಮಸ್ಯೆ ಎನಿಸುವುದಿಲ್ಲ. ವಯಸ್ಸಾದರೂ ಸಾಮಾನ್ಯವಾಗಿ ನಡೆಯಲು ಸಾಧ್ಯವಾಗುತ್ತದೆ.
  • ಒತ್ತಡ ಕಡಿಮೆ ಮಾಡುತ್ತದೆ:ನೃತ್ಯವು ಅದ್ಭುತ ಒತ್ತಡ ನಿವಾರಕ. ನೀವು ಒತ್ತಡ, ಆತಂಕ ಅಥವಾ ಖಿನ್ನತೆಗೆ ಒಳಗಾಗಿದ್ದರೆ ನೃತ್ಯ ಮಾಡಲು ಪ್ರಯತ್ನಿಸಿ. ಇದು ನಿಮ್ಮ ದೇಹವನ್ನು ಸಡಿಲಗೊಳಿಸುತ್ತದೆ ಮತ್ತು ಮನಸ್ಥಿತಿಯನ್ನು ಶಾಂತಗೊಳಿಸುತ್ತದೆ.
  • ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ದೃಢ ಮತ್ತು ಆರೋಗ್ಯಕರ ಹೃದಯವನ್ನು ಪಡೆಯಲು ನೃತ್ಯವು ತುಂಬಾ ಪರಿಣಾಮಕಾರಿ. ಏಕೆಂದರೆ ವೇಗದ ಚಲನೆಗಳು ನಿಮ್ಮ ಹೃದಯ ಬಡಿತವನ್ನು ವೇಗವಾಗಿ ಮಾಡುತ್ತದೆ. ಇದು ನಿಮ್ಮ ಹೃದಯ ಬಡಿತವನ್ನು ಸಮತೋಲನಗೊಳಿಸುವ ಮೂಲಕ ಮತ್ತು ನಿಮ್ಮ ಸಹಿಷ್ಣುತೆಯನ್ನು ಸುಧಾರಿಸಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನೂ ಕಡಿಮೆ ಮಾಡಬಲ್ಲದು.
  • ತೂಕ ಇಳಿಕೆಗೆ ಸಹಕಾರಿ: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಜಿಮ್‌ಗೆ ಹೋಗುವುದನ್ನು ಇಚ್ಚಿಸದಿದ್ದರೆ, ನೃತ್ಯದಿಂದ ನಿಮಗೆ ಪ್ರಯೋಜನವಿದೆ. ಒಂದು ಗಂಟೆಯ ನೃತ್ಯವು ವ್ಯಕ್ತಿಗೆ ಸರಾಸರಿ 300-800 ಕ್ಯಾಲೊರಿಗಳನ್ನು ಸುಡುತ್ತದೆ. ನೃತ್ಯವು ವೇಗದ ಚಲನೆಯನ್ನು ಒಳಗೊಂಡಿರುವುದಷ್ಟೇ ಅಲ್ಲ, ಬೆವರುವಿಕೆಗೆ ಕಾರಣವಾಗುತ್ತದೆ. ಇದರಿಂದ ತೂಕ ನಷ್ಟವಾಗುತ್ತದೆ.
  • ಸ್ಮರಣೆ ಹೆಚ್ಚಿಸುತ್ತದೆ:ನೃತ್ಯವು ನಿಮ್ಮ ಸ್ಮರಣೆಯನ್ನು ಬಲಪಡಿಸುತ್ತದೆ ಮತ್ತು ಜ್ಞಾಪಕ ಶಕ್ತಿ ನಷ್ಟ ಮತ್ತು ಬುದ್ಧಿಮಾಂದ್ಯತೆಯಂತಹ ಮಾನಸಿಕ ಕಾಯಿಲೆಗಳನ್ನೂ ತಡೆಯುತ್ತದೆ. ಒಂದು ರೀತಿಯ ಏರೋಬಿಕ್ ವ್ಯಾಯಾಮವಾಗಿದ್ದು, ಹಿಪೊಕ್ಯಾಂಪಸ್‌ನಲ್ಲಿನ ಪರಿಮಾಣದ ನಷ್ಟವನ್ನು ತಡೆಯುತ್ತದೆ. ಇದು ಮೆಮೊರಿಯನ್ನು ನಿಯಂತ್ರಿಸುವ ಮೆದುಳಿನ ಭಾಗವಾಗಿದೆ.

ABOUT THE AUTHOR

...view details