ಯಾದಗಿರಿ: ನನ್ನ ಹೆಸರನ್ನು ಬಳಕೆ ಮಾಡುಕೊಂಡು ರಾಯಚೂರಿನ ರೇಖಾ ಎಂ.ಎನ್. ಎಂಬ ಮಹಿಳೆ ನೌಕರಿ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸಿದ್ದಾರೆ. ಹಲವು ಜನರ ಬಳಿ ಹಣ ಪಡೆದಿರುವ ಸಾಧ್ಯತೆಯಿದೆ. ನನ್ನ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆದಿದೆ. ನನಗೆ ರೇಖಾ ಎಂಬ ಮಹಿಳೆಯ ಪರಿಚಯವಿಲ್ಲ ಎಂದು ಶಾಸಕ ರಾಜೂಗೌಡ ಸುರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೆಸರು ದುರ್ಬಳಕೆ ಮಾಡಿದ ಮಹಿಳೆ ವಿರುದ್ಧ ದೂರು ದಾಖಲಿಸಿದ ಶಾಸಕ ರಾಜೂಗೌಡ - ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚನೆ
ಶಾಸಕ ರಾಜೂಗೌಡ ಸುರಪುರ ಹೆಸರನ್ನು ಬಳಸಿಕೊಂಡು ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರು ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಶಾಸಕರೇ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.
ಶಾಸಕ ರಾಜೂಗೌಡ
ನನ್ನ ಪರಿಚಯವಿದೆ ಎಂದು ಹೇಳುವವರ ಬಗ್ಗೆ ಜನರು ಜಾಗ್ರತೆ ವಹಿಸಬೇಕು. ಯಾರೂ ವಂಚನೆಗೆ ಒಳಗಾಗಬೇಡಿ. ಮಾಧ್ಯಮಗಳು ಕೂಡ ನನ್ನ ಬಗ್ಗೆ ವರದಿ ಮಾಡುವ ಮುನ್ನ ನನ್ನನ್ನು ಸಂಪರ್ಕಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ರಾಜೂಗೌಡ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಹುಡುಗಿಯರಿಬ್ಬರ ಸಂಬಂಧಕ್ಕೆ ಕುಟುಂಬದಿಂದ ವಿರೋಧ.. ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಗಾತಿಗಳು!