ನವದೆಹಲಿ:ನೀವು ನಿಮ್ಮ ಹಾಸಿಗೆ ಸಿದ್ಧಪಡಿಸುವುದು ನಿಮ್ಮನ್ನು ನೀವು ಡ್ರೆಸ್ ಮಾಡಿಕೊಂಡಷ್ಟೇ ಮುಖ್ಯವಾಗಿದೆ. ಹಾಸಿಗೆ ಎಂಬುದು ನಿಮ್ಮ ಪವಿತ್ರವಾದ ಸ್ಥಳವಾಗಿದ್ದು, ಇದು ಆದಷ್ಟೂ ನಿಮ್ಮನ್ನು ಸಂರಕ್ಷಿಸುತ್ತದೆ. ಇದು ನಿಮಗೆ ಆರಾಮ ಮತ್ತು ಹಿತಕರವಾದ ಅನುಭವವನ್ನು ನೀಡುತ್ತದೆ. ಹಾಸಿಗೆ ಎಂಬುದು ಸ್ವರ್ಗ ಎಂದರೆ ತಪ್ಪಾಗಲಾರದೇನೋ!
ಬೆಡ್ರೂಮ್ ಒಳಗಡೆ ಹೋದ ತಕ್ಷಣ ಯಾರೇ ಆದರೂ ಮೊದಲು ನೋಡುವುದೇ ಬೆಡ್ರೂಮ್. ಅಂಕಿ - ಅಂಶಗಳ ಪ್ರಕಾರ, ನೀವು ವರ್ಷವೊಂದಕ್ಕೆ 3000 ಗಂಟೆಗಳಷ್ಟು ಸಮಯವನ್ನು ಹಾಸಿಗೆಯಲ್ಲಿ ಕಳೆಯುತ್ತೀರಿ ಎಂದರೆ ನಿಮಗೆ ನಂಬಿಕೆಯಾಗುತ್ತದೆಯಾ? ಹೌದು.. ಇದು ಸತ್ಯ.
ಹಾಸಿಗೆ ಎಂಬುದು ನಿಮ್ಮ ಮನೆಯ ಅತ್ಯಂತ ಪ್ರಮುಖ ವಿಷಯವಾಗಿದೆ. ಏಕೆಂದರೆ ಇದರ ಮೇಲೆಯೇ ನೀವು ನಿಮ್ಮ ಬಹುತೇಕ ಸಮಯವನ್ನು ಕಳೆಯುತ್ತೀರಿ. ಹಾಗಾಗಿ ಆರಾಮ ನೀಡುವಂಥ ಬೆಡ್ ಮನೆಯಲ್ಲಿ ಇರುವುದು ಬಹಳ ಅಗತ್ಯ. ಸುದೀರ್ಘ ಕೆಲಸದ ದಿನದ ನಂತರ ಮನೆಗೆ ಮರಳಿದಾಗ ನಿಮ್ಮ ಹಾಸಿಗೆ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಶಾಂತವಾಗಿರಿಸುತ್ತದೆ. ಆರಾಮದಾಯಕ ಮತ್ತು ಐಷಾರಾಮಿ ಬೆಡ್ ಲಿನಿನ್ಗಳು ಇದಕ್ಕಾಗಿ ಸೂಕ್ತವಾಗಿವೆ.
ನಿಮ್ಮ ಬೆಡ್ ರೂಮ್ ಅನ್ನು ಮತ್ತಷ್ಟು ಆರಾಮದಾಯಕವಾಗಿಸಲು ಮತ್ತು ಸುಂದರವಾಗಿಸಲು ಇಲ್ಲಿವೆ ಕೆಲ ಟಿಪ್ಸ್.
ಹಾಸಿಗೆ ಎಂಬುದು ಮುಖ್ಯ ವಿಷಯ: ಉತ್ತಮ ಗುಣಮಟ್ಟದ ಹಾಸಿಗೆಯನ್ನು ಖರೀದಿಸುವಾಗ ಬೇರೆ ಯೋಚನೆ ಮಾಡಬೇಡಿ. ಹಾಸಿಗೆಯು ಎಷ್ಟು ಆರಾಮದಾಯಕವಾಗಿದೆ ಎಂಬುದರ ಜೊತೆಗೆ ಅದು ಹೇಗೆ ಕಾಣಿಸುತ್ತದೆ ಎಂಬುದು ಸಹ ಮುಖ್ಯವಾಗುತ್ತದೆ. ಶೇ 100ರಷ್ಟು ಹತ್ತಿಯಿಂದ ಮಾಡಿದ ಹಾಸಿಗೆಗಳನ್ನೇ ಖರೀದಿಸುವಂತೆ ತಜ್ಞರು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ಸಾಕಷ್ಟು ಗಾಳಿಯಾಡುವಂತಿದ್ದು, ಸಿಂಥೆಟಿಕ್ ಫೈಬರ್ ಹಾಸಿಗೆಗಳಿಗೆ ಹೋಲಿಸಿದರೆ ಹೆಚ್ಚು ಆರಾಮದಾಯಕವಾಗಿರುತ್ತದೆ.
ದಿಂಬುಗಳನ್ನು ಮರೆಯದಿರಿ:ರಾತ್ರಿಯ ಉತ್ತಮವಾದ ನಿದ್ರೆಯು ದಿಂಬುಗಳನ್ನೇ ಅವಲಂಬಿಸಿದೆ. ಸರಿಹೊಂದದ ದಿಂಬುಗಳನ್ನಿಟ್ಟುಕೊಂಡು ಬೆಳಗ್ಗೆ ಕುತ್ತಿಗೆ ನೋವು ಮಾಡಿಕೊಂಡರೆ ಯಾವುದೇ ಪ್ರಯೋಜನವಿಲ್ಲ. ಉತ್ತಮ ಗುಣಮಟ್ಟದ ಹಾಗೂ ಸುಂದರವಾಗಿರುವ ದಿಂಬುಗಳನ್ನೇ ಕೊಳ್ಳುವುದು ಉತ್ತಮ.
ಉತ್ತಮ ಡ್ಯುವೆಟ್ಸ್ ಖರೀದಿಸಿ: ಅತ್ಯುತ್ತಮ ಡ್ಯುವೆಟ್ಸ್ಗಳನ್ನು ಖರೀದಿಸುವುದು ಅಗತ್ಯ. ಆದರೆ, ಇವು ನಿಮಗೆ ಯಾವಾಗಲೂ ಅಗ್ಗದ ದರದಲ್ಲಿ ಸಿಗುವುದಿಲ್ಲ ಎಂಬುದು ಗೊತ್ತಿರಲಿ. ಹಾಗಾಗಿ ರಿವರ್ಸಿಬಲ್ ಡ್ಯುವೆಟ್ಸ್ ತರುವುದು ಉತ್ತಮ ಆಯ್ಕೆಯಾಗಿದೆ.