ನವದೆಹಲಿ: ಭಾರತದಲ್ಲಿ ಕಂಡು ಬರುವ ಶೇ 15 ರಿಂದ 20ರಷ್ಟು ಬೆನ್ನುಮೂಳೆ ಮುರಿತ ಪ್ರಕರಣಗಳು ರಸ್ತೆ ಅಪಘಾತದಿಂದ ಸಂಭವಿಸುತ್ತವೆ. ಇದನ್ನು ಕನಿಷ್ಠ ಆಕ್ರಮಣಶೀಲ ಶಸ್ತ್ರ ಚಿಕಿತ್ಸೆಗಳ ಮೂಲಕ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು ಎಂದು ಮೂಳೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ವಿಶ್ವ ಬೆನ್ನು ಮೂಳೆ ಮುರಿತ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಆಚರಿಸಲಾಗುತ್ತದೆ. ಈ ಮೂಲಕ ಬೆನ್ನು ಮೂಳೆ ಮುರಿತದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಫರೀದಾಬಾದ್ನ ಸರ್ವೋದಯ ಆಸ್ಪತ್ರೆಯ ಮೂಳೆ ಮತ್ತು ಬೆನ್ನುಹುರಿ ತಜ್ಞ ಡಾ ಅಶೀಶ್ ಥೋಮರ್ ಮಾತನಾಡಿ, ರಸ್ತೆ ಅಪಘಾತದಿಂದ ಗಂಭೀರ ಬೆನ್ನುಹುರಿ ಸಮಸ್ಯೆ ಮತ್ತು ಇದಕ್ಕೆ ಸಂಬಂಧಿಸಿದ ಅನೇಕ ಗಾಯಗಳಿಗೆ ಒಳಗಾಗುತ್ತಿರುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಟ್ರಾಮ ಮತ್ತು ಬೆನ್ನು ಹುರಿ ಗಾಯ ಸಂಬಂಧ ಅನೇಕ ರೋಗಿಗಳು ಇಂದು ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಿರುವುದು. ವಾಹನಗಳ ನಿರ್ಮಾಣದಲ್ಲಿ ಸುರಕ್ಷತಾ ಮಟ್ಟ ಕಡಿಮೆ, ಅಸಮರ್ಪಕತೆ ಮತ್ತು ಕಳಪೆ ರಸ್ತೆಗಳು ಮತ್ತು ಚಾಲನೆಯ ಗುಣಮಟ್ಟದಲ್ಲಿನ ಸಮಸ್ಯೆಗಳು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ 10 ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಬೆನ್ನು ಹುರಿ ಮೂಳೆ ಸಮಸ್ಯೆಗೆ ಒಳಗಾಗುವ ಸಂಖ್ಯೆ ಶೇ 15ರಿಂದ 20ರಷ್ಟು ಹೆಚ್ಚಾಗಿದೆ. ಶೇ 90ರಷ್ಟು ಬೆನ್ನು ಹುರಿ ಮೂಳೆ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ, ಕನಿಷ್ಠ ಅಕ್ರಮಣಶೀಲ ಶಸ್ತ್ರ ಚಿಕಿತ್ಸೆ ಮೂಲಕ ನಿರ್ವಹಿಸಬಹುದಾಗಿದೆ. ಬೆನ್ನು ಮೂಳೆ ಶಸ್ತ್ರಚಿಕಿತ್ಸೆಗಳು ಸುರಕ್ಷಿತವಾಗಿದ್ದು, ಸಾಮಾನ್ಯ ಅಪಾಯವನ್ನು ಹೊಂದಿದೆ. ಆದಾಗ್ಯೂ ಅನೇಕ ರೋಗಿಗಳು ಹಲವು ವರ್ಷಗಳ ಕಾಲ ಈ ಬೆನ್ನು ಮೂಳೆ ಶಸ್ತ್ರಚಿಕಿತ್ಸೆಯಿಂದ ಬಳಲುತ್ತಾರೆ. ಮತ್ತೆ ಕೆಲವರು ಈ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸುತ್ತಾರೆ. ಕೆಲವರ ಬೆನ್ನು ಮೂಳೆ ಸಮಸ್ಯೆ ಉಲ್ಬಣಕ್ಕೆ ಕಾರಣ, ರೋಗಿಗಳು ಹಲವು ವರ್ಷಗಳ ಕಾಲ ತಮ್ಮ ಈ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆಯಲು ಮುಂದಾಗದಿರುವುದು ಎಂದಿದ್ದಾರೆ.
ಬೆನ್ನು ಮೂಳೆ ಸಮಸ್ಯೆಗಳು ಕನಿಷ್ಠ ಆಕ್ರಮಣಶೀಲ ಶಸ್ತ್ರ ಚಿಕಿತ್ಸೆಗಳಿಂದ ಶೇ 15ರಿಂದ 20 ವರ್ಷ ಜಾಗತಿಕ ಮತ್ತು ಭಾರತದಲ್ಲಿ ನಿರ್ವಹಣೆ ಮಾಡಬಹುದಾಗಿದೆ.