ಕರ್ನಾಟಕ

karnataka

ETV Bharat / state

ರಾಯಚೂರು, ಯಾದಗಿರಿಯಲ್ಲಿ ಯಶ್​ ಹುಟ್ಟುಹಬ್ಬ ಆಚರಣೆ: ಬಾಸ್​ ಕಟೌಟ್​ಗೆ ಕ್ಷೀರಾಭಿಷೇಕ - ಕರ್ನಾಟಕ ರಕ್ಷಣಾ ಸೇನೆ ಹಾಗೂ ಯಶ್ ಅಭಿಮಾನಿ ಸಂಘ

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಯಶ್​ ಅಭಿಮಾನಿಗಳು ಯಶ್​ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಕೇಕ್​ ಕತ್ತರಿಸಿ ಪರಸ್ಪರ ಸಿಹಿ ಹಂಚಿ ನೆಚ್ಚಿನ ನಟನಿಗೆ ಶುಭಾಶಯ ಕೋರಿದರು.

Yash Birthday Celebration
ಯಶ್​ ಹುಟ್ಟುಹಬ್ಬ ಆಚರಣೆ

By

Published : Jan 8, 2020, 7:50 PM IST

ರಾಯಚೂರು/ಯಾದಗಿರಿ: ಕರ್ನಾಟಕ ರಕ್ಷಣಾ ಸೇನೆ ಹಾಗೂ ಯಶ್ ಅಭಿಮಾನಿ ಸಂಘದಿಂದ ಇಂದು ರಾಕಿಂಗ್​ ಸ್ಟಾರ್ ಯಶ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ನಗರದ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಅಭಿಮಾನಿಗಳು‌ ಕೇಕ್ ಕತ್ತರಿಸಿ ಪರಸ್ಪರ ಸಿಹಿ‌ ಹಂಚುವ ಮೂಲಕ ನೆಚ್ಚಿನ ನಟನ ಜನ್ಮದಿನ ಆಚರಿಸಿದರು. ಡಾ.ರಾಜ್ ಕುಮಾರ್ ಅವರ ಬಳಿಕ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಲು ಯಶ್ ಅವರು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಯಶೋಮಾರ್ಗದ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನಾರ್ಹ. ಹೀಗೆ ಅವರು ಎತ್ತರಕ್ಕೆ ಬೆಳೆಯುವ ಮೂಲಕ ಸ್ಯಾಂಡಲ್‌ವುಡ್ ಬೆಳೆಸಲಿ ಎಂದು ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಸಾದಿಕ್ ಖಾನ್ ಹಾಗೂ ಅಭಿಮಾನಿಗಳು ಶುಭ ಹಾರೈಸಿದರು.

ಯಶ್​ ಹುಟ್ಟುಹಬ್ಬ ಆಚರಣೆ

ಇನ್ನು ಯಾದಗಿರಿಯಲ್ಲೂ ಯಶ್​ ಅಭಿಮಾನಿಗಳು ಯಶ್ ಭಾವಚಿತ್ರದ ಪೋಸ್ಟರ್​ಗೆ ಕ್ಷೀರಾಭಿಷೇಕ ಮಾಡುವ ಮೂಲಕ ಅಭಿಮಾನ ಮೆರೆದರು. ಅಷ್ಟೇ ಅಲ್ಲದೆ, ಕೇಕ್​ ಕತ್ತರಿಸಿ ಯಶ್​ ಪರ ಜಯಘೋಷ ಕೂಗಿದರು.

ABOUT THE AUTHOR

...view details