ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೊರಬಂಡಾದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಯಜುರ್ವೇದ ಮಹಾಯಜ್ಞ ಕಾರ್ಯಕ್ರಮಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಚಾಲನೆ ನೀಡಿದರು.
ಬೋರಬಂಡಾ ಗ್ರಾಮದ ಹೊರವಲಯದಲ್ಲಿರುವ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಮಹಾಯಜ್ಞ ಕಾರ್ಯಕ್ಕೆ ಚಾಲನೆ ನೀಡಿ, ಬಳಿಕ ಮಾತನಾಡಿದ ರಾಮದೇವ್, ಜಾತಿ ಬೇಧ - ಭಾವ ಮಾಡದೇ ಪ್ರತಿಯೊಬ್ಬರೂ ಸಮಾನರಾಗಿ ಬದುಕು ಸಾಗಿಸಬೇಕು. ಯಾವುದೇ ಜಾತಿ ತಾರತಮ್ಯವಿಲ್ಲ. ಎಲ್ಲರೂ ಸಮಾಜದಲ್ಲಿ ಸಮಾನರು. ಬಂಜಾರ ಸಮಾಜ ದೇಶದ ಮೂಲ ಸಮಾಜವಾಗಿದೆ ಎಂದರು.