ಯಾದಗಿರಿ:ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈದು ಸುಟ್ಟು ಹಾಕಲು ಯತ್ನಿಸಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಬೂದನೂರು ಗ್ರಾಮದ ಹೊರವಲಯದಲ್ಲಿನ ಕಾಲುವೆ ಬಳಿ ನಡೆದಿದೆ.
ಯಾದಗಿರಿಯಲ್ಲಿ ಯುವಕನ ಬರ್ಬರ ಕೊಲೆ ಸುರಪುರ ತಾಲೂಕಿನ ನಗನೂರು ಗ್ರಾಮದ ನಿವಾಸಿ ನಾಗೇಶ್ ಶಿವಮಾನಪ್ಪ ಕಟ್ಟಿಮನಿ (26) ಕೊಲೆಯಾದ ದುರ್ದೈವಿ. ಎಂದಿನಂತೆ ಲೀಸಿಗೆ ಹಾಕಿಕೊಂಡಿರುವ ಜಮೀನಿಗೆ ನೀರು ಬಿಡಲು ಹೋಗಿದ್ದ ವೇಳೆ ಘಟನೆ ನಡೆದಿದ್ದು, ಆಸ್ತಿ ವಿವಾದಕ್ಕೋ ಅಥವಾ ಹಳೆ ವೈಷಮ್ಯದಿಂದ ಯುವಕನ ಕೊಲೆ ಆಗಿದೆಯಾ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ.
ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ಡಾ.ದೇವರಾಜ್ ಭೇಟಿ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಸಿಪಿಐ ಚೆನ್ನಯ್ಯ ಹಿರೇಮಠ್ ನೇತೃತ್ವದಲ್ಲಿ ತಂಡಗಳ ರಚನೆ ಮಾಡಿದ್ದಾರೆ. ಘಟನಾ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಶಹಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಚೆಂಡು ತರಲು ಹೋಗಿ ಹೊಂಡಕ್ಕೆ ಬಿದ್ದ ಬಾಲಕ... ರಕ್ಷಿಸಲು ಹೋದ ಇನ್ನಿಬರು ಸಾವು