ಯಾದಗಿರಿ: ಮಹಾರಾಷ್ಟ್ರದಿಂದ ರೈಲು ಮೂಲಕ ಆಗಮಿಸಿದ ಪ್ರಯಾಣಿಕನೋರ್ವ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಆವಾಜ್ ಹಾಕಿರುವ ಘಟನೆ ಯಾದಗಿರಿ ನಗರದ ರೈಲು ನಿಲ್ದಾಣದಲ್ಲಿ ನಡೆದಿದೆ.
ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಪ್ರಯಾಣಿಕರ ಕಿರಿಕ್ ಆರೋಪ: ಯಾದಗಿರಿಯಲ್ಲಿ ಹೆಚ್ಚಿದ ಆತಂಕ - yadgiri covid test news
ಮುಂಬೈನಿಂದ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಮೂಲಕ ಕುಟುಂಬಸ್ಥರೊಂದಿಗೆ ಯಾದಗಿರಿ ನಗರಕ್ಕೆ ಆಗಮಿಸಿದ ವ್ಯಕ್ತಿಯೋರ್ವ ಆರೋಗ್ಯ ಇಲಾಖೆಯ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ. ಆತ ಸೇರಿ ಹಲವರು ಕೋವಿಡ್ ಪರೀಕ್ಷೆಗೆ ಒಳಪಡದೆ ನಗರಕ್ಕೆ ಬಂದಿದ್ದು, ಕೊರೊನಾ ಭೀತಿ ಮತ್ತಷ್ಟು ಹೆಚ್ಚಿದೆ.

ಮುಂಬೈನಿಂದ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಮೂಲಕ ಕುಟುಂಬಸ್ಥರೊಂದಿಗೆ ಯಾದಗಿರಿ ನಗರಕ್ಕೆ ಆಗಮಿಸಿದ ವ್ಯಕ್ತಿಯೋರ್ವ ಆರೋಗ್ಯ ಇಲಾಖೆಯ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ. ಹೊರ ರಾಜ್ಯದಿಂದ ಬಂದ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಲು ಮುಂದಾದ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿ ಕೋವಿಡ್ ಪರೀಕ್ಷೆಗೆ ಒಳಪಡದೆ ರೈಲ್ವೆ ನಿಲ್ದಾಣದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ. ರೈಲು ನಿಲ್ದಾಣದಿಂದ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೆ ರೈಲು ನಿಲ್ದಾಣದಿಂದ ಹೊರ ನುಗ್ಗಿದ ಆ ವ್ಯಕ್ತಿಯ ಜೊತೆ ನೂರಾರು ಪ್ರಯಾಣಿಕರು ಸಹ ಟೆಸ್ಟ್ ಮಾಡಿಸಿಕೊಳ್ಳದೆ ನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊರೊನಾ ಪ್ರಕರಣಗಳು ಹೆಚ್ಚಿರುವ ಮಹಾರಾಷ್ಟ್ರದಿಂದ ಆಗಮಿಸಿದ ನೂರಾರು ಪ್ರಯಾಣಿಕರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದೆ ನಗರಕ್ಕೆ ನುಗ್ಗಿದ್ದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಕೋವಿಡ್ ಪ್ರಕರಣಗಳು ಹೆಚ್ಚಾಗುವ ಆತಂಕ ಎದುರಾಗಿದೆ.