ಸುರಪುರ:ಗ್ರಾಮದ 70ಕ್ಕೂ ಹೆಚ್ಚಿನ ಯುವಕರು ಸಮೀಪದ ಕೃಷ್ಣಾ ನದಿಗೆ ಹೋಗಿ ಸ್ನಾನ ಮಾಡಿ ನದಿಯಿಂದ ನೀರು ತಂದು ಗ್ರಾಮದಲ್ಲಿನ ಎಲ್ಲಾ ದೇವರಿಗೆ ಗಂಗಾ ಸ್ನಾನ ಮಾಡಿಸಿ ಕೊರೊನಾ ವೈರಸ್ ನಿರ್ಮೂಲನೆಯಾಗಲೆಂದು ಪ್ರಾರ್ಥಿಸಿದರು.
ಸುರಪುರ: ದೇವರಿಗೆ ನೀರೆರೆದು ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿದ ಯುವಕರು! - ಗ್ರಾಮದಲ್ಲಿನ ದೇವರಿಗೆ ಹರಕೆ ಹೊತ್ತು ಪ್ರಾರ್ಥನೆ
ಬೇವಿನಾಳ ಎಸ್.ಹೆಚ್. ಗ್ರಾಮದ ಯುವಕರು ಜಗತ್ತಿನಲ್ಲಿ ರಣ ಕೇಕೆ ಹಾಕುತ್ತಿರುವ ಕೊರೊನಾ ವೈರಸ್ ನಾಶವಾಗಲೆಂದು ಗ್ರಾಮದಲ್ಲಿನ ದೇವರಿಗೆ ಹರಕೆ ಹೊತ್ತು ಪ್ರಾರ್ಥಿಸಿದ್ದಾರೆ.

ದೇವರಿಗೆ ನೀರೆರೆದು ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿದ ಯುವಕರು..
ಭಾರತ ದೇಶ ವಿವಿಧ ಸಂಸ್ಕೃತಿ ಮತ್ತು ಆಚರಣೆಯುಳ್ಳ ದೇಶವಾಗಿದ್ದು, ಕೊರೊನಾ ನಿರ್ಮೂಲನೆಗೆ ಒಂದೆಡೆ ವೈದ್ಯಕೀಯ ಲೋಕ ಔಷಧಿ ಕಂಡು ಹಿಡಿಯುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಜನರು ದೇವರ ಮೊರೆ ಹೋಗಿ ಹರಕೆ ಸಲ್ಲಿಸುವುದು, ಹೋಮ ಹವನ ಪೂಜೆಗಳ ಮೂಲಕ ಪ್ರಾರ್ಥಿಸುತ್ತಿದ್ದಾರೆ.