ಲಂಡನ್: ರಾತ್ರಿ ನಿದ್ದೆ ಸರಿಯಾಗಿ ಆಗಿಲ್ಲ ಎಂದರೆ, ಬೆಳಗ್ಗೆ ಅದರ ಪರಿಣಾಮ ಬೀರುವುದು ಸುಳ್ಳಲ್ಲ. ಇಂತಹ ಪರಿಣಾಮದಿಂದ ತಪ್ಪಿಸಿಕೊಳ್ಳಬೇಕು ಎಂದರೆ, 20 ನಿಮಿಷ ಸುಧಾರಿತ ವ್ಯಾಯಾಮ ಮಾಡಿ. ಇದು ನಿಮ್ಮ ಮೆದುಳಿಗೆ ಚೈತನ್ಯ ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಪೊರ್ಟಮೌತ್ ಯುನಿವರ್ಸಿಟಿ ಸಂಶೋಧಕರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಹೇಗೆ ನಿದ್ದೆ, ಆಮ್ಲಜನಕ ಮಟ್ಟ ಮತ್ತು ವ್ಯಾಯಾಮವೂ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಪರಿಶೀಲನೆ ಮಾಡಿ, ಅದರ ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ.
ಯಾವುದೇ ವ್ಯಕ್ತಿಯ ನಿದ್ದೆ ಅಥವಾ ಆಕ್ಸಿಜನ್ ಮಟ್ಟದ ಸ್ಥಿತಿ ಹೊರತಾಗಿ ಸುಧಾರಿತ ತೀವ್ರತೆಯ ವ್ಯಾಯಾಮಗಳು ಅರಿವಿನ ಪ್ರದರ್ಶನದ ಮೇಲೆ ಉತ್ತಮವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ತಂಡವು ಪತ್ತೆ ಮಾಡಿದೆ. ಈಗಾಗಲೇ ಇರುವ ಅನೇಕ ಸಂಶೋಧನೆಗಳು, ಆಮ್ಲಜನಕದ ಮಟ್ಟ ಕಡಿಮೆಯಾದಾಗ ವ್ಯಾಯಾಮವೂ ಅರಿವಿನ ಪ್ರದರ್ಶನವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ತೋರಿಸಿದೆ.
ಆದರೆ, ಈ ಅಧ್ಯಯನವೂ ಮೊದಲ ಬಾರಿ ನಿದ್ದೆಯ ಭಂಗ ಅಥವಾ ಉತ್ತಮ ನಿದ್ದೆ ಹೊಂದಿಲ್ಲದಾಗಲೂ ವ್ಯಾಯಾಮವು ಮಿದುಳನ್ನು ಸಕ್ರಿಯವಾಗಿಸಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ ಎಂದು ಯುನಿವರ್ಸಿಟಿ ಸ್ಕೂಲ್ ಆಫ್ ಸ್ಪೋರ್ಟ್, ಹೆಲ್ತ್ ಅಂಡ್ ಎಕ್ಸಸೆಸ್ ಸೈನ್ಸ್ನ ಜೋ ಕೊಸ್ಟೆಲ್ಲೊ ತಿಳಿಸಿದ್ದಾರೆ.
ವ್ಯಾಯಾಮಗಳು ಮತ್ತು ಈ ಒತ್ತಡಕಾರಕಗಳ ನಡುವಿನ ಸಂಬಂಧದಲ್ಲಿ ವ್ಯಾಯಾಮಗಳು ದೇಹ ಮತ್ತು ಮೆದುಳಿಗೆ ಔಷಧವಾಗಿ ಕೆಲಸ ಮಾಡುತ್ತದೆ ಎಂಬುದು ಕಂಡು ಬಂದಿದೆ ಎಂದಿದ್ದಾರೆ ಅಧ್ಯಯನಕಾರರು.
ಎರಡು ಗುಂಪಿನಲ್ಲಿ ಅಧ್ಯಯನ: ಸೈಕಲಾಜಿ ಅಂಡ್ ಬಿಹೇವಿಯರ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. 24 ಜನರನ್ನು ಎರಡು ತಂಡವಾಗಿ ರೂಪಿಸಿ ಎರಡು ಪ್ರಯೋಗಗಳನ್ನು ಮಾಡಲಾಗಿದೆ. ಮೊದಲಿಗೆ ಕೊಂಚ ನಿದ್ದೆ ಅಡೆತಡೆ ಹೊಂದಿರುವ ವ್ಯಕ್ತಿಗಳ ಅರಿವಿನ ಪ್ರದರ್ಶನ ಪರಿಣಾಮ ಮತ್ತು ಒಟ್ಟಾರೆ ನಿದ್ದೆ ಅಡೆಗಡೆ ಮತ್ತು ಹೈಪೋಕ್ಸಿಯಾ ಹೊಂದಿರುವರಲ್ಲಿ ಈ ಪರಿಣಾಮವನ್ನು ಗುರುತಿಸಲಾಗಿದೆ.