ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಈ ನಡುವೆ ಡೆಂಘೀ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಪ್ರಕರಣಗಳ ಏರಿಕೆ ಕಂಡಿದ್ದು, ಕಳೆದ 11 ದಿನಗಳಲ್ಲಿ ಒಟ್ಟು 178 ಹೊಸ ಪ್ರಕರಣಗಳು ವರದಿಯಾಗಿದೆ. ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಜನರು ಈ ಬಗ್ಗೆ ಎಚ್ಚರಿಕೆವಹಿಸುವಂತೆ ಸೂಚಿಸಿದೆ. ನಿಂತ ನೀರಿನಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿ ಹೆಚ್ಚುವ ಹಿನ್ನೆಲೆಯಲ್ಲಿ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ ಎಂದಿದ್ದಾರೆ.
ಹೀಗಿದೆ ಅಂಕಿ - ಅಂಶ: ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಬೃಹತ್ ಬೆಂಗಳೂರು ಮಹಾನಗಗರ ಪಾಲಿಕೆಯಲ್ಲಿ ಮಿತಿಯಲ್ಲಿ ಒಟ್ಟಾರೆ 3,565 ವ್ಯಕ್ತಿಗಳಲ್ಲಿ ಡೆಂಘೀ ಸಂಬಂಧಿತ ಲಕ್ಷಣಗಳು ಅಭಿವೃದ್ಧಿಕೊಂಡಿದ್ದು, 1,009 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕರ್ನಾಟಕದಲ್ಲಿ 900 ಡೆಂಘೀ ಪ್ರಕರಣಗಳು ದೃಢ ಪಟ್ಟಿದೆ. ಬೆಂಗಳೂರಿನಲ್ಲಿ ಇದುವರೆಗೆ 919 ಪ್ರಕರಣಗಳು ವರದಿಯಾಗಿದೆ. ಆದಾಗ್ಯೂ, ಡೆಂಘೀ ಸಂಬಂಧಿತ ಗಂಭೀರತೆ ವರದಿಯಾಗಿದೆ. 2022ರಲ್ಲಿ, ಬಿಬಿಎಂಪಿಯಲ್ಲಿ 585 ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ ಎಂದು ವರದಿ ತಿಳಿಸಿತು.
ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ವೈದ್ಯರಾದ ಡಾ ಶೀಲಾ ಮುರಳಿ ಚಕ್ರವರ್ತಿ ಈ ಕುರಿತು ಮಾತನಾಡಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿ ಹೆಚ್ಚುತ್ತದೆ. ಈ ಹಿನ್ನಲೆ ಸುತ್ತಮುತ್ತಲಿನ ಪರಿಸರ ಶುದ್ಧತೆ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಬಹುತೇಕ ಡೆಂಘೀ ಪ್ರಕರಣಗಳು ಸಂಕೀರ್ಣವಾಗಿದೆ. ಆದರೆ, ಈ ಪ್ರಕರಣಗಳು ತಡೆಗಟ್ಟಬಹುದಾಗಿದ್ದು, ಚಿಕಿತ್ಸೆ ನೀಡಬಹುದಾಗಿದೆ ಎಂದಿದ್ದಾರೆ.