ಯಾದಗಿರಿ: ಕುಡಿದ ಮತ್ತಿನಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ ಕಾಮುಕನನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿ ಧರ್ಮದೇೆಟು ನೀಡಿರುವ ಘಟನೆ ಜಿಲ್ಲೆಯ ಶಹಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೋರನಹಳ್ಳಿ ಗ್ರಾಮದ ಮಹಿಳೆಯೋರ್ವರ ಮನೆಗೆ ಅದೇ ಗ್ರಾಮದ ಜೀಲಾ ನಿಸಾಬ್ ಎಂಬಾತ ನುಗ್ಗಿದ್ದಾನೆ. ಗಾಬರಿಗೊಂಡ ಮಹಿಳೆ ಚೀರಾಡಲು ಆರಂಭಿಸಿದ್ದಾಳೆ. ಮಹಿಳೆ ಚೀರಾಟ ಕೇಳಿಸಿಕೊಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕಾಮುಕ ಜೀಲಾನಿಯನ್ನ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.