ಯಾದಗಿರಿ: ಮಾಸ್ಕ್ ಧರಿಸದ ಹಾಗೂ ಕೊರೊನಾ ನಿಯಮ ಪಾಲಿಸದ ಚುನಾವಣೆ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಗರಂ ಆಗಿದ್ದಾರೆ.
ಕೋವಿಡ್ ನಿಯಮ ಉಲ್ಲಂಘನೆ: ಚುನಾವಣಾ ಅಧಿಕಾರಿಗಳ ವಿರುದ್ಧ ಯಾದಗಿರಿ ಡಿಸಿ ಗರಂ - ಮಾಸ್ಕ್ ಧರಿಸದವರಿಗೆ ದಂಡ
ಮಾಸ್ಕ್ ಧರಿಸದೆ ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗಡೆ ನಿಂತವರಿಗೆ ದಂಡ ಹಾಕುವಂತೆ ಡಿಸಿ ರಾಗಪ್ರಿಯ ಖಡಕ್ ಸೂಚನೆ ನೀಡಿದ್ದಾರೆ.
ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ ನಗರ ಸಭೆ ಅಧಿಕಾರಿಗಳು ಹಾಗೂ ಪೊಲೀಸರು
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗಡೆ ನಿಂತವರಿಗೆ ದಂಡ ಹಾಕುವಂತೆ ಡಿಸಿ ಖಡಕ್ ಸೂಚನೆ ನೀಡಿದರು.
ಮಾಸ್ಕ್ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳಿಗೆ ಮತ್ತು ಬೆಂಬಲಿಗರಿಗೆ ನಗರ ಸಭೆ ಅಧಿಕಾರಿಗಳು ಹಾಗೂ ಪೊಲೀಸರು ದಂಡ ವಿಧಿಸಿದ್ದಾರೆ.